ಯುವ ವಕೀಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಶ್ರೀದೇವಿ

ಯುವ ಹಾಗೂ ಕನ್ನಡದ ನಟಿಯೊಬ್ಬರ ಮಧ್ಯೆ ಆಪ್ತತೆ ಬೆಳೆದಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ಶ್ರೀದೇವಿ ವಿಚ್ಛೇದನಕ್ಕೆ ಮುಂದಾದರೂ ಎನ್ನುವ ಮಾತು ಇತ್ತು. ಆದರೆ, ಯುವ ವಕೀಲರು ಇದನ್ನು ಅಲ್ಲಗಳೆದಿದ್ದಾರೆ. ಅವರು ಬೇರೆಯದೇ ರೀತಿಯ ಹೇಳಿಕೆ ನೀಡಿದ್ದಾರೆ.

ಯುವ ವಕೀಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಶ್ರೀದೇವಿ
ಯುವ ವಕೀಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಶ್ರೀದೇವಿ

Updated on: Jun 11, 2024 | 1:26 PM

ಶ್ರೀದೇವಿ (Sridevi) ಅವರಿಗೆ ಅನೈತಿಕ ಸಂಬಂಧ ಇದೆ, ರಾಜ್​ಕುಮಾರ್ ಅಕಾಡೆಮಿಯಲ್ಲಿ ಅವರು ಹಣದ ಅವ್ಯವಹಾರ ಮಾಡಿದ್ದಾರೆ ಎಂದು ಯುವ ಪರ ವಕೀಲರು ಆರೋಪಿಸಿದ್ದರು. ಇದನ್ನು ಶ್ರೀದೇವಿ ಅವರು ಅಲ್ಲಗಳೆದಿದ್ದಾರೆ. ಅವರಿಗೆ ಈ ಬೆಳವಣಿಗೆಯಿಂದ ಶಾಕ್​ ಎನಿಸಿದೆ. ಈ ಪ್ರಕರಣದ ಬಗ್ಗೆ ಶ್ರೀದೇವಿ ಪರ ವಕೀಲೆ ದೀಪ್ತಿ ಅಯಥಾನ್ ಮಾತನಾಡಿದ್ದಾರೆ. ಅವರು ಶ್ರೀದೇವಿ ಪರವಾಗಿ ಯುವ ವಕೀಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ರೆಡಿ ಆಗಿದ್ದಾರೆ.

‘ಇದು ವೈವಾಹಿಕ ಜೀವನದ ಸಮಸ್ಯೆ. ಯುವರಾಜ್ ಪರ ವಕೀಲರು ಮಾತನಾಡಿದ್ದು ನೋಡಿದರೆ ಹೆಣ್ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎಂದು ಗೊತ್ತಾಗುತ್ತದೆ. ಯುವ ಪರ ವಕೀಲರ ಹೇಳಿಕೆಯಿಂದ ಶ್ರೀದೇವಿ ಶಾಕ್ ಆಗಿದ್ದಾರೆ. ಶ್ರಿದೇವಿಗೆ ಡಿಸೆಂಬರ್​ನಲ್ಲಿ ಡಿವೋರ್ಸ್ ನೋಟಿಸ್ ಕೊಟ್ಟಿದ್ದಾರೆ. ನೋಟಿಸ್​ಗೆ ಹೇಗೆ ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ’ ಎಂದು ಶ್ರೀದೇವಿ ಪರ ವಕೀಲೆ ಹೇಳಿದ್ದಾರೆ.

‘ಸತ್ಯಕ್ಕೆ ದೂರವಾದ ಮಾತನ್ನು ಯುವ ಪರ ವಕೀಲರು ಹೇಳಿದ್ದಾರೆ. ಶ್ರೀದೇವಿ ಮಾಧ್ಯಮದ ಮುಂದೆ ಬಂದು ಮಾತಾಡ್ತಿನಿ ಎಂದಿದ್ದಾರೆ. ಓದು ಎಂದು ಯುವ ಅವರೇ ಪತ್ನಿಯನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ. ಯುವ ವಕೀಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ’ ಎಂದು ದೀಪ್ತಿ ಅಯಥಾನ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ‘ನನ್ನ ಮಗಳು ವಿದ್ಯಾವಂತೆ, ಅವಳಿಗೆ ದುಡಿದು ತಿನ್ನೋ ತಾಕತ್ತಿದೆ’; ಯುವ ಮಾವ ಭೈರಪ್ಪ ಮಾತು 

ಯುವ ಹಾಗೂ ಕನ್ನಡದ ನಟಿಯೊಬ್ಬರ ಮಧ್ಯೆ ಆಪ್ತತೆ ಬೆಳೆದಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ಶ್ರೀದೇವಿ ವಿಚ್ಛೇದನಕ್ಕೆ ಮುಂದಾದರೂ ಎನ್ನುವ ಮಾತು ಇತ್ತು. ಆದರೆ, ಯುವ ಪರ ವಕೀಲರು ಸುದ್ದಿಗೋಷ್ಠಿ ನಡೆಸಿ ಶ್ರೀದೇವಿ ವಿರುದ್ಧ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಈ ಹೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.