ಎಡಗೈ ಬಳಸುವವರಿಗಾಗಿ ಲಾಂಚ್​ ಆಗಲಿದೆ ವಿಶೇಷ ಹೆಲ್ಮೆಟ್​; ಇದು ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಇಂಪ್ಯಾಕ್ಟ್​

|

Updated on: Aug 11, 2023 | 5:59 PM

ಆ.13ರಂದು ‘ವಿಶ್ವ ಎಡಗೈ ದಿನ’ ಆಚರಿಸಲಾಗುತ್ತದೆ. ಅಂದು ಹೊಸ ಬಗೆಯ ಹೆಲ್ಮೆಟ್​ ಲಾಂಚ್​ ಆಗಲಿದೆ. ಎಗಡೈ ಬಳಸುವವರಿಗೆ ಅನುಕೂಲ ಆಗುವ ರೀತಿಯಲ್ಲಿ ಈ ಹೆಲ್ಮೆಟ್​ಗಳು ವಿನ್ಯಾಗೊಂಡಿವೆ. ಬಿಡುಗಡೆಗೂ ಮುನ್ನವೇ ಕನ್ನಡ ಸಿನಿಮಾದ ಕಥಾಹಂದರವು ಇಂಥ ಒಂದು ಬದಲಾವಣೆಗೆ ಕಾರಣ ಆಗಿರುವುದು ಗಮನಾರ್ಹ.

ಎಡಗೈ ಬಳಸುವವರಿಗಾಗಿ ಲಾಂಚ್​ ಆಗಲಿದೆ ವಿಶೇಷ ಹೆಲ್ಮೆಟ್​; ಇದು ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಇಂಪ್ಯಾಕ್ಟ್​
ದಿಗಂತ್​ ಮಂಚಾಲೆ
Follow us on

ನಟ ದಿಗಂತ್​ ಮಂಚಾಲೆ (Diganth Manchale) ಅವರು ವಿಶೇಷ ಕಥಾಹಂದರದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ಅವರು ನಟಿಸಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲೂ ಒಂದು ಭಿನ್ನವಾದ ಕಾನ್ಸೆಪ್ಟ್​ ಇದೆ. ಜಗತ್ತಿನಲ್ಲಿ ಬಲಗೈ ಬಳಸುವವರ (Left Handers) ಸಂಖ್ಯೆ ಜಾಸ್ತಿ. ಆದ್ದರಿಂದ ವಿಶ್ವದ ಬಹುತೇಕ ಎಲ್ಲ ಸಾಧನಗಳು ಬಲಗೈ ಬಳಸುವವರಿಗೆ ಅನುಕೂಲ ಆಗುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ಅದರಿಂದ ಎಡಗೈ ಬಳಸುವವರಿಗೆ ಸಾಕಷ್ಟು ತೊಂದರೆ ಆಗುತ್ತದೆ. ಇಂಥ ಕಾನ್ಸೆಪ್ಟ್​ ಇಟ್ಟುಕೊಂಡು ಎಡಗೈಯೇ ಅಪಘಾತಕ್ಕೆ ಕಾರಣ’ (Edagaiye Apaghatakke Karana) ಸಿನಿಮಾ ಮೂಡಿಬರುತ್ತಿದೆ. ಈ ಕಾನ್ಸೆಪ್ಟ್​ ಅರ್ಥ ಮಾಡಿಕೊಂಡಿರುವ ವೇಗಾ ಹೆಲ್ಮೆಟ್​ ಕಂಪನಿಯು ಎಡಗೈ ಬಳಸುವವರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಂಡು ಹೆಲ್ಮೆಟ್​ಗಳನ್ನು ಲಾಂಚ್​ ಮಾಡುತ್ತಿದೆ. ಆ ಬಗ್ಗೆ ಚಿತ್ರದ ನಿರ್ಮಾಪಕ ಗುರುದತ್​ ಗಾಣಿಗ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಆಗಸ್ಟ್​ 13ರಂದು ‘ವಿಶ್ವ ಎಡಗೈ ದಿನ’ ಆಚರಿಸಲಾಗುತ್ತದೆ. ಅಂದು ಹೊಸ ಬಗೆಯ ಹೆಲ್ಮೆಟ್​ ಲಾಂಚ್​ ಆಗಲಿದೆ. ಎಗಡೈ ಬಳಸುವವರಿಗೆ ಅನುಕೂಲ ಆಗುವ ರೀತಿಯಲ್ಲಿ ಈ ಹೆಲ್ಮೆಟ್​ಗಳು ವಿನ್ಯಾಗೊಂಡಿವೆ. ಬಿಡುಗಡೆಗೂ ಮುನ್ನವೇ ಕನ್ನಡ ಸಿನಿಮಾದ ಕಥಾಹಂದರವು ಇಂಥ ಒಂದು ಬದಲಾವಣೆಗೆ ಕಾರಣ ಆಗಿರುವುದು ಗಮನಾರ್ಹ ವಿಚಾರ. ದೊಡ್ಡ ದೊಡ್ಡ ಕಂಪನಿಗಳು ಕೂಡ ಕನ್ನಡ ಚಿತ್ರರಂಗದ ಈ ರೀತಿಯ ವಿಶೇಷ ಕಾನ್ಸೆಪ್ಟ್​ಗಳನ್ನು ಗಮನಿಸುತ್ತಿವೆ. ‘ಹೆಲ್ಮೆಟ್​ ವಿಚಾರದಲ್ಲಿ ಇಂಥ ಪ್ರಯತ್ನ ಆಗಿರುವುದು ಇದೇ ಮೊದಲು’ ಎಂದಿದ್ದಾರೆ ಗುರುದತ್​ ಗಾಣಿಗ.

‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಪ್ರಯತ್ನ. ಮೊದಲ ಸಿನಿಮಾದಲ್ಲೇ ಅವರು ಇಂಥ ಒಂದು ಡಿಫರೆಂಟ್​ ಕಾನ್ಸೆಪ್ಟ್​ ಆಯ್ಕೆ ಮಾಡಿಕೊಂಡಿದ್ದಾರೆ. ಮರ್ಡರ್ ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್, ಡಾರ್ಕ್ ಕಾಮಿಡಿ ಶೈಲಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಶೀರ್ಷಿಕೆಯೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಕುರಿತು ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಅಭಿಮನ್ಯು ಸದಾನಂದ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ರಾಹುಲ್ ವಿ. ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

Diganth: ನಟ ದಿಗಂತ್ ಮಂಚಾಲೆ ಹುಟ್ಟುಹಬ್ಬ: ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಪೋಸ್ಟರ್ ರಿಲೀಸ್​

‘ಹೈಫನ್ ಪಿಕ್ಚರ್ಸ್ ಬ್ಯಾನರ್’ ಮೂಲಕ ಗುರುದತ್ ಗಾಣಿಗ ಮತ್ತು ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಅವರು ಜೊತೆಯಾಗಿ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ ಅವರಿಗೆ ಜೋಡಿಯಾಗಿ ಹೊಸ ನಟಿ ಧನು ಹರ್ಷ ಅಭಿನಯಿಸಿದ್ದಾರೆ. ಕನ್ನಡದ ಖ್ಯಾತ ನಟಿಯರಾದ ರಾಧಿಕಾ ನಾರಾಯಣ್ ಮತ್ತು ನಿಧಿ ಸುಬ್ಬಯ್ಯ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಸಹ ಪಾತ್ರವರ್ಗದಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.