ಜನರ ಟೀಕೆ ಬಳಿಕ ಯಶ್ ಜೊತೆ ನಾಯಕಿ ಮುಖ ತೋರಿಸಿದ ‘ಟಾಕ್ಸಿಕ್’ ಚಿತ್ರತಂಡ

ಯಶ್ ಮತ್ತು ಕಿಯಾರಾ ಅಡ್ವಾಣಿ ಅವರು ‘ತಬಾಹಿ’ ಹಾಡಿನಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಮೊದಲು ಬಿಡುಗಡೆ ಮಾಡಿದ್ದ ಪೋಸ್ಟರ್​​ನಲ್ಲಿ ಕಿಯಾರಾ ಅಡ್ವಾಣಿ ಅವರ ಮುಖ ಮರೆಮಾಚಲಾಗಿತ್ತು. ನೆಟ್ಟಿಗರಿಂದ ಟೀಕೆ ಎದುರಾದ ಬಳಿಕ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಜನರ ಟೀಕೆ ಬಳಿಕ ಯಶ್ ಜೊತೆ ನಾಯಕಿ ಮುಖ ತೋರಿಸಿದ ‘ಟಾಕ್ಸಿಕ್’ ಚಿತ್ರತಂಡ
Kiara Advani, Yash

Updated on: Mar 01, 2026 | 9:51 AM

‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ಮೊದಲ ಹಾಡಿನ ಬಿಡುಗಡೆಗೆ ಸಮಯ ನಿಗದಿ ಆಗಿದೆ. ಮಾರ್ಚ್ 2ರಂದು ಮಧ್ಯಾಹ್ನ 12 ಗಂಟೆ 59 ನಿಮಿಷಕ್ಕೆ ‘ತಬಾಹಿ’ (Tabaahi) ಹಾಡು ರಿಲೀಸ್ ಆಗಲಿದೆ. ಈ ವಿಷಯ ತಿಳಿಸಲು ಒಂದು ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಕೇವಲ ಯಶ್ (Yash) ಮುಖ ಮಾತ್ರ ಕಾಣಿಸಿತ್ತು. ಅದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಟೀಕೆ ಎದುರಾಗುತ್ತಿದ್ದಂತೆಯೇ ನಾಯಕಿಯ ಮುಖ ತೋರಿಸಲಾಗಿದೆ.

ಯಶ್ ಮಾತ್ರವಲ್ಲದೇ ಹಲವು ಕಲಾವಿದರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮುಂತಾದವರು ಅಭಿನಯಿಸಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ಟೀಸರ್​​ನಲ್ಲಿ ಯಾವುದೇ ನಟಿಯ ಮುಖ ಕಾಣಿಸಿಲ್ಲ. ಹಾಡಿನ ಪೋಸ್ಟರ್​ನಲ್ಲಿ ಕೂಡ ನಾಯಕಿಯ ಮುಖ ಮರೆಮಾಚಲಾಗಿತ್ತು.

ಪ್ರಚಾರದಲ್ಲಿ ಕೇವಲ ಯಶ್ ಅವರನ್ನು ಹೈಲೈಟ್ ಮಾಡಲಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಯಶ್ ಜೊತೆ ಕಿಯಾರಾ ಅಡ್ವಾಣಿ ಅವರ ಮುಖ ಕೂಡ ಇದರಲ್ಲಿ ಕಾಣಿಸಿದೆ. ಈ ಸಿನಿಮಾದಲ್ಲಿ ಹಲವು ನಟಿಯರು ಅಭಿನಯಿಸಿರುವುದರಿಂದ ಅವರ ಪಾತ್ರಗಳ ಬಗ್ಗೆ ಜನರಿಗೆ ಕೌತುಕ ಹೆಚ್ಚಿದೆ.

ಹೊಸ ಪೋಸ್ಟರ್ ನೋಡಿದ ಕೆಲವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇದು ಎಐ ಮೂಲಕ ರಚಿಸಿದ ಪೋಸ್ಟರ್ ಎಂಬುದು ನೆಟ್ಟಿಗರು ಅನುಮಾನ. ಯಾಕೆಂದರೆ ಈ ಪೋಸ್ಟರ್​​ನಲ್ಲಿ ಕಿಯಾರಾ ಅಡ್ವಾಣಿ ಅವರ ಕೈ ವಿಚಿತ್ರವಾಗಿ ಕಾಣಿಸಿದೆ. ಸಹಜವಾಗಿ ಇರುವುದಕ್ಕಿಂತಲೂ ಹೆಚ್ಚು ಉದ್ದವಾಗಿದೆ. ಅದನ್ನು ನೋಡಿದ ಬಳಿಕ ಅನುಮಾನ ಮೂಡಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ಇಂಗ್ಲಿಷ್ ಆವೃತ್ತಿ ರಿಲೀಸ್ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಗೊಂದಲ

ಮಾರ್ಚ್ 2ರಂದು ರಿಲೀಸ್ ಆಗಲಿರುವ ಮೊದಲ ಹಾಡಿಗೆ ವಿಶಾಲ್ ಮಿಶ್ರಾ ಅವರು ಸಂಗೀತ ನೀಡಿದ್ದಾರೆ. ಇದರ ಕನ್ನಡ ವರ್ಷನ್​​ಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಆದ್ದರಿಂದ ಹೈಪ್ ಜಾಸ್ತಿ ಆಗಿದೆ. ಟ್ರೇಲರ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:49 am, Sun, 1 March 26

Follow Us