AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗ ಶೌರ್ಯನನ್ನು ನಟನಾಗಿಸುವ ಆಸೆಯಿತ್ತು ವಿಜಯ್-ಸ್ಪಂದನಾಗೆ: ನಾಗಾಭರಣ

Vijay-Spandana: ವಿಜಯ್ ರಾಘವೇಂದ್ರ-ಸ್ಪಂದನಾ ದಂಪತಿಗಳು ಪುತ್ರ ಶೌರ್ಯನ ಭವಿಷ್ಯದ ಬಗ್ಗೆ ಕಂಡಿದ್ದ ಕನಸಿನ ಬಗ್ಗೆ ನಿರ್ದೇಶಕ ಟಿಎಸ್ ನಾಗಾಭರಣ ಮಾತನಾಡಿದ್ದಾರೆ.

ಮಗ ಶೌರ್ಯನನ್ನು ನಟನಾಗಿಸುವ ಆಸೆಯಿತ್ತು ವಿಜಯ್-ಸ್ಪಂದನಾಗೆ: ನಾಗಾಭರಣ
ವಿಜಯ್ ದಂಪತಿ
Mangala RR
| Updated By: ಮಂಜುನಾಥ ಸಿ.|

Updated on: Aug 10, 2023 | 6:06 PM

Share

ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅಕಾಲ ಮರಣಕ್ಕೆ ಈಡಾಗಿದ್ದಾರೆ. ಕಸಿನ್ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿ ಹೃದಯಾಘಾತಕ್ಕೆ ಗುರಿಯಾಗಿ ನಿಧನ ಹೊಂದಿದ್ದಾರೆ. ವಿಜಯ್ ಹಾಗೂ ಸ್ಪಂದನಾಗೆ 14 ವರ್ಷದ ಪುತ್ರನಿದ್ದಾನೆ. ಶೌರ್ಯ ಹೆಸರಿನ ಮಗನ ಬಗ್ಗೆ ಅಪಾರ ಕನಸುಗಳನ್ನು ಈ ಜೋಡಿ ಇರಿಸಿಕೊಂಡಿತ್ತು. ಸ್ಪಂದನಾ ಸಹ ಮಗನ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದ್ದರು. ಆದರೆ ಮಗನ ಭವಿಷ್ಯವನ್ನು ಕಾಣದೆ ಇಹಲೋಕ ತ್ಯಜಿಸಿದರು.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾರಿಗೆ ಶೌರ್ಯನನ್ನು ನಟನನ್ನಾಗಿ ಮಾಡುವ ಆಸೆಯಿತ್ತು ಎಂದಿರುವ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ಆ ಬಗ್ಗೆ ವಿಜಯ್ ರಾಘವೇಂದ್ರ ತಮ್ಮೊಟ್ಟಿಗೆ ಮಾತನಾಡಿದ್ದು ಮಾತ್ರವೇ ಅಲ್ಲದೆ, ತಮ್ಮದೇ ನಟನಾ ತರಬೇತಿ ತರಗತಿಗೆ ಶೌರ್ಯನನ್ನು ಸೇರಿಸಿದ್ದರ ಬಗ್ಗೆ ನಾಗಾಭರಣ ಅವರು ಟಿವಿ9ಗೆ ವಿವರಿಸಿದ್ದಾರೆ.

ವಿಜಯ್ ರಾಘವೇಂದ್ರ ನಮ್ಮ ಮನೆ ಮಗ, ‘ಚಿನ್ನಾರಿಮುತ್ತ’, ‘ಕಲ್ಲರಳಿ ಹೂವಾಗಿ’ ಸಿನಿಮಾಗಳಲ್ಲಿ ನಾನು ಅವನನ್ನು ನಿರ್ದೇಶಿಸಿದ್ದೀನಿ, ಅವನ ಬಾಲ್ಯ ಯೌವ್ವನ ಎರಡನ್ನೂ ನಾನು ನೋಡಿದ್ದೀನಿ, ನನ್ನ ಹಾಗೂ ಸಿನಿಮಾ ಪಯಣ ಒಟ್ಟಿಗೆ ಸಾಗುತ್ತಿತ್ತು ಎಂದರೂ ತಪ್ಪಾಗಲಾರದು. ಮಗನಿಗೆ ನಟನೆ ಬಗ್ಗೆ ಒಲವಿರುವುದು ಗುರುತಿಸಿದ್ದ ವಿಜಯ್ ರಾಘವೇಂದ್ರ, ನನ್ನ ಭರಣ ಅಕಾಡೆಮಿ ಫರ್ಮಾರ್ಮಿಂಗ್ ಆರ್ಟ್ಸ್​ಗೆ ಸೇರಿಸಿದ್ದ. ವಾರಕ್ಕೆ ಎರಡು ದಿನ ಮಾತ್ರವೇ ತರಗತಿ ಇರುತ್ತಿತ್ತು. ಎರಡೂ ದಿನ ವಿಜಯ್ ರಾಘವೇಂದ್ರನೇ ಮಗನನ್ನು ತರಗತಿಗೆ ಕರೆದುಕೊಂಡು ಬರುತ್ತಿದ್ದ, ಮರಳಿ ಕರೆದುಕೊಂಡು ಹೋಗುತ್ತಿದ್ದ ಮಗನ ಬಗ್ಗೆ ಅಷ್ಟು ಕಾಳಜಿ ವಿಜಯ್​ಗೆ ಇತ್ತು.

ಇದನ್ನೂ ಓದಿ:ವಿಜಯ್ ರಾಘವೇಂದ್ರಗೆ ಆಪ್ತವಾಗಿ ಸಾಂತ್ವನ ಹೇಳಿದ ನಟ ಯಶ್

ಶೌರ್ಯನ ಬಗ್ಗೆ ನನ್ನ ಬಳಿ ಮಾತನಾಡಿದ್ದ ವಿಜಯ್, ಅವನಿಗೆ ಅಭಿನಯದಲ್ಲಿ ಆಸಕ್ತಿ ಇದ್ದಂತಿದೆ, ನೀವೇ ಅವನನ್ನು ತರಬೇತುಗೊಳಿಸಬೇಕು ಎಂದಿದ್ದ ಮಾತ್ರವಲ್ಲದೆ, ಸ್ಪಂದನಾಗೆ ಸಹ ಶೌರ್ಯ ನಿಮ್ಮ ಬಳಿ ತರಬೇತಿ ಪಡೆಯುತ್ತಿರುವ ಬಗ್ಗೆ ಬಹಳ ಖುಷಿ ಇದೆ ಎಂದಿದ್ದ ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ. ಬಾಲಕ ಶೌರ್ಯನಿಗೆ ಇರುವ ಸಹಜ ಕುತೂಹಲ, ನಿಷ್ಕಲ್ಮಷ ನಗುವಿನ ಬಗ್ಗೆಯೂ, ನಟನಿಗೆ ಇರಬೇಕಾದ ಬೇಸಿಕ್ ಕೆಲವು ಅರ್ಹತೆಗಳು ಶೌರ್ಯಗೆ ಇರವುದಾಗಿಯೂ ನಾಗಾಭರಣ ಇದೇ ಸಂದರ್ಭದಲ್ಲಿ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ