ಮದ್ಯದ ದೊರೆ ವಿಜಯ್​ ಮಲ್ಯ ಲೈಫ್​ಸ್ಟೋರಿ ಆಗ್ತಿದೆ Web Series!

  • Updated On - 12:52 pm, Sat, 15 August 20
ಮದ್ಯದ ದೊರೆ ವಿಜಯ್​ ಮಲ್ಯ ಲೈಫ್​ಸ್ಟೋರಿ ಆಗ್ತಿದೆ Web Series!

ಮುಂಬೈ: ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ದೇಶಭ್ರಷ್ಟ ವಿಜಯ್​ ಮಲ್ಯ ಕಥೆ ಇದೀಗ ವೆಬ್​ ಸಿರೀಸ್​ ಆಗಿ ಹೊರಬರುತ್ತಿದೆ.

ಬಾಲ್ಯದ ದಿನಗಳಿಂದ ಹಿಡಿದು ಪರಾರಿಯಾಗುವವರೆಗೂ ವೆಬ್ ಸಿರೀಸ್​
ಆಲ್ಮೈಟಿ ಮೋಷನ್​ ಪಿಚರ್ಸ್​ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಭ್ಲೀನ್​ ಕೌರ್​ PZ ಪಿಚರ್ಸ್​ ಸಂಸ್ಥೆ ಜೊತೆ ಕೈಗೂಡಿಸಿ ಖ್ಯಾತ ಬರಹಗಾರ ಗಿರಿ ಪ್ರಕಾಶ್​ರ ದಿ ವಿಜಯ್​ ಮಲ್ಯ ಸ್ಟೋರಿ ಪುಸ್ತಕದ ಚಿತ್ರೀಕರಣ ಹಕ್ಕು ಖರೀದಿಸಿದ್ದಾರೆ. ಮದ್ಯದ ದೊರೆಯ ಬಾಲ್ಯದ ದಿನಗಳಿಂದ ಹಿಡಿದು ಆತ ಇಂಗ್ಲೆಂಡ್​​ಗೆ ಪರಾರಿಯಾಗುವವರೆಗೂ ಆತನ ಕಥೆಯನ್ನ ವೆಬ್ ಸಿರೀಸ್​ ಆಗಿ ನಿರ್ಮಿಸಲು ಮುಂದಾಗಿದ್ದಾರೆ.

ಸದ್ಯ ಚಿತ್ರಕಥೆ ಕೊನೆಯ ಹಂತ ತಲುಪಿದ್ದು ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಲಿವುಡ್​ನ ಖ್ಯಾತ ನಟರೊಬ್ಬರು ಮಲ್ಯನ ಪಾತ್ರ ಮಾಡಲು ಸಹ ಒಪ್ಪಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Click on your DTH Provider to Add TV9 Kannada