‘ನನಗೆ ಮತ್ತಷ್ಟು ಸಮಯ ಕೊಡಿ’ ಎಂದ ಯಶ್​​; ಹೊಸ ಸಿನಿಮಾಗೆ ಕಾಯಬೇಕು ಮತ್ತಷ್ಟು ಸಮಯ

ಯಶ್ ಅವರು ಬರೆದ ಈ ಸಾಲಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯಲ್ಲಿ ಚರ್ಚೆಗಳು ಆಗುತ್ತಿವೆ. ಸಾಮಾನ್ಯವಾಗಿ ಸ್ಟಾರ್​​ಗಳ ಬರ್ತ್​ಡೇ ದಿನ ಹೊಸ ಪ್ರಾಜೆಕ್ಟ್​ ಘೋಷಣೆ ಆಗುತ್ತದೆ. ಯಶ್ ಹುಟ್ಟುಹಬ್ಬಕ್ಕೂ ಹೊಸ ಸಿನಿಮಾ ಅನೌನ್ಸ್ ಆಗಬಹುದು ಎನ್ನುವ ನಿರೀಕ್ಷೆ ಇತ್ತು.

‘ನನಗೆ ಮತ್ತಷ್ಟು ಸಮಯ ಕೊಡಿ’ ಎಂದ ಯಶ್​​; ಹೊಸ ಸಿನಿಮಾಗೆ ಕಾಯಬೇಕು ಮತ್ತಷ್ಟು ಸಮಯ
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 07, 2023 | 9:26 AM

ನಟ ಯಶ್ (Yash) ಅವರು ದೊಡ್ಡ ಸ್ಟಾರ್​ ಆಗಿ ಬೆಳೆದಿದ್ದಾರೆ. ‘ಕೆಜಿಎಫ್ 2’ ಬಳಿಕ ಅವರ ಖ್ಯಾತಿ ವಿಶ್ವ ಮಟ್ಟಕ್ಕೆ ಹಬ್ಬಿತ್ತು. ಈಗ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಈ ಬಗ್ಗೆ ಈವರೆಗೂ ಯಾವುದೇ ಖಚಿತ ಸುಳಿವು ಸಿಕ್ಕಿಲ್ಲ. ಯಶ್ 19ನೇ ಚಿತ್ರ ಇದಾಗಿದ್ದು, ಇದಕ್ಕಾಗಿ ಅವರು ಭರ್ಜರಿ ಸಿದ್ಧತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಜನವರಿ 8 ಯಶ್ ಬರ್ತ್​​ಡೇ. ಅಂದು ಈ ಬಗ್ಗೆ ಘೋಷಣೆ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಈ ಊಹೆ ತಪ್ಪಾದಂತಿದೆ. ಯಶ್ ಬರ್ತ್​ಡೇಗೂ (Yash Birthday) ಹೊಸ ಸಿನಿಮಾ ಘೋಷಣೆ ಆಗುವುದು ಅನುಮಾನ ಎನ್ನಲಾಗುತ್ತಿದೆ.

ಇತ್ತೀಚೆಗೆ ಯಶ್ ಅವರು ಅಭಿಮಾನಿಗಳಿಗೆ ಪತ್ರ ಬರೆದಿದ್ದರು. ಈ ಬಾರಿ ನಿಮ್ಮೊಂದಿಗೆ ಬರ್ತ್​ಡೇ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಯಶ್ ಹೇಳಿದ್ದರು. ಇದೇ ವೇಳೆ ಅವರು ಇನ್ನೊಂದು ಮಾತನ್ನು ಹೇಳಿದ್ದರು. ‘ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೋದೆನನ್ನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ’ ಎಂದು ಯಶ್​ ಬರೆದುಕೊಂಡಿದ್ದರು.

ಯಶ್ ಅವರು ಬರೆದ ಈ ಸಾಲಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯಲ್ಲಿ ಚರ್ಚೆಗಳು ಆಗುತ್ತಿವೆ. ಸಾಮಾನ್ಯವಾಗಿ ಸ್ಟಾರ್​​ಗಳ ಬರ್ತ್​ಡೇ ದಿನ ಹೊಸ ಪ್ರಾಜೆಕ್ಟ್​ ಘೋಷಣೆ ಆಗುತ್ತದೆ. ಯಶ್ ಹುಟ್ಟುಹಬ್ಬಕ್ಕೂ ಹೊಸ ಸಿನಿಮಾ ಅನೌನ್ಸ್ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಅದು ಸುಳ್ಳಾಗುವುದು ಸ್ಪಷ್ಟವಾಗುತ್ತಿದೆ.

ಯಶ್ ಮುಂದಿನ ಪ್ರಾಜೆಕ್ಟ್​​ಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಸಾಕಷ್ಟು ಸಿದ್ಧತೆಯ ಅವಶ್ಯಕತೆ ಇದೆ. ಈ ಕಾರಣಕ್ಕೆ ಯಶ್ ಅವರು ಜನವರಿ 8ರಂದು ಸಿನಿಮಾ ಘೋಷಣೆ ಮಾಡುತ್ತಿಲ್ಲ ಎನ್ನಲಾಗಿದೆ. ಈ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಮತ್ತೊಂದು ಕಡೆ ಅಭಿಮಾನಿಗಳು ಯಶ್​ ಘೋಷಣೆಗಾಗಿ ಎಷ್ಟು ದಿನವಾದರೂ ಸರಿ ಕಾಯುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ: Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ

ಬರ್ತ್​​ಡೇ ಆಚರಣೆಗೆ ಯಶ್ ದುಬೈಗೆ ಹಾರಿದ್ದಾರೆ. ಅದಕ್ಕೂ ಮುನ್ನ ಜನವರಿ 6ರಂದು ಅಭಿಮಾನಿಗಳನ್ನು ಯಶ್ ಭೇಟಿ ಮಾಡಿದ್ದರು. ಅಭಿಮಾನಿಗಳೊಂದಿಗೆ ಅವರು ಸೆಲ್ಫಿ ತೆಗೆದುಕೊಂಡಿದ್ದರು. ನಂತರ ಅವರು ದುಬೈಗೆ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ