Yash: ಎಲ್ಲರೂ ಮೆಚ್ಚುವ ಕೆಲಸ ಮಾಡಿದ ಯಶ್​ಗೆ ಜನರೇ ಕೊಟ್ರು ‘ಬಾಸ್​’ ಪಟ್ಟ

| Updated By: ರಾಜೇಶ್ ದುಗ್ಗುಮನೆ

Updated on: Jun 01, 2021 | 9:13 PM

ಯಶ್​ ಅಭಿಮಾನಿಗಳು ಮಾತ್ರ #YASHBossTheRealLifeHero ಹ್ಯಾಶ್​ಟ್ಯಾಗ್​ ಬಳಕೆ ಮಾಡಿಲ್ಲ. ಸಿನಿಮಾ ಟ್ರೇಡ್ ಅನಾಲಿಸ್ಟ್ ರಮೇಶ್​ ಬಾಲಾ ಸೇರಿ ಹಲವು ಪ್ರಮುಖರು ಈ ಹ್ಯಾಶ್​ ಟ್ಯಾಗ್​ ಬಳಸಿ ಟ್ವೀಟ್​ ಮಾಡಿದ್ದಾರೆ.

Yash: ಎಲ್ಲರೂ ಮೆಚ್ಚುವ ಕೆಲಸ ಮಾಡಿದ ಯಶ್​ಗೆ ಜನರೇ ಕೊಟ್ರು ‘ಬಾಸ್​’ ಪಟ್ಟ
ಯಶ್​
Follow us on

ರಾಕಿಂಗ್​ ಸ್ಟಾರ್​ ಯಶ್ ಸಂಕಷ್ಟದಲ್ಲಿರುವ ಸಿನಿಮಾ ತಂತ್ರಜ್ಞರ ಸಹಾಯಕ್ಕೆ ಮುಂದಾಗಿದ್ದಾರೆ. ತಮ್ಮದೇ ಹಣದಿಂದ ಒಟ್ಟೂ 3,000 ತಂತ್ರಜ್ಞರ ಖಾತೆಗೆ ತಲಾ 5,000 ರೂಪಾಯಿ ಹಾಕುತ್ತಿರುವ ಬಗ್ಗೆ ಯಶ್​ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಅಲ್ಲದೆ, ಯಶ್​ಗೆ ಮತ್ತೊಮ್ಮೆ ‘ಬಾಸ್​’ ಪಟ್ಟ ನೀಡಿದ್ದಾರೆ.

ತಂತ್ರಜ್ಞರಿಗೆ ಸಹಾಯ ಮಾಡುತ್ತಿರುವ ಬಗ್ಗೆ ಯಶ್​ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದಾರೆ. ಅವರು ನೀಡುತ್ತಿರುವ ಒಟ್ಟೂ ಹಣ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಆಗಲಿದೆ. ಈ ವಿಚಾರ ತಿಳಿದು ಫ್ಯಾನ್ಸ್​ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, #YASHBossTheRealLifeHero ಹಾಗೂ #KGFChapter2 ಹೆಸರಿನಲ್ಲಿ ಟ್ವೀಟ್​ ಮಾಡುತ್ತಿದ್ದಾರೆ.

ಯಶ್​ ಅಭಿಮಾನಿಗಳು ಮಾತ್ರ #YASHBossTheRealLifeHero ಹ್ಯಾಶ್​ಟ್ಯಾಗ್​ ಬಳಕೆ ಮಾಡಿಲ್ಲ. ಸಿನಿಮಾ ಟ್ರೇಡ್ ಅನಾಲಿಸ್ಟ್ ರಮೇಶ್​ ಬಾಲಾ ಸೇರಿ ಹಲವು ಪ್ರಮುಖರು ಈ ಹ್ಯಾಶ್​ ಟ್ಯಾಗ್​ ಬಳಸಿ ಟ್ವೀಟ್​ ಮಾಡಿದ್ದಾರೆ. ಹೀಗಾಗಿ ಎಂಟರ್​ಟೇನ್​ಮೆಂಟ್​ ವಿಭಾಗದಲ್ಲಿ YASHBossTheRealLifeHero, #KGFChapter2 ಹ್ಯಾಶ್​ಟ್ಯಾಗ್​ಗಳು ಟ್ರೆಂಡ್ ಆಗಿವೆ.

ಯಶ್​ ಪತ್ರದಲ್ಲೇನಿದೆ?

‘ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಹೌದು ಇದು ಬರೀ ಮಾತನಾಡುವ ಸಮಯವಲ್ಲ.. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಸುಮಾರು 3000ಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5000 ರೂಪಾಯಿಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ’ ಎಂದು ಯಶ್​ ಪತ್ರ ಆರಂಭಿಸಿದ್ದಾರೆ.

’ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದ್ದೇನೆ. ನಮ್ಮ ಕಲಾವಿದರು,ತಂತ್ರಜ್ಞರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲಾ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು.. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ.. ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ ಎಂದು ಯಶ್​ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Yash: ಸಿನಿಮಾ ತಂತ್ರಜ್ಞರಿಗೆ ಯಶ್​ ದೊಡ್ಡ ಸಹಾಯ; 1.5 ಕೋಟಿ ರೂ. ನೆರವು ನೀಡುತ್ತಿರುವ ರಾಕಿಂಗ್​ ಸ್ಟಾರ್​

Published On - 9:13 pm, Tue, 1 June 21