
ರಾಕಿಂಗ್ ಸ್ಟಾರ್ ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆದ ಬಳಿಕ ಕನ್ನಡಿಗರಿಗೆ ಸಿಗೋದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಅವರು ಆಗಾಗ ಅದನ್ನು ಸುಳ್ಳು ಮಾಡುತ್ತಾರೆ. ಈಗ ಅವರು ಕನ್ನಡದ ಹೊಸ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಹೊಸಬರೇ ಮಾಡಿದ ‘ಅಮೃತ ಅಂಜನ್’ ಹೆಸರಿನ ಚಿತ್ರಕ್ಕೆ ಯಶ್ (Yash) ಶುಭ ಹಾರೈಸಿದ್ದಾರೆ. ಇದು ತಂಡದ ಖುಷಿ ಹೆಚ್ಚಿಸಿದೆ.
‘ಅಮೃತಾಂಜನ’ ಹೆಸರಿನ ಶಾರ್ಟ್ ಸಿನಿಮಾ ಬಂದಿತ್ತು. ಇದು ಸಖತ್ ಫೇಮಸ್ ಆಯಿತು. ಈಗ ಅದೇ ತಂಡ ‘ಅಮೃತ ಅಂಜನ್’ ಹೆಸರಿನ ಸಿನಿಮಾ ಮಾಡಿದೆ. ಪಾಯಲ್ ಚೆಂಗಪ್ಪ, ಗೌರವ್ ಶೆಟ್ಟಿ, ಸುಧಾಕರ್ ಗೌಡ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಜ್ಯೋತಿರಾವ್ ಮೋಹಿತ್ ಇದನ್ನು ನಿರ್ದೇಶನ ಮಾಡಿದ್ದಾರೆ. ಇಂದು (ಜನವರಿ 30) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಯಶ್ ಶುಭ ಹಾರೈಸಿದ್ದಾರೆ.
‘ಅಮೃತಾಂಜನ ತಂಡದ ಕೆಲಸವನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ನೀವು ದೊಡ್ಡ ಕನಸು ಕಂಡಿದ್ದೀರಾ. ಸಣ್ಣ ಕಂಟೆಂಟ್ ಮಾಡುವುದರಿಂದ ಆರಂಭಿಸಿ, ಈಗ ಸಿನಿಮಾ ಮಾಡಿದ್ದೀರಾ. ಇದು ಕಂಟೆಂಟ್ ಮಾಡುವ, ಕಥೆ ಹೇಳುವ ಇನ್ನಷ್ಟು ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಯಶ್ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾರೆ. ಇದು ತಂಡದ ಖುಷಿ ಹೆಚ್ಚಿಸಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಕನ್ನಡದ ಮಹಿಳಾ ನಿರ್ದೇಶಕಿ
ಯಶ್ ಅವರ ವಿಶ್ಗೆ ಇಡೀ ತಂಡ ಖುಷಿಪಟ್ಟಿದೆ. ಸ್ಟಾರ್ ಹೀರೋನಿಂದ ಯುವ ಪ್ರತಿಭೆಗಳಿಗೆ ಬೆಂಬಲ ಸಿಕ್ಕಿದ್ದರಿಂದ ಸಿನಿಮಾಗೆ ಒಂದಷ್ಟು ಮೈಲೇಜ್ ಸಿಗೋ ನಿರೀಕ್ಷೆ ಇದೆ. ಈ ಮೊದಲು ಹಾಸ್ಯ ಪ್ರಧಾನ ಶಾರ್ಟ್ ಫಿಲ್ಮ್ಗಳನ್ನು ಈ ತಂಡದವರು ಮಾಡುತ್ತಿದ್ದರು. ಸಿನಿಮಾ ಕೂಡ ಅದೇ ರೀತಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.