Yash: ಹಾರ್ದಿಕ್​ ಪಾಂಡ್ಯ ಮದುವೆಯಲ್ಲಿ ಬಿಂದಾಸ್​ ಆಗಿ ಕುಣಿದ ‘ರಾಕಿಂಗ್​ ಸ್ಟಾರ್’​ ಯಶ್​ ವಿಡಿಯೋ ವೈರಲ್​

|

Updated on: Apr 23, 2023 | 8:05 AM

Hardik Pandya Wedding Video: ಉದಯಪುರದಲ್ಲಿ ನಡೆದ ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾಂಕೊವಿಚ್​ ಮದುವೆಗೆ ಅನೇಕ ಗಣ್ಯರು ಹಾಜರಿ ಹಾಕಿದ್ದರು. ಯಶ್​ ಅವರು ಎಲ್ಲರ ಜೊತೆ ಡ್ಯಾನ್ಸ್​ ಮಾಡಿ ಖುಷಿಪಟ್ಟಿದ್ದರು.

Yash: ಹಾರ್ದಿಕ್​ ಪಾಂಡ್ಯ ಮದುವೆಯಲ್ಲಿ ಬಿಂದಾಸ್​ ಆಗಿ ಕುಣಿದ ‘ರಾಕಿಂಗ್​ ಸ್ಟಾರ್’​ ಯಶ್​ ವಿಡಿಯೋ ವೈರಲ್​
ಯಶ್-ಹಾರ್ದಿಕ್ ಪಾಂಡ್ಯ ಡ್ಯಾನ್ಸ್
Follow us on

​ನಟ ‘ರಾಕಿಂಗ್​ ಸ್ಟಾರ್​’ ಯಶ್ (Yash) ಅವರು ಸಿನಿಮಾ ಮಾತ್ರವಲ್ಲದೇ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳ ಜೊತೆಗೂ ಸ್ನೇಹ ಹೊಂದಿದ್ದಾರೆ. ‘ಕೆಜಿಎಫ್​’ ಸಿನಿಮಾ ಬಳಿಕ ದೇಶಾದ್ಯಂತ ಫೇಮಸ್​ ಆದ ಅವರಿಗೆ ಕ್ರಿಕೆಟ್​ ಲೋಕದ ಅನೇಕರ ಜೊತೆ ಉತ್ತಮ ಒಡನಾಟ ಇದೆ. ಹಾರ್ದಿಕ್​ ಪಾಂಡ್ಯ ಮದುವೆಗೆ ಅವರು ಹಾಜರಿ ಹಾಕಿದ್ದೇ ಅದಕ್ಕೆ ಸಾಕ್ಷಿ. ಈ ವರ್ಷ ಫೆಬ್ರವರಿಯಲ್ಲಿ ಹಾರ್ದಿಕ್​ ಪಾಂಡ್ಯ ಅವರು ನತಾಶಾ ಸ್ಟಾಂಕೊವಿಕ್​​ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆದರು. ಉದಯಪುರದಲ್ಲಿ ನಡೆದ ಈ ಅದ್ದೂರಿ ವಿವಾಹ (Hardik Pandya Marriage) ಸಮಾರಂಭಕ್ಕೆ ಅನೇಕ ಗಣ್ಯರು ಭಾಗಿ ಆಗಿದ್ದರು. ಆ ಸಂದರ್ಭದ ವಿಡಿಯೋ ತುಣುಕುಗಳು ಈಗ ವೈರಲ್​ ಆಗಿವೆ. ನಟ ಯಶ್​ ಅವರು ಹಾರ್ದಿಕ್​ ಪಾಂಡ್ಯ (Hardik Pandya) ಜೊತೆ ಬಿಂದಾಸ್​ ಆಗಿ ಸ್ಟೆಪ್​ ಹಾಕಿದ್ದರು. ಇದನ್ನು ಕಂಡು ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಹಾರ್ದಿಕ್​ ಪಾಂಡ್ಯ ಮತ್ತು ಯಶ್​ ನಡುವೆ ಉತ್ತಮ ಸ್ನೇಹ ಇದೆ. ಈ ಮೊದಲು ಕೂಡ ಅವರಿಬ್ಬರು ಜೊತೆಯಾಗಿರುವ ಫೋಟೋಗಳು ವೈರಲ್​ ಆಗಿದ್ದವು. ಉದಯಪುರದಲ್ಲಿ ನಡೆದ ಮದುವೆಗೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿತ್ತು. ಯಶ್​ ಅವರು ಸಖತ್​ ಸ್ಟೈಲಿಶ್​ ಆಗಿಯೇ ಹಾರ್ದಿಕ್​ ಪಾಂಡ್ಯ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಎಲ್ಲರ ಜೊತೆ ಡ್ಯಾನ್ಸ್​ ಮಾಡಿ ಖುಷಿಪಟ್ಟಿದ್ದರು.

ಇದನ್ನೂ ಓದಿ
Radhika Pandit: ಯಶ್​​ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ಮಾಹಿತಿ
Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ
Yash Birthday: ‘ಕ್ಷಮಿಸಿ, ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರಲು ಆಗುತ್ತಿಲ್ಲ’: ಅಭಿಮಾನಿಗಳಿಗೆ ಯಶ್​ ಪತ್ರ
Yash: ನಟ ಯಶ್​ ಅವರನ್ನು ಭೇಟಿ ಮಾಡಿದ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್​, ಕೃನಾಲ್ ಪಾಂಡ್ಯ

ಅಂದಹಾಗೆ, 2020ರ ಮೇ ತಿಂಗಳಲ್ಲೇ ಹಾರ್ದಿಕ್​ ಪಾಂಡ್ಯ ಮತ್ತು ನತಾಶಾ ಸ್ಟಾಂಕೊವಿಚ್​ ಮದುವೆ ನೆರವೇರಿತ್ತು. ಆ ಸಂದರ್ಭದಲ್ಲಿ ಕೊವಿಡ್​ ನಿಯಮಗಳು ಇದ್ದ ಕಾರಣ ಬಹಳ ಖಾಸಗಿಯಾಗಿ ಮದುವೆ ನೆರವೇರಿಸಲಾಗಿತ್ತು. ಕೆಲವೇ ಕೆಲವು ಮಂದಿ ಮಾತ್ರ ಆ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಆದರೆ ಈ ವರ್ಷ ಫೆಬ್ರವರಿಯಲ್ಲಿ ಮತ್ತೊಮ್ಮೆ ಎಲ್ಲರ ಸಮ್ಮುಖದಲ್ಲಿ ಈ ಜೋಡಿ ಮದುವೆ ಮಾಡಿಕೊಂಡರು.

ಇದನ್ನೂ ಓದಿ: ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ಯಶ್; ಸಖತ್ ಫನ್ನಿ ಆಗಿದೆ ಅಡ್ವಟೈಸ್​ಮೆಂಟ್

‘ಕೆಜಿಎಫ್​: ಚಾಪ್ಟರ್​​ 2’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಯಶ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಇದೆಲ್ಲದರ ನಡುವೆ ಅವರು ಹೊಸ ಸಿನಿಮಾದ ತಯಾರಿಯಲ್ಲೂ ತೊಡಗಿಕೊಂಡಿದ್ದಾರೆ. ‘ಕೆಜಿಎಫ್​ 2’ ಬಳಿಕ ಅವರು ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬುದು ಇನ್ನೂ ಬಹಿರಂಗ ಆಗಿಲ್ಲ.

ಇದನ್ನೂ ಓದಿ: ಮಲಯಾಳಂ ನಿರ್ದೇಶಕಿ ಜೊತೆ ಕೈ ಜೋಡಿಸಿದ ಯಶ್? ತಿಂಗಳೊಳಗೆ ಸಿಗಲಿದೆ ಅಧಿಕೃತ ಮಾಹಿತಿ

ಯಶ್​ ಆ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಾರೆ, ಈ ನಿರ್ಮಾಪಕರ ಜೊತೆ ಕೈ ಜೋಡಿಸುತ್ತಾರೆ ಎಂಬಿತ್ಯಾದಿ ಗಾಸಿಪ್​ಗಳು ಹಬ್ಬಿವೆ. ಆದರೆ ಆ ಯಾವ ವಿಚಾರಗಳ ಬಗ್ಗೆಯೂ ಯಶ್​ ಪ್ರತಿಕ್ರಿಯೆ ನೀಡಿಲ್ಲ. ಶೀಘ್ರದಲ್ಲೇ ಅವರ ಹೊಸ ಸಿನಿಮಾ ಅನೌನ್ಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:37 am, Sun, 23 April 23