Vande Mataram: ‘ವಂದೇ ಮಾತರಂ’ ಗೀತೆಯಲ್ಲಿ ಕನ್ನಡದ ನಟರು; ಬೇರೆ ಸಾಧಕರಿಗೆ ಜಾಗವಿಲ್ಲವೇ ಎಂದು ಪ್ರಶ್ನಿಸಿದ ಜನರು

Vande Mataram Sandalwood Song: ವಿಜಯ್​ ಪ್ರಕಾಶ್​ ಹಾಡಿದ ಈ ಗೀತೆಯಲ್ಲಿ ಕನ್ನಡದ ಹಲವು ನಟರು ಕಾಣಿಸಿಕೊಂಡಿದ್ದಾರೆ. ನಟಿಯರು ಹಾಗೂ ಬೇರೆ ಕ್ಷೇತ್ರದ ಸಾಧಕರು ಇದರಲ್ಲಿ ಯಾಕೆ ಕಾಣಿಸಿಲ್ಲ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

Vande Mataram: ‘ವಂದೇ ಮಾತರಂ’ ಗೀತೆಯಲ್ಲಿ ಕನ್ನಡದ ನಟರು; ಬೇರೆ ಸಾಧಕರಿಗೆ ಜಾಗವಿಲ್ಲವೇ ಎಂದು ಪ್ರಶ್ನಿಸಿದ ಜನರು
‘ವಂದೇ ಮಾತರಂ’ ಗೀತೆಯಲ್ಲಿ ಕನ್ನಡದ ನಟರು
Edited By:

Updated on: Aug 15, 2022 | 7:31 AM

ಎಲ್ಲೆಲ್ಲೂ ಸ್ವಾತಂತ್ರೋತ್ಸವದ (Independence Day) ಕಳೆ ಹಬ್ಬಿದೆ. ಇಂದು (ಆಗಸ್ಟ್​ 15) 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ತ್ರಿವರ್ಣ ಧ್ವಜ ಹಾರಿಸಿ ದೇಶಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸುವ ಕಾರ್ಯ ಆಗುತ್ತಿದೆ. ಎಲ್ಲ ಕ್ಷೇತ್ರದ ಜನರ ರೀತಿ ಕನ್ನಡ ಚಿತ್ರರಂಗದ (Sandalwood) ಸೆಲೆಬ್ರಿಟಿಗಳು ಕೂಡ ಸ್ವಾತಂತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಅದು ಕೂಡ ಒಂದು ವಿಶೇಷ ಗೀತೆ ಮೂಲಕ. ಹೌದು, ‘ವಂದೇ ಮಾತರಂ’ (Vande Mataram) ಹಾಡಿನಲ್ಲಿ ಸ್ಯಾಂಡಲ್​ವುಡ್​ ನಟರು ಒಂದಾಗಿದ್ದಾರೆ. ಈ ಗೀತೆಗೆ ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಧ್ವನಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್​ ಖಾತೆ ಮೂಲಕ ಇದನ್ನು ಶೇರ್​ ಮಾಡಿಕೊಳ್ಳಲಾಗಿದೆ. ಆ ಮೂಲಕ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಲಾಗಿದೆ.

ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​, ಜಗ್ಗೇಶ್​, ರಮೇಶ್​ ಅರವಿಂದ್​, ಅನಂತ್​ ನಾಗ್​, ಧ್ರುವ ಸರ್ಜಾ, ಶ್ರೀಮುರಳಿ, ರಿಷಬ್​ ಶೆಟ್ಟಿ, ರವಿಚಂದ್ರನ್​, ಗಣೇಶ್​, ಧನಂಜಯ, ಅಜಯ್​ ರಾವ್​ ಮುಂತಾದ ಸ್ಟಾರ್​ ನಟರು ‘ವಂದೇ ಮಾತರಂ’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲುಮರದ ತಿಮ್ಮಕ್ಕ, ವೆಂಕಟೇಶ್​ ಪ್ರಸಾದ್​, ಎಸ್​.ಎಲ್​. ಬೈರಪ್ಪ ಮುಂತಾದವರು ಕೂಡ ಇದ್ದಾರೆ. ಇನ್ನೂ ಅನೇಕ ಸೆಲೆಬ್ರಿಟಿಗಳು ಮತ್ತು ಸಾಧಕರು ಇದರಲ್ಲಿ ಯಾಕೆ ಕಾಣಿಸಿಲ್ಲ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ
Har Ghar Tiranga: ಚಿತ್ರಮಂದಿರದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ‘ಗೋಲ್ಡನ್​ ಸ್ಟಾರ್​’ ಗಣೇಶ್​
Aamir Khan: ಆಮಿ​ರ್​ ಖಾನ್​ ಮನೆ ಮೇಲೆ ಹಾರಾಡಿದ ರಾಷ್ಟ್ರ ಧ್ವಜ; ಫೋಟೋ ವೈರಲ್​
ಸುದೀಪ್​, ಉಪ್ಪಿ, ತಾರಾ, ರಮೇಶ್​ ಮನೆ ಮೇಲೆ ತ್ರಿವರ್ಣ ಧ್ವಜ; ಇಲ್ಲಿದೆ ಫೋಟೋ ಗ್ಯಾಲರಿ
‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಯಶ್ ಸಾಥ್​; ಫ್ಯಾನ್ಸ್ ಬಳಿ ರಾಕಿಂಗ್ ಸ್ಟಾರ್ ಹೊಸ ಕೋರಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲೂ ಈ ಗೀತೆಯನ್ನು ಶೇರ್​ ಮಾಡಿಕೊಳ್ಳಲಾಗಿದೆ. ‘ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ. ಈ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಕೇವಲ ಹೀರೋಗಳು ಮಾತ್ರ ಇದರಲ್ಲಿ ಇದ್ದಾರೆ. ನಟಿಯರು ಸಾಧನೆ ಮಾಡಿಲ್ಲವೇ? ಕನ್ನಡದ ಸಾಧಕರು ಎಂದರೆ ಸಿನಿಮಾದವರು ಮಾತ್ರವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

‘ಕನ್ನಡದ ಸಾಧಕರು ಎಂಬುದು ಕಲಾವಿದರ ಕ್ಷೇತ್ರಕ್ಕೆ ಮಾತ್ರ ಸೀಮಿತವೇ? (ಅದೂ ಪುರುಷ ಪ್ರಧಾನ) ಅಥವಾ ನಮ್ಮಲ್ಲಿ ಸಾಹಿತಿಗಳ, ಸಮಾಜಸೇವಕರ ಸಂಖ್ಯೆಯಲ್ಲಿ ಕೊರತೆಯೇ?’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಈ ರೀತಿ ಅನೇಕ ಟೀಕೆಗಳು ವ್ಯಕ್ತವಾಗಿವೆ. ಈ ಸಂದರ್ಭದಲ್ಲಿ ಪುನೀತ್​ ರಾಜ್​ಕುಮಾರ್​ ಅವರನ್ನು ಅಭಿಮಾನಿಗಳು ಮಿಸ್​ ಮಾಡಿಕೊಂಡಿದ್ದಾರೆ. ಅವರ ಒಂದು ಫೋಟೋವಾದರೂ ಇದರಲ್ಲಿ ಇರಬೇಕಿತ್ತು ಎಂದು ಫ್ಯಾನ್ಸ್​ ಹಂಬಲಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.