Vinay Rajkumar Birthday: ನಟ ವಿನಯ್​ ರಾಜ್​ಕುಮಾರ್​ ಜನ್ಮದಿನಕ್ಕೆ ವಿಶೇಷ ವಿಡಿಯೋ​ ಮೂಲಕ ವಿಶ್​ ಮಾಡಿದ ರಾಘಣ್ಣ

| Updated By: Digi Tech Desk

Updated on: May 07, 2021 | 9:25 AM

Happy Birthday Vinay Rajkumar: ವಿನಯ್​ ರಾಜ್​ಕುಮಾರ್​ ಅವರಿಗೆ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕ ವಿಶ್​ ಮಾಡುತ್ತಿದ್ದಾರೆ. ಪುತ್ರನ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್​ ಶುಭಕೋರಿದ್ದಾರೆ.

Vinay Rajkumar Birthday: ನಟ ವಿನಯ್​ ರಾಜ್​ಕುಮಾರ್​ ಜನ್ಮದಿನಕ್ಕೆ ವಿಶೇಷ ವಿಡಿಯೋ​ ಮೂಲಕ ವಿಶ್​ ಮಾಡಿದ ರಾಘಣ್ಣ
ವಿನಯ್ ರಾಜ್​ಕುಮಾರ್​
Follow us on

ಡಾ. ರಾಜ್​ಕುಮಾರ್​ ಕುಟುಂಬದ ಮೂರನೇ ತಲೆಮಾರಿನ ಹೀರೋ ಆಗಿ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ನಟ ವಿನಯ್​ ರಾಜ್​ಕುಮಾರ್​ ಅವರಿಗೆ ಇಂದು (ಮೇ 7) ಹುಟ್ಟುಹಬ್ಬ. ಕೊರೊನಾ ಹರಡುವ ಭೀತಿಯಲ್ಲಿ ಯಾವುದೇ ನಟರು ಕೂಡ ಈ ಸಂದರ್ಭದಲ್ಲಿ ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ, ವಿನಯ್​ ರಾಜ್​ಕುಮಾರ್​ ಅವರಿಗೆ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕವೇ ವಿಶ್​ ಮಾಡುತ್ತಿದ್ದಾರೆ.

ಪುತ್ರನ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್​ ಶುಭಕೋರಿದ್ದಾರೆ. ಅಣ್ಣಾವ್ರ ಮಡಿಲಲ್ಲಿ ಆಡಿ ಬೆಳದವರು ವಿನಯ್​. ಚಿಕ್ಕ ವಯಸ್ಸಿನಿಂದ ಹಿಡಿದು ತಾರುಣ್ಯದವರೆಗೆ ಡಾ. ರಾಜ್​ ಜೊತೆಗೆ ಅವರು ಕಳೆದ ಅನೇಕ ಕ್ಷಣಗಳು ಫೋಟೋಗಳಲ್ಲಿ ಸೆರೆಯಾಗಿವೆ. ಆ ಫೋಟೋಗಳನ್ನೆಲ್ಲ ಒಳಗೊಂಡಿರುವ ಒಂದು ವಿಡಿಯೋವನ್ನು ರಾಘಣ್ಣ ಹಂಚಿಕೊಂಡಿದ್ದಾರೆ. ‘ಚಿನ್ನ ಎಂದೂ ನಗುತಿರು, ನನ್ನ ಸಂಗ ಬಿಡದಿರು..’ ಹಾಡಿನ ಹಿನ್ನೆಲೆಯಲ್ಲಿ ಪುತ್ರನಿಗೆ ಅವರು ವಿಶ್​ ಮಾಡಿದ್ದಾರೆ.

ಆಕಸ್ಮಿಕ, ಅನುರಾಗದ ಅಲೆಗಳು, ಒಡಹುಟ್ಟಿದವರು, ಓಂ, ಹೃದಯ ಹೃದಯ ಮುಂತಾದ ಸಿನಿಮಾಗಳಲ್ಲಿ ವಿಜಯ್​ ರಾಜ್​ಕುಮಾರ್​ ಅವರು ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಸಿನಿಮಾ ಕುಟುಂಬದಲ್ಲೇ ಬೆಳೆದ ಅವರು 2015ರಲ್ಲಿ ಹೀರೋ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ವಿನಯ್​ ನಟನೆಯ ಮೊದಲ ಸಿನಿಮಾ ‘ಸಿದ್ಧಾರ್ಥ’. ಆ ಚಿತ್ರಕ್ಕೆ ಅವರು ಸೈಮಾ ಅವಾರ್ಡ್​ ಪಡೆದುಕೊಂಡರು.

ಹಲವು ಬಗೆಯ ಪಾತ್ರಗಳನ್ನು ವಿನಯ್​ ಪ್ರಯತ್ನಿಸುತ್ತಿದ್ದಾರೆ. 2016ರಲ್ಲಿ ‘ರನ್​ ಆ್ಯಂಟೊನಿ’ ಚಿತ್ರದಲ್ಲಿ ಅವರು ನಟಿಸಿದರು. 2018ರಲ್ಲಿ ಬಂದ ‘ಅನಂತು ವರ್ಸಸ್​ ನುಸ್ರತ್​’ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ ಸಿಕ್ಕಿತು. ಸದ್ಯ ವಿನಯ್​ ನಟಿಸುತ್ತಿರುವ ಟೆನ್​, ಪೆಪೆ ಮತ್ತು ಗ್ರಾಮಾಯಣ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಟೆನ್​ ಚಿತ್ರದಲ್ಲಿ ಅವರು ಬಾಕ್ಸರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ:

ಡಾ. ರಾಜ್​ ನಿಧನರಾದ ದಿನ ಆಕಾಶ ನೋಡಿಕೊಂಡು ದೇವರಿಗೆ ಬೈಯ್ದಿದ್ದ ಮೊಮ್ಮಗಳು ಧನ್ಯಾ!

ರಾಜ್​ಕುಮಾರ್​ ಕಿಡ್ನ್ಯಾಪ್​​ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್​ಕ್ಲ್ಯೂಸಿವ್ ಸಂದರ್ಶನ

Published On - 9:15 am, Fri, 7 May 21