Yash: ಸ್ವಾತಂತ್ರ್ಯ ದಿನಾಚರಣೆಗೆ ನಟ ಯಶ್ ಕೊಟ್ರು ವಿಶೇಷ ಸಂದೇಶ

Hombale Films: ಚಂದನವನದ ನಟ ಯಶ್ ವಿಶೇಷ ಸಂದೇಶದ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.

Yash: ಸ್ವಾತಂತ್ರ್ಯ ದಿನಾಚರಣೆಗೆ ನಟ ಯಶ್ ಕೊಟ್ರು ವಿಶೇಷ ಸಂದೇಶ
ಯಶ್ ಹಂಚಿಕೊಂಡಿರುವ ಚಿತ್ರ
Edited By:

Updated on: Aug 15, 2021 | 1:21 PM

ಸ್ಯಾಂಡಲ್​ವುಡ್​ ತಾರೆಯರು 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಧವಿಧವಾಗಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ನಟ ಯಶ್ ವಿಶೇಷ ಸಂದೇಶದ ಮೂಲಕ ಶುಭಾಶಯವನ್ನು ಕೋರಿದ್ದು, ಎಲ್ಲರ ಗಮನ ಸೆಳೆದಿದೆ. ಟ್ವಿಟರ್​ನಲ್ಲಿ ತಮ್ಮ ಫೊಟೊ ಒಂದನ್ನು ಹಂಚಿಕೊಂಡು ಅದಕ್ಕೆ ಮೂರು ಸಾಲಿನ ಕ್ಯಾಪ್ಶನ್ ನೀಡಿದ್ದಾರೆ. ‘ಮನಸ್ಸಿನಲ್ಲಿ ಸ್ವಾತಂತ್ರ್ಯವಿರಲಿ, ಪದಗಳಲ್ಲಿ ನಂಬಿಕೆಯಿರಲಿ, ನಮ್ಮ ಆತ್ಮದ ಕುರಿತು ಹೆಮ್ಮೆಯಿರಲಿ’ ಎಂದು ಬರೆದುಕೊಂಡಿರುವ ಅವರು, ‘ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಎಲ್ಲರೂ ದೇಶಕ್ಕೆ ನಮಿಸೋಣ’ ಎಂದು ಟ್ವೀಟ್ ಮಾಡಿದ್ದಾರೆ. 

ಯಶ್ ಹಂಚಿಕೊಂಡ ಟ್ವೀಟ್:

ಹೊಂಬಾಳೆ ಫಿಲ್ಮ್ಸ್ ಕೂಡಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದು, ‘ಸ್ವಾತಂತ್ರ್ಯ ತಂದುಕೊಟ್ಟ ಧೀರ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ದೇಶದ ಘನತೆಯನ್ನು ಉತ್ತುಂಗಕ್ಕೇರಿಸಿದ ಮಹನೀಯರಿಗೆ ವಂದನೆಗಳನ್ನು ಸಲ್ಲಿಸುತ್ತಾ, ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡೋಣ’ ಎಂದು ಟ್ವೀಟ್ ಮಾಡಿದೆ.

ಹೊಂಬಾಳೆ ಫಿಲ್ಮ್ಸ್ ಮಾಡಿರುವ ಟ್ವೀಟ್:

ಕನ್ನಡದ ಖ್ಯಾತ ನಟರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ವಿಧವಿಧವಾಗಿ ತಿಳಿಸುತ್ತಿದ್ದಾರೆ. ಕೆಲವು ನಟರು ತಮ್ಮ ಹೊಸ ಸಿನಿಮಾದ ಪೋಸ್ಟರ್, ಟೀಸರ್ ಮುಖಾಂತರ ಶುಭಾಶಯಗಳನ್ನು ಕೋರಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸದ್ಯ ಸಾಲು ಸಾಲು ಸಿನಿಮಾಗಳನ್ನು ಘೋಷಿಸಿದ್ದು, ಯಶ್ ನಟನೆಯ ಕೆಜಿಎಫ್ 2ನ ಕೆಲಸಗಳು ಮುಗಿದಿವೆ. ಸಲಾರ್ ಚಿತ್ರದ  ಶೂಟಿಂಗ್ ನಡೆಯುತ್ತಿದ್ದು, ಉಳಿದ ಚಿತ್ರಗಳ ಚಿತ್ರೀಕರಣ ಇನ್ನು ಪ್ರಾರಂಭವಾಗಬೇಕಿದೆ.

ಇದನ್ನೂ ಓದಿ:

ರಾಜಕೀಯ ಒತ್ತಡದ ನಡುವೆಯೂ ಕುಮಾರಸ್ವಾಮಿ ಎಷ್ಟೊಂದು ಓದ್ತಾರೆ!: HDK ಸಾಹಿತ್ಯ ಅಭಿರುಚಿ ತಿಳಿಸಿದ ಎಸ್.ನಾರಾಯಣ್

ಕೆಟ್ಟ ಭಾಷೆಯಲ್ಲಿ ಬಿಗ್​ ಬಾಸ್​ಗೆ ಬೈಯ್ಯುವ ಅರವಿಂದ್​-ದಿವ್ಯಾ ಫ್ಯಾನ್ಸ್​ಗೆ ಪರಮೇಶ್ವರ​ ಗುಂಡ್ಕಲ್​ ನೇರ ಪ್ರಶ್ನೆ

Published On - 1:20 pm, Sun, 15 August 21