
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ತಮ್ಮ ಮಧ್ಯೆ ಇರೋದು ಫ್ರೆಂಡ್ಶಿಪ್ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಅವರು ಆ ರೀತಿ ನಡೆದುಕೊಳ್ಳುತ್ತಿಲ್ಲ. ಇವರು ಒಟ್ಟಾಗಿ ವಿದೇಶ ಸುತ್ತುತ್ತಾರೆ. ಈ ಫೋಟೋಗಳನ್ನು ಬೇರೆ ಬೇರೆ ಸಂದರ್ಭದಲ್ಲಿ ಹಂಚಿಕೊಂಡು ಸಿಕ್ಕಿ ಬೀಳುತ್ತಾರೆ. ಈಗ ಈ ಜೋಡಿ ವಿಯೆಟ್ನಾಂಗೆ ಒಟ್ಟಾಗಿ ತೆರಳಿತ್ತು ಎನ್ನಲಾಗಿದೆ. ಇದರ ಫೋಟೋಗಳನ್ನು ಇಬ್ಬರೂ ಬೇರೆ ಬೇರೆ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದು ‘ಗೀತ ಗೋವಿಂದಂ’ ಸಿನಿಮಾದಲ್ಲಿ. ಆಗಲೇ ರಶ್ಮಿಕಾಗೆ ನಿಶ್ಚಿತಾರ್ಥ ಆಗಿತ್ತು. ಈ ನಿಶ್ಚಿತಾರ್ಥ ಮುರಿದು ಬಿತ್ತು. ಬಳಿಕ ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ ಮುಂದುವರಿದರು. ಆಗಿನಿಂದಲೂ ರಶ್ಮಿಕಾ ಹಾಗೂ ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಚರ್ಚೆ ಆಗುತ್ತಲೇ ಇದೆ. ಇದಕ್ಕೆ ಪೂರಕವಾಗಿ ಹಲವು ಸಾಕ್ಷಿಗಳು ಸಿಕ್ಕಿವೆ. ಆದರೆ, ಇದನ್ನು ಒಪ್ಪಿಕೊಳ್ಳಲು ಈ ಜೋಡಿ ರೆಡಿ ಇಲ್ಲ. ಈಗ ಹೊಸ ಸಾಕ್ಷಿಯೊಂದಿಗೆ ಫ್ಯಾನ್ಸ್ ಬಂದಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ವಿಯೆಟ್ನಾಂಗೆ ತೆರಳಿದ್ದರು. ಶನಿವಾರ (ಜನವರಿ 13) ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹ್ಯಾಟ್ ಧರಿಸಿ ವಿಯೆಟ್ನಾಂ ಬೀದಿಗಳಲ್ಲಿ ರಶ್ಮಿಕಾ ನಿಂತಿದ್ದಾರೆ. ‘ಈ ಹ್ಯಾಟ್ ಬಗ್ಗೆ ಗೀಳು ಹತ್ತಿದೆ. ಈ ಹ್ಯಾಟ್ ಕೂಡ ನನ್ನ ಮನೆಗೆ ಬಂತು’ ಎಂದು ಬರೆದುಕೊಂಡಿದ್ದಾರೆ ಅವರು. ಈ ಫೋಟೋದಲ್ಲಿ ಅವರು ವಿಜಯ್ನ ಟ್ಯಾಗ್ ಮಾಡಿಲ್ಲ. ಆದರೂ ಇದು ವಿಜಯ್ ದೇವರಕೊಂಡ ಜೊತೆ ಹೋದಾಗಲೇ ತೆಗೆದ ಫೋಟೋ ಅನ್ನೋದು ಫ್ಯಾನ್ಸ್ಗೆ ಗೊತ್ತಾಗಿದೆ.
ಒಂದು ತಿಂಗಳ ಹಿಂದೆ ವಿಜಯ್ ದೇವರಕೊಂಡ ಕೂಡ ವಿಯೆಟ್ನಾಂ ತೆರಳಿ ಫೋಟೋ ಹಂಚಿಕೊಂಡಿದ್ದರು. ಇಬ್ಬರೂ ಒಟ್ಟಾಗಿ ತೆರಳಿದ್ದರು ಎಂಬುದು ಫ್ಯಾನ್ಸ್ ಊಹೆ. ಈಗ ಬೇರೆ ಬೇರೆ ಸಂದರ್ಭಗಳಲ್ಲಿ ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ, ವಿಜಯ್ ದೇವರಕೊಂಡ ಟೀಂ ಇದನ್ನು ತಳ್ಳಿ ಹಾಕಿದೆ. ಈ ಜೋಡಿ ಕಳೆದ ವರ್ಷ ಒಟ್ಟಾಗಿ ಮಾಲ್ಡೀವ್ಸ್ ತೆರಳಿತ್ತು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಶ್ಮಿಕಾ ಜೊತೆಗಿನ ನಿಶ್ಚಿತಾರ್ಥ ವದಂತಿ; ಸ್ಪಷ್ಟನೆ ನೀಡಿದ ವಿಜಯ್ ದೇವರಕೊಂಡ ಟೀಂ
ವಿಜಯ್ ದೇವರಕೊಂಡ ಅವರು ‘ಖುಷಿ’ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ. ಈಗ ಅವರು ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ‘ಅನಿಮಲ್’ ಸಿನಿಮಾ ಯಶಸ್ಸಿನಿಂದ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಹೆಚ್ಚಿದೆ. ‘ಪುಷ್ಪ 2’, ‘ರೇನ್ಬೋ’ ಮೊದಲಾದ ಸಿನಿಮಾಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದರು. ಆದರೆ, ಅವರು ಸದ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ಮರಳೋ ಆಲೋಚನೆಯಲ್ಲಿ ಇಲ್ಲ. ಅವರಿಗೆ ಹಿಂದಿ, ತೆಲುಗಿನಿಂದ ಸಾಕಷ್ಟು ಆಫರ್ಗಳು ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ