Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash Birthday: ಯಶ್​​ಗೆ ಬರ್ತ್​ಡೇ ಸಂಭ್ರಮ; ದುಬೈನಲ್ಲಿ ರಾಕಿಂಗ್ ಸ್ಟಾರ್ ಫ್ಯಾಮಿಲಿ

‘ಕೆಜಿಎಫ್ 2’ ಚಿತ್ರದಿಂದ ಯಶ್ ಖ್ಯಾತಿ ವಿಶ್ವಮಟ್ಟಕ್ಕೆ ಹಬ್ಬಿದೆ. ಯಶ್​​ಗೆ ವಿದೇಶದಲ್ಲೂ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಬರ್ತ್​ಡೇಗೆ ವಿದೇಶದಿಂದಲೂ ಶುಭಾಶಯ ಬರುತ್ತಿದೆ.

Yash Birthday: ಯಶ್​​ಗೆ ಬರ್ತ್​ಡೇ ಸಂಭ್ರಮ; ದುಬೈನಲ್ಲಿ ರಾಕಿಂಗ್ ಸ್ಟಾರ್ ಫ್ಯಾಮಿಲಿ
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 08, 2023 | 6:30 AM

ಯಶ್ (Yash) ಅವರು ಇಂದು (ಜನವರಿ 08) ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಹಲವು ಬಾರಿ ಅವರು ಅಭಿಮಾನಿಗಳ ಜತೆಗೂಡಿ ಬರ್ತ್​ಡೇ ಆಚರಣೆ ಮಾಡಿದ್ದಿದೆ. ಈ ಬಾರಿ ಅವರು ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಕುಟುಂಬ ವಿದೇಶಕ್ಕೆ ಹಾರಿದೆ. ದುಬೈನಲ್ಲಿ ಇವರು ಬರ್ತ್​ಡೇ (Yash Birthday) ಆಚರಿಸಿಕೊಳ್ಳುತ್ತಿದ್ದಾರೆ. ಆ ಫೋಟೋಗಳನ್ನು ಯಶ್ ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.

ಯಶ್ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದವರು. ‘ಮೊಗ್ಗಿನ ಮನಸು’ ಚಿತ್ರದ ಮೂಲಕ ಹೀರೋ ಆಗಿ ಬಣ್ಣದ ಲೋಕಕ್ಕೆ ಬಂದರು. ಈ ಸಿನಿಮಾ ಸೂಪರ್​ ಹಿಟ್ ಆಯಿತು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಯಶ್​ಗೆ ಹಲವು ಆಫರ್​​ಗಳು ಬಂದವು. ‘ಕಿರಾತಕ’ ಸಿನಿಮಾ ಯಶ್​ ವೃತ್ತಿಜೀವನಕ್ಕೆ ಮೈಲೇಜ್ ನೀಡಿತು. 2013ರಲ್ಲಿ ಯಶ್ ಡಬಲ್ ಹಿಟ್ ನೀಡಿದರು. ಅವರ ‘ಗೂಗ್ಲಿ’ ಹಾಗೂ ‘ರಾಜಾಹುಲಿ’ ಚಿತ್ರಗಳು ಯಶಸ್ಸು ಕಂಡವು. ‘ಮಿಸ್ಟರ್​ ಆ್ಯಂಡ್ ಮಿಸಸ್​ ರಾಮಾಚಾರಿ’, ‘ಮಾಸ್ಟರ್​ ಪೀಸ್​’ ಚಿತ್ರಗಳು ಕೂಡ ಗೆದ್ದವು.

2017ರಿಂದ ಇಲ್ಲಿಯವರೆಗೆ ಯಶ್ ನಟನೆಯ ಎರಡು ಸಿನಿಮಾಗಳು ಮಾತ್ರ ತೆರೆಗೆ ಬಂದಿವೆ. ಅದು ‘ಕೆಜಿಎಫ್’ (2018) ಹಾಗೂ ‘ಕೆಜಿಎಫ್ 2’ (2022). ಇದರಿಂದ ಯಶ್ ಖ್ಯಾತಿ ಸಾಕಷ್ಟು ಹೆಚ್ಚಿದೆ. ‘ಕೆಜಿಎಫ್ 2’ ಚಿತ್ರದಿಂದ ಯಶ್ ಖ್ಯಾತಿ ವಿಶ್ವಮಟ್ಟಕ್ಕೆ ಹಬ್ಬಿದೆ. ಯಶ್​​ಗೆ ವಿದೇಶದಲ್ಲೂ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಬರ್ತ್​ಡೇಗೆ ವಿದೇಶದಿಂದಲೂ ಶುಭಾಶಯ ಬರುತ್ತಿದೆ.

ಸಾಮಾಜಿಕ ಕೆಲಸ

ಯಶ್ ಅವರು ಸಾಕಷ್ಟು ಜನಕ್ಕೆ ಸ್ಫೂರ್ತಿ. ಫ್ಯಾನ್ಸ್ ಕೂಡ ಯಶ್​​ನ ಸ್ಫೂರ್ತಿಯಾಗಿಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಇಂದು ಫ್ಯಾನ್ಸ್ ಹಲವು ಬಗೆಯ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ರಕ್ತದಾನ, ಅನ್ನದಾನ ಸೇರಿ ಅನೇಕ ಕೆಲಸಗಳು ಫ್ಯಾನ್ಸ್ ಕಡೆಯಿಂದ ಆಗುತ್ತಿವೆ.

ಯಶ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ

ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ. ಇಂದು ಯಶ್ ಜನ್ಮದಿನ. ಇಂದು ಈ ಬಗ್ಗೆ ಘೋಷಣೆ ಆಗಬಹುದು ಎಂಬುದು ಫ್ಯಾನ್ಸ್ ನಿರೀಕ್ಷೆಯಾಗಿತ್ತು. ಅದಕ್ಕೆ ಇಂದು ಉತ್ತರ ಸಿಗಲಿದೆ. ಈಗಾಗಲೇ ಯಶ್ ಅವರು ‘ನನಗಾಗಿ ಇನ್ನಷ್ಟು ಕಾಯಿರಿ’ ಎಂದು ಹೇಳಿದ್ದಾರೆ. ಹೀಗಾಗಿ, ಯಶ್ ಹೊಸ ಸಿನಿಮಾ ಘೋಷಣೆಗೆ ಮತ್ತಷ್ಟು ಕಾಯಬೇಕಾಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ