ಕನ್ನಡ ಚಿತ್ರರಂಗದಲ್ಲಿ ಲೇಡಿ ಡೈರೆಕ್ಟರ್ಸ್ ಕಡಿಮೆ ಏಕೆ? ಉತ್ತರಿಸಿದ ನಿರ್ದೇಶಕಿ ರಿಷಿಕಾ ಶರ್ಮಾ

|

Updated on: Mar 06, 2024 | 11:41 AM

Women's Day 2024: ನಟನೆ ಎಂದಾಗ ನಿರ್ದೇಶಕರು ಹೇಳಿದಂತೆ ಮಾಡಿದರೆ ಸಾಕು. ಆದರೆ, ನಿರ್ದೇಶಕರ ಕ್ಯಾಪ್ ತೊಟ್ಟಾಗ ಕೆಲಸ ಹಾಗೂ ಜವಾಬ್ದಾರಿ ಜಾಸ್ತಿ. ನಿರ್ದೇಶನ ಮಾಡಲು ಸಾಕಷ್ಟು ಸಮಯ ಬೇಕು. ಅಷ್ಟು ಸಮಯ ಕೊಡಲು ಎಲ್ಲರೂ ರೆಡಿ ಇರುವುದಿಲ್ಲ. ಈ ಕಾರಣದಿಂದಲೂ ಈ ಕ್ಷೇತ್ರಕ್ಕೆ ಬರುವವರು ಕಡಿಮೆ ಇರಬಹುದು ಎಂದಿದ್ದಾರೆ ಅವರು.

ಕನ್ನಡ ಚಿತ್ರರಂಗದಲ್ಲಿ ಲೇಡಿ ಡೈರೆಕ್ಟರ್ಸ್ ಕಡಿಮೆ ಏಕೆ? ಉತ್ತರಿಸಿದ ನಿರ್ದೇಶಕಿ ರಿಷಿಕಾ ಶರ್ಮಾ
ರಿಷಿಕಾ
Follow us on

ಯುವತಿಯರು, ಮಹಿಳೆಯರು ಸಾಮಾನ್ಯವಾಗಿ ನಾಯಕಿ ಆಗಬೇಕು ಎಂದು ಕನಸು ಕಾಣುವವರೇ ಹೆಚ್ಚು. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಲೇಡಿ ಡೈರೆಕ್ಟರ್ಸ್ ಕಡಿಮೆ. ಇವರುಗಳ ಮಧ್ಯೆ ಅಲ್ಲೊಬ್ಬರು ಇಲ್ಲೊಬ್ಬರು ನಿರ್ದೇಶಕಿ ಆಗಿ ಗಮನ ಸೆಳೆಯುತ್ತಾರೆ. ಈ ಸಾಲಿನಲ್ಲಿ ರಿಷಿಕಾ ಶರ್ಮಾ ಕೂಡ ಒಬ್ಬರು. ‘ಟ್ರಂಕ್’ ಸಿನಿಮಾ (Trunk Movie) ನಿರ್ದೇಶನ ಮಾಡಿ ಮೆಚ್ಚುಗೆ ಪಡೆದ ಅವರು ಉದ್ಯಮಿ ವಿಜಯಾನಂದ ಬಯೋಪಿಕ್ ಮಾಡಿ ಭೇಷ್ ಎನಿಸಿಕೊಂಡರು. ಮಹಿಳಾ ದಿನಾಚರಣೆ (ಮಾರ್ಚ್ 8) ಸಮೀಪ ಇರುವಾಗ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.

ಲೇಡಿ ಡೈರೆಕ್ಟರ್ಸ್ ಕಡಿಮೆ ಏಕೆ ಎನ್ನುವ ಪ್ರಶ್ನೆ ಈಗಲೂ ಇದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ನಾನು ಮೊದಲಿನಿಂದಲೂ ಸಿನಿಮಾ ನೋಡಿಕೊಂಡು ಬೆಳೆದಿದ್ದರಿಂದ ನನಗೆ ತಾಂತ್ರಿಕ ವಿಚಾರಗಳ ಮೇಲೆ ಆಸಕ್ತಿ ಮೂಡಿತ್ತು. ಯುವತಿಯರು ಶೇ.90ರಷ್ಟು ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ನಿರ್ದೇಶನದ ಬಗ್ಗೆ ಯಾರಿಗಾದರೂ ಆಸಕ್ತಿ ಇದ್ದರೆ ನಾನು ಅವರನ್ನು ಬೆಂಬಲಿಸುತ್ತೇನೆ. ಡೈರೆಕ್ಷನ್ ವಿಭಾಗದಲ್ಲಿ ನಿಧಾನವಾಗಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ’ ಎಂದಿದ್ದಾರೆ ರಿಷಿಕಾ.

ಮಹಿಳೆಯರು ನಿರ್ದೇಶನಕ್ಕೆ ಇಳಿದರೆ ಚಿತ್ರರಂಗಕ್ಕೆ ಸಹಕಾರಿ ಆಗಲಿವೆ ಅನ್ನೋದು ರಿಷಿಕಾ ಅಭಿಪ್ರಾಯ. ‘ಕರ್ನಾಟಕದಲ್ಲಿ ಒಳ್ಳೊಳ್ಳೆಯ ನಿರ್ದೇಶಕರಿದ್ದಾರೆ. ಮಹಿಳೆಯರು ನಿರ್ದೇಶನಕ್ಕೆ ಇಳಿದರೆ ಬ್ಯಾಲೆನ್ಸ್ ಆಗುತ್ತದೆ. ಮಹಿಳೆಯರು ಹೆಚ್ಚೆಚ್ಚು ಸಿನಿಮಾ ಮಾಡಿದಾಗ ಅವರ ದೃಷ್ಟಿಕೋನದಿಂದ ಸಿನಿಮಾಗಳು ಬಿಡುಗಡೆ ಆಗುತ್ತವೆ’ ಎಂದಿದ್ದಾರೆ ರಿಷಿಕಾ.

ಹೆಣ್ಣು ಮಕ್ಕಳು ನಟನೆಯತ್ತ ಹೆಚ್ಚು ಆಸಕ್ತಿ ತೋರಿಸೋದು ಏಕೆ ಎಂಬ ಪ್ರಶ್ನೆ ಇದೆ. ಇದಕ್ಕೆ ಉತ್ತರಿಸಿದ ರಿಷಿಕಾ, ‘ನಿರ್ದೇಶಕರಾಗುವರಿಗೆ ಸಾಕಷ್ಟು ಡೆಡಿಕೇಷನ್ ಬೇಕು. ಸಾಕಷ್ಟು ಸ್ಟ್ರಾಂಗ್ ಆಗಿ ಇರಬೇಕು. ನಾನು ರಂಗ ಶಂಕರದಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ನಿರ್ದೇಶನಕ್ಕೆ ಕಾಲಿಟ್ಟೆ. ನಟನೆಯಲ್ಲಿ ಮುಂದುವರೆಯುವುದು ತಪ್ಪೇನು ಇಲ್ಲ. ಅವರಲ್ಲಿ ನಿರ್ದೇಶನದ ಕಲೆ ಇದ್ದರೆ ಅದನ್ನು ಗುರುತಿಸಿ ಪೋಷಿಸಬೇಕು. ಇದರ ಜೊತೆ ಡೆಡಿಕೇಷನ್ ಬೇಕೇ ಬೇಕು’ ಎಂದಿದ್ದಾರೆ ರಿಷಿಕಾ.

ಇದನ್ನೂ ಓದಿ: ಕನ್ನಡದ ಮೊದಲ ಬಯೋಪಿಕ್​ ಸಿನಿಮಾ ;ವಿಜಯಾನಂದ ನಿರ್ದೇಶಕಿ ರಿಷಿಕಾ ಶರ್ಮಾ

ನಟನೆ ಎಂದಾಗ ನಿರ್ದೇಶಕರು ಹೇಳಿದಂತೆ ಮಾಡಿದರೆ ಸಾಕು. ಆದರೆ, ನಿರ್ದೇಶಕರ ಕ್ಯಾಪ್ ತೊಟ್ಟಾಗ ಕೆಲಸ ಹಾಗೂ ಜವಾಬ್ದಾರಿ ಜಾಸ್ತಿ. ನಿರ್ದೇಶನ ಮಾಡಲು ಸಾಕಷ್ಟು ಸಮಯ ಬೇಕು. ಅಷ್ಟು ಸಮಯ ಕೊಡಲು ಎಲ್ಲರೂ ರೆಡಿ ಇರುವುದಿಲ್ಲ. ಈ ಕಾರಣದಿಂದಲೂ ಈ ಕ್ಷೇತ್ರಕ್ಕೆ ಬರುವವರು ಕಡಿಮೆ ಇರಬಹುದು ಎಂದಿದ್ದಾರೆ ಅವರು.

ಮಹಿಳಾ ಡೈರೆಕ್ಟರ್ ಎಂದಾಗ ಕೆಲವರು ಅವರನ್ನು ಗಂಭೀರವಾಗಿ ಸ್ವೀಕರಿಸದೇ ಇರಬಹುದು. ಆದರೆ, ರಿಷಿಕಾಗೆ ಆ ರೀತಿಯ ಅನುಭವ ಆಗಿಲ್ಲ. ಎಲ್ಲರೂ ಸೆಟ್​​ನಲ್ಲಿ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದರಂತೆ. ಅವರ ಮೇಲೆ ಭರವಸೆ ಇಟ್ಟು ಆನಂದ್ ಸಂಕೇಶ್ವರ್ ಅವರು ‘ವಿಜಯಾನಂದ’ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ವಿಜಯ್ ಸಂಕೇಶ್ವರ್ ಕುರಿತ ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:38 am, Wed, 6 March 24