Yash Birthday: ‘ಬಾಸ್’ ಆದ ರಾಕಿಂಗ್ ಸ್ಟಾರ್; ಯಶ್ ಹುಟ್ಟುಹಬ್ಬಕ್ಕೆ ಮಸ್ತ್ ಕಾಮನ್ ಡಿಪಿ
ಸೆಲೆಬ್ರಿಟಿಗಳ ಬರ್ತ್ಡೇ ಸಂದರ್ಭದಲ್ಲಿ ಕಾಮನ್ ಡಿಪಿ ಅನಾವರಣ ಆಗೋದು ವಾಡಿಕೆ. ಅದೇ ರೀತಿ ಯಶ್ ಅವರ ಬರ್ತ್ಡೇಗೆ ಕಾಮನ್ ಡಿಪಿ ಅನಾವರಣಗೊಂಡಿದೆ.
ಯಶ್ (Yash) ಅವರು ಭಾನುವಾರ (ಡಿಸೆಂಬರ್ 8) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಕುಟುಂಬದ ಜತೆ ದುಬೈಗೆ ಹಾರಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಯಶ್ ಬರ್ತ್ಡೇ (Yash Birthday) ಸಂಭ್ರಮ ಜೋರಾಗಿದೆ. ಅನೇಕರು ಯಶ್ಗೆ ಶುಭಾಶಯ ತಿಳಿಸುತ್ತಿದ್ದಾರೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಕಾಮನ್ ಡಿಪಿ ಅನಾವರಣಗೊಂಡಿದೆ. ಇದನ್ನು ನೋಡಿ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸೆಲೆಬ್ರಿಟಿಗಳ ಬರ್ತ್ಡೇ ಸಂದರ್ಭದಲ್ಲಿ ಕಾಮನ್ ಡಿಪಿ ಅನಾವರಣ ಆಗೋದು ವಾಡಿಕೆ. ಅದೇ ರೀತಿ ಯಶ್ ಅವರ ಬರ್ತ್ಡೇಗೆ ಕಾಮನ್ ಡಿಪಿ ಅನಾವರಣಗೊಂಡಿದೆ. ಎಲ್ಲರೂ ಈ ಫೋಟೋವನ್ನು ಪ್ರೊಫೈಲ್ ಪಿಕ್ಚರ್ಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ. ಯಶ್ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತಿದ್ದಾರೆ.
ಯಶ್ ಅವರು ಹಡಗಿನ ಮೇಲೆ ನಿಂತಿದ್ದಾರೆ. ಹಡಗಿಗೆ ಬಾಸ್ ಎಂದು ಬರೆಯಲಾಗಿದೆ. ನೀರಿರುವ ಭಾಗದಲ್ಲಿ ಫ್ಯಾನ್ಸ್ ನಿಂತಿದ್ದಾರೆ. ಹಿಂಭಾಗದಲ್ಲಿ ರಾಕಿಂಗ್ ಸ್ಟಾರ್ ಎಂದು ಬರೆಯಲಾಗಿದೆ. ಈ ಫೋಟೋ ‘ಕೆಜಿಎಫ್ 2’ ಥೀಮ್ನಲ್ಲಿ ಮೂಡಿಬಂದಿದೆ. ‘ಕೆಜಿಎಫ್ 2’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಕಥಾ ನಾಯಕ ರಾಕಿ (ಯಶ್) ಹಡಗಿನ ಮೇಲೆ ನಿಂತಿರುತ್ತಾನೆ. ಅದೇ ಸ್ಟೈಲ್ನಲ್ಲಿ ಕಾಮನ್ ಡಿಪಿ ಫೋಟೋ ಇದೆ. ಇದನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದಾರೆ.
In 2008, Nobody knew his name nor he had any trails to follow. At present, The entire industry is being recognised with his name and waiting for his next Vision. This is how “Legends are made” Here’s the CDP to revel the stalwart of KFI ?#YASHBOSSBdayCDP @TheNameIsYash pic.twitter.com/iL2QmwrRi4
— Yash Trends (@YashTrends) January 5, 2023
ದುಬೈನಲ್ಲಿ ಯಶ್
ಯಶ್ ಅವರು ದುಬೈಗೆ ಹಾರಿದ್ದಾರೆ. ಕುಟುಂಬದ ಜತೆ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರು ಅಭಿಮಾನಿಗಳಿಗೆ ಸಿಗುತ್ತಿಲ್ಲ. ಆದಾಗ್ಯೂ ಜನವರಿ 6ರಂದು ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಅಭಿಮಾನಿಗಳ ಜತೆ ಪೋಸ್ ನೀಡಿದ್ದರು. ಈ ಮೂಲಕ ಅವರ ಬೇಸರವನ್ನು ದೂರ ಮಾಡಿದ್ದರು.
ಹೊಸ ಸಿನಿಮಾ ಬಗ್ಗೆ ಮೂಡಿದೆ ಪ್ರಶ್ನೆ
ಯಶ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ‘ಕೆಜಿಎಫ್ 2’ ಚಿತ್ರ ರಿಲೀಸ್ ಆದಾಗಿನಿಂದಲೂ ಕಾಡುತ್ತಿದೆ. ಯಶ್ ಬರ್ತ್ಡೇಗೆ ಈ ಬಗ್ಗೆ ಅಪ್ಡೇಟ್ ಸಿಗಬಹುದು ಎಂದು ಫ್ಯಾನ್ಸ್ ಕಾದಿದ್ದರು. ಆದರೆ, ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ ಯಶ್, ‘ನನಗಾಗಿ ಮತ್ತಷ್ಟು ಕಾಯಬೇಕು’ ಎಂದು ಕೋರಿದ್ದರು. ಈ ಮೂಲಕ ಹೊಸ ಸಿನಿಮಾ ಘೋಷಣೆಗೆ ಮತ್ತಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದರು. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ