ವಿಜಯ್ ರಾಘವೇಂದ್ರ ಪಿಯುಸಿಯಲ್ಲಿ ಪಡೆದ ಮಾರ್ಕ್ಸ್​ ಇಷ್ಟೇನಾ? ‘ಡಿಕೆಡಿ’ ವೇದಿಕೆ ಮೇಲೆ ವಿಚಾರ ರಿವೀಲ್

ವೇದಿಕೆ ಏರಿದ ಸ್ಪರ್ಧಿ ಓರ್ವ ತಮ್ಮ ಪಿಯುಸಿ ಮಾರ್ಕ್ಸ್ ರಿವೀಲ್ ಮಾಡಿದರು. ಶೇ.90 ಮಾರ್ಕ್ಸ್ ಪಡೆದಿರುವುದಾಗಿ ಅವರು ಹೇಳಿಕೊಂಡರು. ವೇದಿಕೆ ಮೇಲಿದ್ದ ಆ್ಯಂಕರ್ ಅನುಶ್ರೀ ಅವರು ವಿಜಯ್ ರಾಘವೇಂದ್ರ ಬಳಿ ಪಿಯುಸಿ ಮಾರ್ಕ್ಸ್ ಕೇಳಿದ್ದಾರೆ.

ವಿಜಯ್ ರಾಘವೇಂದ್ರ ಪಿಯುಸಿಯಲ್ಲಿ ಪಡೆದ ಮಾರ್ಕ್ಸ್​ ಇಷ್ಟೇನಾ? ‘ಡಿಕೆಡಿ’ ವೇದಿಕೆ ಮೇಲೆ ವಿಚಾರ ರಿವೀಲ್
ವಿಜಯ್ ದೇವರಕೊಂಡ
Follow us
ರಾಜೇಶ್ ದುಗ್ಗುಮನೆ
|

Updated on: May 16, 2023 | 6:30 AM

ವಿಜಯ್ ರಾಘವೇಂದ್ರ (Vijay Raghavendra) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಕೇವಲ ಹಿರಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಅನೇಕ ರಿಯಾಲಿಟಿ ಶೋಗೆ ಅವರು ಜಡ್ಜ್​ ಆಗಿದ್ದಾರೆ. ಇತ್ತೀಚೆಗೆ ಆರಂಭವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ ಸೀಸನ್ 7’ (DKD 7) ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ  ಜಡ್ಜ್​ ಆಗಿದ್ದಾರೆ. ಅವರು ವೇದಿಕೆ ಮೇಲೆ ತಮ್ಮ ಪಿಯುಸಿ ಮಾರ್ಕ್ಸ್ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ ರಿಯಾಲಿಟಿ ಶೋ ಆರು ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಹಲವು ಪ್ರತಿಭೆಗಳು ಈ ವೇದಿಕೆ ಮೇಲೆ ಬಂದಿದ್ದಾರೆ. ಈಗ ಹೊಸ ಸೀಸನ್ ಆರಂಭ ಆಗಿದೆ. ಇದಕ್ಕೆ ಆಡಿಷನ್ ಇತ್ತೀಚೆಗೆ ನಡೆದಿದೆ. ಹಲವರಿಗೆ ಈ ವೇದಿಕೆ ಏರಲು ಅವಕಾಶ ಸಿಕ್ಕಿದೆ. ಶಿವರಾಜ್​ಕುಮಾರ್, ರಕ್ಷಿತಾ, ವಿಜಯ್ ರಾಘವೇಂದ್ರ, ಚಿನ್ನಿ ಪ್ರಕಾಶ್, ಅರ್ಜುನ್ ಜನ್ಯಾ ಜಡ್ಜ್​ ಸ್ಥಾನದಲ್ಲಿದ್ದಾರೆ.

ವೇದಿಕೆ ಏರಿದ ಸ್ಪರ್ಧಿ ಓರ್ವ ತಮ್ಮ ಪಿಯುಸಿ ಮಾರ್ಕ್ಸ್ ರಿವೀಲ್ ಮಾಡಿದರು. ಶೇ.90 ಮಾರ್ಕ್ಸ್ ಪಡೆದಿರುವುದಾಗಿ ಅವರು ಹೇಳಿಕೊಂಡರು. ವೇದಿಕೆ ಮೇಲಿದ್ದ ಆ್ಯಂಕರ್ ಅನುಶ್ರೀ ಅವರು ವಿಜಯ್ ರಾಘವೇಂದ್ರ ಬಳಿ ಪಿಯುಸಿ ಮಾರ್ಕ್ಸ್ ಕೇಳಿದ್ದಾರೆ. ಆಗ ವಿಜಯ್ ರಾಘವೇಂದ್ರ ಅವರು ಅಸಲಿ ವಿಚಾರ ರಿವೀಲ್ ಮಾಡಿದ್ದಾರೆ. ‘ಪಿಯುಸಿಲಿ ನಾನು ಜಸ್ಟ್​ ಪಾಸ್’ ಎಂದರು ವಿಜಯ್. ‘ಪಿಯುಸಿ ಅಲ್ಲಿ ಜಸ್ಟ್ ಪಾಸ್ ಆದರೇನು ಕರ್ನಾಟಕದಲ್ಲಿ ನೀವು ಡಿಸ್ಟಿಂಕ್ಷನ್​ನಲ್ಲಿ ಇದೀರಾ ಬಿಡಿ’ ಎಂದರು ಅನುಶ್ರೀ.

ಇದನ್ನೂ ಓದಿ: ವಿಜಯ್ ರಾಘವೇಂದ್ರ ಸಂದರ್ಶನ: ಸೋಲೋ ಆ್ಯಕ್ಟರ್ ಸಿನಿಮಾ ಅನುಭವ ಹಂಚಿಕೊಂಡ ‘ರಾಘು’

ವಿಜಯ್ ರಾಘವೇಂದ್ರ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ‘ಚಿನ್ನಾರಿ ಮುತ್ತ’ ಸಿನಿಮಾದಲ್ಲಿನ ಅವರ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ‘ಕೊಟ್ರೇಶಿ ಕನಸು’ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಬಾಲ ನಟನಾಗಿ ಗುರುತಿಸಿಕೊಂಡ ನಂತರ ಅವರು ಹೀರೋ ಆಗಿ ಮಿಂಚಿದರು. ವೃತ್ತಿ ಜೀವನದಲ್ಲಿ ಅವರು ಹಲವು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದಾರೆ. ಅವರ ನಟನೆಯ ‘ರಾಘು’ ಹೆಸರಿನ ಸಿನಿಮಾ ಏಪ್ರಿಲ್ 28ರಂದು ರಿಲೀಸ್ ಆಗಿದೆ. ಇದಕ್ಕೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ