ದರ್ಶನ್ ಪತ್ನಿಗೆ ಸಂಕಷ್ಟ, ವಿಜಯಲಕ್ಷ್ಮಿ ಎ1, ದರ್ಶನ್ ಎ3

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದಾರೆ. ಆದರೆ ಈಗ ದರ್ಶನ್​ರ ಪತ್ನಿಗೂ ಸಂಕಷ್ಟ ಎದುರಾಗಿದೆ. ಪ್ರಕರಣವೊಂದರಲ್ಲಿ ವಿಜಯಲಕ್ಷ್ಮಿ ದರ್ಶನ್ ಎ3 ಆಗಿದ್ದು, ಅದೇ ಪ್ರಕರಣದಲ್ಲಿ ದರ್ಶನ್ ಎ3 ಆಗಿದ್ದಾರೆ. ಪ್ರಕರಣದ ಚಾರ್ಜ್​ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆದಿದೆ.

ದರ್ಶನ್ ಪತ್ನಿಗೆ ಸಂಕಷ್ಟ, ವಿಜಯಲಕ್ಷ್ಮಿ ಎ1, ದರ್ಶನ್ ಎ3
ವಿಜಯಲಕ್ಷ್ಮಿ ದರ್ಶನ್

Updated on: Jun 18, 2024 | 2:02 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan Thoogudeepa) ಎರಡನೇ ಆರೋಪಿ ಆಗಿದ್ದಾರೆ. ನಟಿ, ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ದರ್ಶನ್​ರ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಪರವಾಗಿ ಹೋರಾಟ ನಡೆಸುತ್ತಿದ್ದು, ವಕೀಲರನ್ನು ನೇಮಿಸಿ ದರ್ಶನ್​ರ ಬಿಡುಗಡೆಗೆ ಯತ್ನಿಸುತ್ತಿದ್ದಾರೆ. ಬೇರೆ-ಬೇರೆ ವಕೀಲರ ಭೇಟಿ ಮಾಡುತ್ತಿದ್ದಾರೆ. ಇದರ ನಡುವೆ ವಿಜಯಲಕ್ಷ್ಮಿ ಅವರಿಗೂ ಸಂಕಷ್ಟ ಎದುರಾಗಿದೆ. ಪ್ರಕರಣವೊಂದರಲ್ಲಿ ವಿಜಯಲಕ್ಷ್ಮಿ ಅವರನ್ನು ಎ1 ಆರೋಪಿಯನ್ನಾಗಿಸಲಾಗಿದ್ದು, ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ.

ಕಳೆದ ವರ್ಷ ಜನವರಿಯಲ್ಲಿ ದರ್ಶನ್​ರ ಮೈಸೂರಿನ ಫಾರಂ ಹೌಸ್​ ಮೇಲೆ ದಾಳಿ ಮಾಡಿದ್ದ ಪೊಲೀಸರು, ದರ್ಶನ್ ಅಕ್ರಮವಾಗಿ ಸಾಕಿಕೊಂಡಿದ್ದ ಬಾರ್ ಹೆಡೆಡ್ ಗೂಸ್ (ಬಾರ್ ಹೆಡೆಡ್ ಹೆಬ್ಬಾತು) ಪಕ್ಷಿಗಳನ್ನು ವಶಪಡಿಸಿಕೊಂಡಿದ್ದರು. ಈ ಪಕ್ಷಿಗಳನ್ನು ಸಾಕುವುದು ಕಾನೂನು ಪ್ರಕಾರ ಅಪರಾಧ. ಹಾಗಾಗಿ ಪಕ್ಷಿಗಳನ್ನು ವಶಪಡಿಸಿಕೊಂಡಿದ್ದ ಅರಣ್ಯ ಇಲಾಖೆ, ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿತ್ತು.

ನಿಯಮ ಬಾಹಿರವಾಗಿ ಪಕ್ಷಿಗಳನ್ನು ಸಾಕಿದ್ದ ಕಾರಣ, ಮೈಸೂರು ಫಾರಂ ಹೌಸ್ ನ ಮಾಲೀಕರಾಗಿರುವ ವಿಜಯಲಕ್ಷ್ಮಿ ದರ್ಶನ್, ಮ್ಯಾನೇಜರ್ ನಾಗರಾಜು ಹಾಗೂ ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಕರೆಯಲಾಗಿತ್ತು. ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಎ1, ನಾಗರಾಜು ಎ2 ಹಾಗೂ ದರ್ಶನ್ ಎ3 ಆಗಿದ್ದರು. ಆದರೆ ಯಾರೂ ಸಹ ವಿಚಾರಣೆಗೆ ಬಂದಿರಲಿಲ್ಲ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧವಾಗಿದ್ದಾರೆ.

ಇದನ್ನೂ ಓದಿ:ವಿಜಯಲಕ್ಷ್ಮಿ ದರ್ಶನ್​ಗೆ ಪ್ರತಿಕ್ರಿಯೆ: ಹಳೆ ವಿಷಯ ಕೆದಕಿದ ಪವಿತ್ರಾ ಗೌಡ

ಈಗಾಗಲೇ ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್​ಗೆ ಈಗ ಅರಣ್ಯ ಇಲಾಖೆ ಪ್ರಕರಣವೂ ತಡಕಾಗಿ ಪರಿಣಮಿಸಲಿದೆ. ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಎ1 ಆಗಿದ್ದು, ಅವರೂ ಸಹ ವಿಚಾರಣೆಗೆ ಹಾಜರಾಗಬೇಕಿದೆ. ಚಾರ್ಜ್​ ಶೀಟ್ ಸಲ್ಲಿಸಿದ ಬಳಿಕ ನ್ಯಾಯಾಲಯ ಯಾವ ಆದೇಶ ನೀಡುತ್ತದೆ ಎಂಬುದು ಸಹ ಕುತೂಹಲ ಕೆರಳಿಸಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಪವಿತ್ರಾ ಗೌಡ ಆರೋಪಿ ಸಂಖ್ಯೆ 1 ಆಗಿದ್ದಾರೆ. ಇಂದು (ಜೂನ್ 18) ದರ್ಶನ್ ಅನ್ನು ಮೈಸೂರಿಗೆ ಕರೆದೊಯ್ದು ಅಲ್ಲಿ ಸ್ಥಳ ಮಹಜರು ಮಾಡಲಾಗುತ್ತಿದೆ. ಕೊಲೆ ನಡೆದ ಬಳಿಕ ದರ್ಶನ್ ತಮ್ಮ ಆಪ್ತರ ಜೊತೆಗೆ ಮೈಸೂರಿಗೆ ತೆರಳಿದ್ದರು, ಹಾಗಾಗಿ ಅಲ್ಲಿ ಸ್ಥಳ ಮಹಜರು ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ