ಅಣ್ಣನ ಸಮಾಧಿ ಪಕ್ಕ ಮಲಗಿದ ನಟ ಧ್ರುವ ಸರ್ಜಾ: ವಿಡಿಯೋ ವೈರಲ್

|

Updated on: Sep 08, 2023 | 9:01 PM

Dhruva Sarja: ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಪಕ್ಕದಲ್ಲಿ ಮಲಗಿರುವ ಧ್ರುವ ಸರ್ಜಾರ ವಿಡಿಯೋ ವೈರಲ್ ಆಗಿದೆ. ತಮ್ಮದೇ ಫಾರಂ ಹೌಸ್​ನಲ್ಲಿ ಅಣ್ಣನ ಸಮಾಧಿಯನ್ನು ಧ್ರುವ ಸರ್ಜಾ ನಿರ್ಮಿಸಿದ್ದು, ಅಲ್ಲಿಯೇ ಸಮಾಧಿ ಪಕ್ಕದಲ್ಲಿ ಧ್ರುವ ಮಲಗಿದ್ದಾರೆ.

ಅಣ್ಣನ ಸಮಾಧಿ ಪಕ್ಕ ಮಲಗಿದ ನಟ ಧ್ರುವ ಸರ್ಜಾ: ವಿಡಿಯೋ ವೈರಲ್
ಧ್ರುವ ಸರ್ಜಾ-ಚಿರು ಸರ್ಜಾ
Follow us on

ಚಿರಂಜೀವಿ ಸರ್ಜಾ (Chiranjeevi Sarja) ಅಗಲಿ ಮೂರು ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಅವರ ಅಭಿಮಾನಿಗಳು, ಅವರ ಕುಟುಂಬಸ್ಥರು ಚಿರು ಅಗಲಿಕೆಯ ನೋವಿನಿಂದ ಇನ್ನೂ ಹೊರಬಂದಿಲ್ಲ. ಚಿರು ಪತ್ನಿ ಮೇಘನಾ ರಾಜ್ ನೋವನ್ನೆಲ್ಲ ನುಂಗಿಕೊಂಡು ಮತ್ತೆ ಶಕ್ತಿತುಂಬಿಕೊಂಡು ಮಗನ ಭವಿಷ್ಯಕ್ಕಾಗಿ ಮತ್ತೆ ಸಿನಿಮಾ ಹಾಗೂ ಕಿರುತೆರೆಗೆ ಮರಳಿದ್ದಾರೆ. ಧ್ರುವ ಸರ್ಜಾ (Dhruva Sarja) ಸಹ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರಾದರೂ ಅಣ್ಣನ ಕೊರತೆ ಮನದ ಮೂಲೆಯಲ್ಲಿ ಇದ್ದೇ ಇದೆ. ಚಿರಂಜೀವಿ ಹಾಗೂ ಧ್ರುವ ಬಹಳ ಅನ್ಯೋನ್ಯವಾಗಿದ್ದರು. ಇದೀಗ ಧ್ರುವ ಸರ್ಜಾರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧ್ರುವ ಸರ್ಜಾ ತಮ್ಮ ಅಣ್ಣನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಆ ವಿಡಿಯೋ ಸಾಕ್ಷಿಯಾಗಿದೆ.

ವಿಡಿಯೋನಲ್ಲಿ ಚಿರಂಜೀವಿ ಸರ್ಜಾ ಸಮಾಧಿಯ ಪಕ್ಕದಲ್ಲಿ ಧ್ರುವ ಸರ್ಜಾ ಮಲಗಿಕೊಂಡಿದ್ದಾರೆ. ಗಾಢ ನಿದ್ದೆಯಲ್ಲಿರುವ ಚಿರಂಜೀವಿ ಸರ್ಜಾ ಅನ್ನು ಅಭಿಮಾನಿಗಳು ಬಂದು ಎಬ್ಬಿಸಿದ್ದಾರೆ. ಆ ಅಭಿಮಾನಿಗಳೇ ಈ ವಿಡಿಯೋವನ್ನು ಸಹ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಧ್ರುವ ಸರ್ಜಾ ತಮ್ಮ ಅಣ್ಣನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ವಿಡಿಯೋ ಸಾಕ್ಷಿಯಾಗಿದೆ.

ಇದನ್ನೂ ಓದಿ:ಭರ್ಜರಿಯಾಗಿ ರೆಡಿಯಾಗುತ್ತಿದೆ ಧ್ರುವ ಸರ್ಜಾ ಮಾರ್ಟಿನ್, ಫೈಟ್​ಗೆ 9 ಕೋಟಿ, ಒಂದು ಹಾಡಿಗೆ 3 ಕೋಟಿ

ಧ್ರುವ ಸರ್ಜಾ ತಮ್ಮ ಫಾರಂ ಹೌಸ್​ನಲ್ಲಿಯೇ ಅಣ್ಣನ ಸಮಾಧಿ ಮಾಡಿದ್ದಾರೆ. ಕನಕಪುರ ಬಳಿಯ ನೆಲಗುಳಿಯಲ್ಲಿ ಧ್ರುವ ಸರ್ಜಾ ಫಾರಂ ಹೌಸ್ ಇದ್ದು ಅಲ್ಲಿಯೇ ಚಿರಂಜೀವಿ ಸರ್ಜಾ ಸಮಾಧಿ ನಿರ್ಮಿಸಲಾಗಿದೆ. ಧ್ರುವ ಸರ್ಜಾ ಅಲ್ಲಿಯೇ ಅಣ್ಣನ ಸಮಾಧಿ ಬದಿಯಲ್ಲಿ ಮಲಗಿದ್ದರು. ಧ್ರುವ ಒಬ್ಬರೇ ಅಣ್ಣನ ಸಮಾಧಿ ಬದಿಯಲ್ಲಿ ಮಲಗಿರುವ ಬಗ್ಗೆ ಹಲವು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಹಲವರು ಭಾವುಕರಾಗಿ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಅಕ್ಟೋಬರ್ 6 ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬವಿದೆ. ಅದೇ ದಿನ ಚಿರಂಜೀವಿ ಸರ್ಜಾರ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಸಿನಿಮಾ ಬಿಡುಗಡೆಗೆ ಸಹಾಯವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ, ಚಿರಂಜೀವಿ ಪತ್ನಿ ಮೇಘನಾ ರಾಜ್​ರ ಹೊಸ ಸಿನಿಮಾದ ಟ್ರೈಲರ್ ಬಿಡುಗಡೆ ಆಯ್ತು, ಆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದ ಧ್ರುವ ಸರ್ಜಾ, ಅತ್ತಿಗೆಗೆ ಬೆಂಬಲ ನೀಡಿದರು. ಅಲ್ಲಿಯೂ ಅಣ್ಣನನ್ನು ಮತ್ತೊಮ್ಮೆ ನೆನಪು ಮಾಡಿಕೊಂಡರು.

ಇನ್ನು ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದ್ಧೂರಿಯಾಗಿ ‘ಮಾರ್ಟಿನ್’ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದಲ್ಲಿಯೂ ಧ್ರುವ ಸರ್ಜಾ ನಟಿಸುತ್ತಿದ್ದಾರೆ. 70ರ ದಶಕದ ರೌಡಿಸಂ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಇನ್ನೂ ಇತರೆ ಭಾಷೆಗಳ ಸ್ಟಾರ್ ನಟರು ಸಹ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ