Yash Birthday: ‘ಬಾಸ್​’ ಆದ ರಾಕಿಂಗ್ ಸ್ಟಾರ್​; ಯಶ್​ ಹುಟ್ಟುಹಬ್ಬಕ್ಕೆ ಮಸ್ತ್​​ ಕಾಮನ್ ಡಿಪಿ  

| Updated By: ರಾಜೇಶ್ ದುಗ್ಗುಮನೆ

Updated on: Jan 07, 2023 | 10:17 AM

ಸೆಲೆಬ್ರಿಟಿಗಳ ಬರ್ತ್​ಡೇ ಸಂದರ್ಭದಲ್ಲಿ ಕಾಮನ್ ಡಿಪಿ ಅನಾವರಣ ಆಗೋದು ವಾಡಿಕೆ. ಅದೇ ರೀತಿ ಯಶ್ ಅವರ ಬರ್ತ್​ಡೇಗೆ ಕಾಮನ್ ಡಿಪಿ ಅನಾವರಣಗೊಂಡಿದೆ.

Yash Birthday: ‘ಬಾಸ್​’ ಆದ ರಾಕಿಂಗ್ ಸ್ಟಾರ್​; ಯಶ್​ ಹುಟ್ಟುಹಬ್ಬಕ್ಕೆ ಮಸ್ತ್​​ ಕಾಮನ್ ಡಿಪಿ  
ತಮ್ಮ ನಟನ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಈಗಾಗಲೇ ಕಾಮನ್​ ಡಿಪಿಯನ್ನು ಸಹ ಬಿಡುಗಡೆ ಮಾಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
Follow us on

ಯಶ್ (Yash) ಅವರು ಭಾನುವಾರ (ಡಿಸೆಂಬರ್ 8) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಕುಟುಂಬದ ಜತೆ ದುಬೈಗೆ ಹಾರಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಯಶ್ ಬರ್ತ್​​ಡೇ (Yash Birthday) ಸಂಭ್ರಮ ಜೋರಾಗಿದೆ. ಅನೇಕರು ಯಶ್​ಗೆ ಶುಭಾಶಯ ತಿಳಿಸುತ್ತಿದ್ದಾರೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಕಾಮನ್​ ಡಿಪಿ ಅನಾವರಣಗೊಂಡಿದೆ. ಇದನ್ನು ನೋಡಿ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸೆಲೆಬ್ರಿಟಿಗಳ ಬರ್ತ್​ಡೇ ಸಂದರ್ಭದಲ್ಲಿ ಕಾಮನ್ ಡಿಪಿ ಅನಾವರಣ ಆಗೋದು ವಾಡಿಕೆ. ಅದೇ ರೀತಿ ಯಶ್ ಅವರ ಬರ್ತ್​ಡೇಗೆ ಕಾಮನ್ ಡಿಪಿ ಅನಾವರಣಗೊಂಡಿದೆ. ಎಲ್ಲರೂ ಈ ಫೋಟೋವನ್ನು ಪ್ರೊಫೈಲ್ ಪಿಕ್ಚರ್​​ಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ. ಯಶ್ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತಿದ್ದಾರೆ.

ಇದನ್ನೂ ಓದಿ
‘ನನಗೆ ಮತ್ತಷ್ಟು ಸಮಯ ಕೊಡಿ’ ಎಂದ ಯಶ್​​; ಹೊಸ ಸಿನಿಮಾಗೆ ಕಾಯಬೇಕು ಮತ್ತಷ್ಟು ಸಮಯ
Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಯಶ್ ಅವರು ಹಡಗಿನ ಮೇಲೆ ನಿಂತಿದ್ದಾರೆ. ಹಡಗಿಗೆ ಬಾಸ್ ಎಂದು ಬರೆಯಲಾಗಿದೆ. ನೀರಿರುವ ಭಾಗದಲ್ಲಿ ಫ್ಯಾನ್ಸ್ ನಿಂತಿದ್ದಾರೆ. ಹಿಂಭಾಗದಲ್ಲಿ ರಾಕಿಂಗ್ ಸ್ಟಾರ್ ಎಂದು ಬರೆಯಲಾಗಿದೆ. ಈ ಫೋಟೋ ‘ಕೆಜಿಎಫ್ 2’ ಥೀಮ್​​ನಲ್ಲಿ ಮೂಡಿಬಂದಿದೆ. ‘ಕೆಜಿಎಫ್ 2’ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಕಥಾ ನಾಯಕ ರಾಕಿ (ಯಶ್​) ಹಡಗಿನ ಮೇಲೆ ನಿಂತಿರುತ್ತಾನೆ. ಅದೇ ಸ್ಟೈಲ್​​ನಲ್ಲಿ ಕಾಮನ್​ ಡಿಪಿ ಫೋಟೋ ಇದೆ. ಇದನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದಾರೆ.

ದುಬೈನಲ್ಲಿ ಯಶ್​

ಯಶ್ ಅವರು ದುಬೈಗೆ ಹಾರಿದ್ದಾರೆ. ಕುಟುಂಬದ ಜತೆ ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರು ಅಭಿಮಾನಿಗಳಿಗೆ ಸಿಗುತ್ತಿಲ್ಲ. ಆದಾಗ್ಯೂ ಜನವರಿ 6ರಂದು ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಅಭಿಮಾನಿಗಳ ಜತೆ ಪೋಸ್​ ನೀಡಿದ್ದರು. ಈ ಮೂಲಕ ಅವರ ಬೇಸರವನ್ನು ದೂರ ಮಾಡಿದ್ದರು.

ಹೊಸ ಸಿನಿಮಾ ಬಗ್ಗೆ ಮೂಡಿದೆ ಪ್ರಶ್ನೆ

ಯಶ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ‘ಕೆಜಿಎಫ್ 2’ ಚಿತ್ರ ರಿಲೀಸ್ ಆದಾಗಿನಿಂದಲೂ ಕಾಡುತ್ತಿದೆ. ಯಶ್ ಬರ್ತ್​ಡೇಗೆ ಈ ಬಗ್ಗೆ ಅಪ್​​ಡೇಟ್ ಸಿಗಬಹುದು ಎಂದು ಫ್ಯಾನ್ಸ್ ಕಾದಿದ್ದರು. ಆದರೆ, ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ ಯಶ್​, ‘ನನಗಾಗಿ ಮತ್ತಷ್ಟು ಕಾಯಬೇಕು’ ಎಂದು ಕೋರಿದ್ದರು. ಈ ಮೂಲಕ ಹೊಸ ಸಿನಿಮಾ ಘೋಷಣೆಗೆ ಮತ್ತಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದರು. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ