
ವಿಷ್ಣುವರ್ಧನ್ (Vishnuvardhan) ಅವರಿಗೆ ಇಂದು (ಸೆಪ್ಟೆಂಬರ್ 17) ಜನ್ಮದಿನ. ಈ ವಿಶೇಷ ದಿನವನ್ನು ಫ್ಯಾನ್ಸ್ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ವೇಳೆ ಅವರ ಹಳೆಯ ಘಟನೆಗಳ ಬಗ್ಗೆ ನೆನಪಿಸಿಕೊಳ್ಳಲೇಬೇಕು. ವಿಷ್ಣು ನಟಿಸಿದ ಸೂಪರ್ ಹಿಟ್ ಚಿತ್ರಗಳಲ್ಲಿ ‘ಬಂಧನ’ ಕೂಡ ಒಂದು. ಈ ಸಿನಿಮಾನ ತಡೆಯಲು ಅನೇಕ ಪ್ರಯತ್ನಗಳು ನಡೆದವು. ಆದರೆ, ಯಾವುದು ಕೂಡ ಸಿನಿಮಾ ತಡೆಯಲು ಸಾಧ್ಯವಾಗಿಲ್ಲ. ವಿಷ್ಣು ಜನ್ಮದಿನದ (ಸೆಪ್ಟೆಂಬರ್ 18) ಪ್ರಯುಕ್ತ ಆ ಘಟನೆ ನೆನಪಿಸಿಕೊಳ್ಳೋಣ.
1984ರಲ್ಲಿ ಬಂಧನ ಸಿನಿಮಾ ರಿಲೀಸ್ ಆಯಿತು. ವಿಷ್ಣುವರ್ಧನ್ ಹಾಗೂ ಸುಹಾಸಿನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಜೈ ಜಗದೀಶ್ ಕೂಡ ಸಿನಿಮಾದ ಭಾಗ ಆಗಿದ್ದರು. ಈ ಸಿನಿಮಾ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಭಗ್ನ ಪ್ರೇಮದ ಕಥೆ ಹೊಂದಿತ್ತು. ಆಗಿನ ಕಾಲಕ್ಕೆ ಚಿತ್ರ ಸೂಪರ್ ಹಿಟ್ ಆಯಿತು. ಆದರೆ, ಇದನ್ನು ತಡೆಯೋ ಪ್ರಯತ್ನಗಳು ನಡೆದವು.
ಈ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಈ ಮೊದಲು ಮಾತನಾಡಿದ್ದರು. ‘ನನ್ನ ಬಂಧನ ಸಿನಿಮಾ ರಿಲೀಸ್ ಆಗಿತ್ತು. ಹೆಂಗಸರು ಸಿನಿಮಾ ನೋಡಲು ಬರಬಾರದು ಎಂದು ಥಿಯೇಟರ್ ಒಳಗೆ ಖಾರದ ಪುಡಿ ಎರಚಲು ಆರಂಭಿಸಿದರು. ಟಿಕೆಟ್ ಕೌಂಟರ್ ಬಳಿ ಬ್ಲೇಡ್ ಹೊಡೆಯೋ ಕೆಲಸ ಆಗಿತ್ತು. ಈ ವೇಳೆ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಸಹಾಯ ಮಾಡಿದರು. ಪೊಲೀಸರ ಬಳಿ ರಕ್ಷಣೆಗೆ ಸೂಚಿಸಿದರು’ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದರು.
ಇದನ್ನೂ ಓದಿ: ಆತ್ಮೀಯ ಗೆಳೆಯರಾಗಿದ್ದ ವಿಷ್ಣುವರ್ಧನ್-ರಾಜೇಂದ್ರ ಸಿಂಗ್ ಬಾಬು ದೂರಾಗಿದ್ದೇಕೆ?
ಪೊಲೀಸರು ಕಠಿಣ ಕ್ರಮ ಕೈಗೊಂಡರು. 25 ಜನರನ್ನು ಬಂಧಿಸುವ ಕೆಲಸ ಕೂಡ ಆಯಿತು. ಮೈಸೂರಲ್ಲಿ ಕೆಲ ಕಿಡಿಗೇಡಿಗಳು ವಿಷ್ಣು ಕಟೌಟ್ ಸುಡೋ ಕೆಲಸ ಮಾಡಿದರು. ಆದರೆ, ಯಾವುದೇ ಪ್ರಯತ್ನಗಳು ಯಶಸ್ಸು ಕಾಣಲೇ ಇಲ್ಲ. ಸಿನಿಮಾನ ಯಾರೂ ನಿಲ್ಲಿಸೋಕೆ ಆಗಲಿಲ್ಲ. 25 ಸೆಂಟರ್ಗಳಲ್ಲಿ 25 ವಾರ ಸಿನಿಮಾ ಪ್ರದರ್ಶನ ಕಂಡಿತು. ಇದು ಸಿನಿಮಾ ಮಾಡಿದ ಸಾಧನೆ. 25 ವಾರ ಆ ಕಟೌಟ್ ಹಾಗೆಯೇ ಇತ್ತು. ವಿಷ್ಣು ಬರ್ತ್ಡೇನ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಆದರೆ, ಇದಕ್ಕೆ ಹಲವು ಅಡೆತಡೆಗಳು ಎದುರಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Thu, 18 September 25