‘ಕೆಜಿಎಫ್ 3’ ಮಾಡದೆ ಹೊಸ ರಿಸ್ಕ್ ತಗೊಂಡಿದ್ದೇಕೆ? ಕೊನೆಗೂ ಮೌನ ಮುರಿದ ನಟ ಯಶ್

'ಕೆಜಿಎಫ್ 2' ಸಕ್ಸಸ್ ನಂತರ 'ಕೆಜಿಎಫ್ 3' ಮಾಡದೆ ಹೊಸ ಸಿನಿಮಾ ಮಾಡುವ ರಿಸ್ಕ್ ತಗೊಂಡಿದ್ದೇಕೆ ಎಂಬ ಪ್ರಶ್ನೆಗೆ ನಟ ಯಶ್ 'ಆಪ್ ಕಿ ಅದಾಲತ್' ಶೋನಲ್ಲಿ ಉತ್ತರಿಸಿದ್ದಾರೆ. 'ಮನೆ ಬಿಟ್ಟು ಬಂದದ್ದಕ್ಕಿಂತ ದೊಡ್ಡ ರಿಸ್ಕ್ ಬೇರೊಂದಿಲ್ಲ, ನನಗೆ ರಿಸ್ಕ್ ತಗೊಂಡು ಬಾಯುವುದು ಇಷ್ಟ' ಎಂದು ಯಶ್ ಹೇಳಿದ್ದಾರೆ.

ಕೆಜಿಎಫ್ 3 ಮಾಡದೆ ಹೊಸ ರಿಸ್ಕ್ ತಗೊಂಡಿದ್ದೇಕೆ? ಕೊನೆಗೂ ಮೌನ ಮುರಿದ ನಟ ಯಶ್
ಯಶ್

Updated on: Aug 15, 2026 | 1:10 PM

ಮುಖ್ಯಾಂಶಗಳು

  • 'ಕೆಜಿಎಫ್ 3' ಬಿಟ್ಟು ಹೊಸ ರಿಸ್ಕ್ ತಗೊಂಡಿದ್ದೇಕೆ ರಾಕಿ ಭಾಯ್?
  • 'ಆಪ್ ಕಿ ಅದಾಲತ್' ಶೋನಲ್ಲಿ ಯಶ್ ನೀಡಿದ ಮಾಸ್ ಉತ್ತರ ವೈರಲ್
  • 'ಮನೆ ಬಿಟ್ಟು ಬಂದಿದ್ದಕ್ಕಿಂತ ದೊಡ್ಡ ರಿಸ್ಕ್ ಬೇರೊಂದಿಲ್ಲ' ಎಂದ ಯಶ್

‘ ರಾಕಿಂಗ್ ಸ್ಟಾರ್’ ಯಶ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದವರು. ‘ಕೆಜಿಎಫ್ 2’ ಸಿನಿಮಾದ ಬೃಹತ್ ಯಶಸ್ಸಿನ ನಂತರ ಸುಲಭವಾಗಿ ಕೋಟಿ ಕೋಟಿ ಹಣ ಹಾಗೂ ಖ್ಯಾತಿ ತಂದುಕೊಡುವ ‘ಕೆಜಿಎಫ್ ಚಾಪ್ಟರ್ 3’ ಮಾಡಲು ಅವಕಾಶ ಇತ್ತು. ಆದರೆ, ಇದರ ಬದಲು, ಹೊಸ ಸಾಹಸಕ್ಕೆ ಕೈಹಾಕಿದ್ದೇಕೆ ಎಂಬ ಪ್ರಶ್ನೆಗೆ ಯಶ್ ಅವರು ನೀಡಿದ ಉತ್ತರ ಈಗ ಸಖತ್ ವೈರಲ್ ಆಗುತ್ತಿದೆ.

ಖ್ಯಾತ ನಿರೂಪಕ ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಟಿವಿ ಶೋನಲ್ಲಿ ಭಾಗವಹಿಸಿದ್ದ ಯಶ್ ಅವರ ಬಳಿ, ‘ಕೆಜಿಎಫ್ 2 ನಂತಹ ದೊಡ್ಡ ಹಿಟ್ ಸಿಕ್ಕ ಮೇಲೂ ಕೆಜಿಎಫ್ 3 ಮಾಡಿ ಹಣ ಹಾಗೂ ಖ್ಯಾತಿಗಳಿಸದೆ ಹೊಸ ಸಿನಿಮಾ ಮಾಡುವ ರಿಸ್ಕ್ ಏಕ ತೆಗೆದುಕೊಂಡ್ರಿ?’ ಎಂದು ಪ್ರಶ್ನಿಸಲಾಯಿತು.

ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಯಶ್, ‘ನನ್ನ ಸ್ವಂತ ಮನೆ ಬಿಟ್ಟು ಚಿತ್ರರಂಗಕ್ಕೆ ಬಂದೆನಲ್ಲ, ಅದಕ್ಕಿಂತ ದೊಡ್ಡ ರಿಸ್ಕ್ ನನಗೆ ಬೇರೊಂದಿಲ್ಲ. ನನಗೆ ಅಪಾಯಗಳ ನಡುವೆ, ರಿಸ್ಕ್ ತೆಗೆದುಕೊಂಡು ಜೀವನ ನಡೆಸುವುದ ಎಂದರೆ ತುಂಬಾ ಇಷ್ಟ’ ಎಂದು ಮಾಸ್‌ ಆಗಿ ಉತ್ತರಿಸಿದ್ದಾರೆ. ಯಶ್ ಅವರ ಈ ದಿಟ್ಟ ಉತ್ತರಕ್ಕೆ ಪ್ರೇಕ್ಷಕರಿಂದ ಭಾರೀ ಚಪ್ಪಾಳೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ.

ಯಶ್ ಅವರು ಪ್ರತಿ ಬಾರಿ ಹೊಸದನ್ನು ಮಾಡಬೇಕು ಎಂದು ಇಷ್ಟಪಡುತ್ತಾರೆ. ಕೆಜಿಎಫ್ ಬಳಿಕ ಅವರನ್ನು ರಾಕಿ ಎಂದು ಗುರುತಿಸುತ್ತಾರೆ. ಆ ಪಾತ್ರ ಮರೆಸುವ ರೀತಿಯಲ್ಲಿ ಒಂದು ಹೊಸ ಪಾತ್ರ ಮಾಡಬೇಕು ಎಂಬುದು ಅವರ ಬಯಕೆ. ಸಿನಿಮಾದಿಂದ ಸಿನಿಮಾಗೆ ಹೊಸ ಹೊಸ ಪಾತ್ರಗಳನ್ನು ಮಾಡಬೇಕು ಎಂಬುದು ಅವರ ಗುರಿ. ಅದನ್ನು ಸಾಧಿಸುವತ್ತ ಅವರು ಪ್ರಯತ್ನ ಯಾವಾಗಲೂ ಇರುತ್ತದೆ.

ಇದನ್ನೂ ಓದಿ: ‘ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ’; ಯಶ್ 

ಯಶ್ ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಗೀತು ಮೋಹನ್​ದಾಸ್ ನಿರ್ದೇಶನ ಇದೆ. ಕಿಯಾರಾ ಅಡ್ವಾಣಿ, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us