ಗಿಲ್ಲಿ ನಟಿಸಿದ್ರೂ ‘ಡೆವಿಲ್’ ಟ್ರೇಲರ್​​ನ ಬಿಗ್ ಬಾಸ್​​ನಲ್ಲಿ ಏಕೆ ಹಾಕಿಲ್ಲ? ಬೇರೆಯದೇ ಕಾರಣ ಕೊಟ್ಟ ರಜತ್

ಬಿಗ್ ಬಾಸ್ ಮನೆಯಲ್ಲಿ ಹಲವು ಸಿನಿಮಾಗಳ ಪ್ರಚಾರವಾದರೂ, ಗಿಲ್ಲಿ ನಟಿಸಿದ 'ಡೆವಿಲ್' ಚಿತ್ರದ ಟ್ರೇಲರ್ ಪ್ರಸಾರವಾಗಲಿಲ್ಲ. ಇದಕ್ಕೆ ರಜತ್ ಸ್ಪಷ್ಟನೆ ನೀಡಿದ್ದು, ಸಿನಿಮಾ ತಂಡ ಬಿಗ್ ಬಾಸ್ ವಾಹಿನಿಯನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ. ಇತರ ಸಿನಿಮಾಗಳು ಪ್ರಚಾರ ಪಡೆದರೆ, ಡೆವಿಲ್ ಚಿತ್ರತಂಡ ಯಾಕೆ ಮುಂದೆ ಬರಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿನಿಮಾ ಈಗಾಗಲೇ 27 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.

ಗಿಲ್ಲಿ ನಟಿಸಿದ್ರೂ ‘ಡೆವಿಲ್’ ಟ್ರೇಲರ್​​ನ ಬಿಗ್ ಬಾಸ್​​ನಲ್ಲಿ ಏಕೆ ಹಾಕಿಲ್ಲ? ಬೇರೆಯದೇ ಕಾರಣ ಕೊಟ್ಟ ರಜತ್
ಗಿಲ್ಲಿ-ದರ್ಶನ್

Updated on: Dec 22, 2025 | 2:42 PM

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಹಲವು ಸಿನಿಮಾಗಳ ಪ್ರಮೋಷನ್ ಆಗಿದೆ. ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಟ್ರೇಲರ್ ಪ್ರಸಾರ ಕಂಡಿದೆ. ರಾಶಿಕಾ ಶೆಟ್ಟಿ ಅವರ ‘ಪ್ಯಾರ್’ ಸಿನಿಮಾ ಪ್ರಮೋಷನ್ ಕೂಡ ಆಗಿದೆ. ಆದರೆ, ಗಿಲ್ಲಿ ನಟಿಸಿದ ‘ಡೆವಿಲ್’ ಬಗ್ಗೆ ಯಾವುದೇ ಪೋಸ್ಟರ್ ಆಗಲಿ, ವಿಡಿಯೋ ಆಗಲಿ ಪ್ರಸಾರ ಕಂಡಿಲ್ಲ. ಹೀಗೇಕೆ ಎಂಬ ಪ್ರಶ್ನೆಗೆ ರಜತ್ ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಇತ್ತೀಚೆಗೆ ರಜತ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ. ಅವರು ಒಂದು ತಿಂಗಳ ಕಾಲ ದೊಡ್ಮನೆಯಲ್ಲಿ ಇದ್ದರು. ಕಳೆದ ಸೀಸನ್​ ಅಲ್ಲಿ ಮಿಂಚಿದ್ದ ರಜತ್ ಈ ಬಾರಿಯೂ ಬಿಗ್ ಬಾಸ್ ಅಲ್ಲಿ ಮಿಂಚು ಹರಿಸಿದ್ದರು. ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಅತಿಥಿಯಾಗಿ. ಅವರಿಗೆ ಈ ಬಾರಿಯ ಬಿಗ್ ಬಾಸ್ ಹೊಸ ರೀತಿಯ ಅನುಭವ ನೀಡಿದೆ. ಎಲ್ಲಾ ಸ್ಪರ್ಧಿಗಳ ಜೊತೆ ಕಿತ್ತಾಡಿಕೊಂಡಿದ್ದ ರಜತ್ ಗಿಲ್ಲಿ ಜೊತೆ ಚೆನ್ನಾಗಿಯೇ ಇದ್ದರು. ಅವರು ಗಿಲ್ಲಿ ನಟಿಸಿದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

‘ಡೆವಿಲ್’ ಸಿನಿಮಾದ ಟ್ರೇಲರ್​ನ ಏಕೆ ಪ್ರಸಾರ ಮಾಡಿಲ್ಲ ಎಂಬ ಪ್ರಶ್ನೆಯನ್ನು ರಜತ್​​ಗೆ ಕೇಳಲಾಯಿತು. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಸಿನಿಮಾ ತಂಡದವರು ಬಂದು ಅಪ್ರೋಚ್ ಮಾಡಿಲ್ಲ. ಅದಕ್ಕೆ ಬಿಗ್ ಬಾಸ್​ನಲ್ಲಿ ಡೆವಿಲ್ ಟ್ರೇಲರ್ ಹಾಕಿಲ್ಲ’ ಎಂದಿದ್ದಾರೆ ರಜತ್.

ಇದನ್ನೂ ಓದಿ: ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ

ಬಿಗ್ ಬಾಸ್ ಮನೆಯಲ್ಲಿ ನಿತ್ಯವೂ ಬೆಳಿಗ್ಗೆ ಹಾಡನ್ನು ಪ್ರಸಾರ ಮಾಡಲಾಗುತ್ತದೆ. ಇದಕ್ಕೆ ವಾಹಿನಿಯವರು ಹಾಡಿನ ಹಕ್ಕಿರೋ ಸಂಸ್ಥೆಯ ಜೊತೆ ಮಾತುಕತೆ ನಡೆಸಿ, ಒಪ್ಪಂದ ಮಾಡಿಕೊಂಡ ಬಳಿಕವೇ ಪ್ರಸಾರ ಮಾಡುತ್ತಾರೆ. ಅದೇ ರೀತಿ ಟಿವಿಯಲ್ಲಿ ಟ್ರೇಲರ್​​ಗಳನ್ನು ಪ್ರಸಾರ ಮಾಡಬೇಕು ಎಂದಾಗ ಅದಕ್ಕೆ ಅದರದ್ದೇ ಆದ ಪ್ರಕ್ರಿಯೆ ಇರುತ್ತದೆ. ಇನ್ನು ತಂಡದವರು ಕೂಡ ಸಂಪರ್ಕಿಸಿಲ್ಲ. ಹೀಗಾಗಿ, ಬಿಗ್ ಬಾಸ್​ ಅಲ್ಲಿ ‘ಡೆವಿಲ್’ ಟ್ರೇಲರ್ ಪ್ರಸಾರ ಕಂಡಿಲ್ಲ.‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗಿದೆ. ಈ ಚಿತ್ರ ಈವರೆಗೆ 27 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.