ದೀಪಾವಳಿಗೂ ಬರಲೇ ಇಲ್ಲ ಯಶ್ ಮುಂದಿನ ಸಿನಿಮಾ ಅಪ್​ಡೇಟ್​; ಬರ್ತ್​ಡೇ ಮೇಲೆ ನಿರೀಕ್ಷೆ

| Updated By: ರಾಜೇಶ್ ದುಗ್ಗುಮನೆ

Updated on: Nov 18, 2023 | 1:09 PM

‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿದ್ದು 2022ರ ಏಪ್ರಿಲ್ ತಿಂಗಳಲ್ಲಿ. ಈ ಸಿನಿಮಾ ರಿಲೀಸ್ ಆದ ಬಳಿಕ #Yash19 ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿತು. ಪರಭಾಷೆಯವರೂ ಈ ಬಗ್ಗೆ ತಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

ದೀಪಾವಳಿಗೂ ಬರಲೇ ಇಲ್ಲ ಯಶ್ ಮುಂದಿನ ಸಿನಿಮಾ ಅಪ್​ಡೇಟ್​; ಬರ್ತ್​ಡೇ ಮೇಲೆ ನಿರೀಕ್ಷೆ
ಯಶ್
Follow us on

ಇನ್ನು ಕೆಲವೇ ತಿಂಗಳಲ್ಲಿ ಯಶ್ (Yash) ನಟನೆಯ ಕೆಜಿಎಫ್ 2 ರಿಲೀಸ್ ಆಗಿ ಎರಡು ವರ್ಷ ಪೂರ್ಣಗೊಳ್ಳಲಿದೆ. ಆದರೆ, ಅವರ ಹೊಸ ಸಿನಿಮಾ ಮಾತ್ರ ಈವರೆಗೆ ಘೋಷಣೆ ಆಗಿಲ್ಲ. ಅವರ ಮುಂದಿನ ಚಿತ್ರದ ಬಗ್ಗೆ ಹೊಸ ಅಪ್​ಡೇಟ್ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಆದರೆ, ಪ್ರತಿಬಾರಿಯೂ ಅಭಿಮಾನಿಗಳಿಗೆ ನಿರಾಸೆಯೇ ಆಗುತ್ತಿದೆ. ದೀಪಾವಳಿಗೆ ಯಶ್ ಹೊಸ ಸಿನಿಮಾ ಘೋಷಣೆ ಆಗಲಿದೆ ಎಂದು ವದಂತಿ ಹಬ್ಬಿತ್ತು. ಇದು ವದಂತಿ ಆಗಿಯೇ ಉಳಿದಿದೆ.

‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿದ್ದು 2022ರ ಏಪ್ರಿಲ್ ತಿಂಗಳಲ್ಲಿ. ಈ ಸಿನಿಮಾ ರಿಲೀಸ್ ಆದ ಬಳಿಕ #Yash19 ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿತು. ಪರಭಾಷೆಯವರೂ ಈ ಬಗ್ಗೆ ತಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಆ ಬಗ್ಗೆ ಯಾವುದೇ ಅಪ್​ಡೇಟ್ ಸಿಗಲೇ ಇಲ್ಲ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಫ್ರಸ್ಟ್ರೇಟ್ ಆಗುತ್ತಿದ್ದಾರೆ.

ಯಶ್​ ಅವರ ಮುಂದಿನ ಸಿನಿಮಾ ‘ಕೆಜಿಎಫ್ 3’ ಇರಬಹುದು ಎಂಬುದು ಅಭಿಮಾನಿಗಳ ಆಲೋಚನೆ ಆಗಿತ್ತು. ಸದ್ಯ ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರು ‘ಕೆಜಿಎಫ್ 3’ ಕೈಗೆತ್ತಿಕೊಳ್ಳಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಇದು ಕೂಡ ಸುಳ್ಳಾಗಿದೆ. ‘ಸಲಾರ್’ ಬಳಿಕ ಜೂನಿಯರ್ ಎನ್​ಟಿಆರ್ ಅವರ ಮುಂದಿನ ಸಿನಿಮಾ ಕೆಲಸಗಳಲ್ಲಿ ಪ್ರಶಾಂತ್ ನೀಲ್ ಬ್ಯುಸಿ ಆಗಲಿದ್ದಾರೆ. ಈ ಕಾರಣದಿಂದಲೇ ಯಶ್ ಫ್ಯಾನ್ಸ್​ಗೆ ಬೇಸರ ಆಗಿದೆ.

ದೀಪಾವಳಿ ಹಿಂದೂಗಳ ಪಾಲಿಗೆ ವಿಶೇಷ ಹಬ್ಬ. ಈ ಕಾರಣದಿಂದಲೇ ಈ ವಿಶೇಷ ದಿನದಂದು ಯಶ್ ಹೊಸ ಸಿನಿಮಾ ಅನೌನ್ಸ್ ಆಗಬಹುದು ಎಂದು ಫ್ಯಾನ್ಸ್ ಭಾವಿಸಿದ್ದರು. ಅದು ಸುಳ್ಳಾಗಿದೆ. ಈಗ ಅಭಿಮಾನಿಗಳ ಗಮನ ಜನವರಿ 8ರ ಮೇಲಿದೆ. ಅಂದು ಯಶ್​ ಜನ್ಮದಿನ. ಈ ವಿಶೇಷ ದಿನದಂದು ಯಶ್ ಹೊಸ ಸಿನಿಮಾ ಅನೌನ್ಸ್ ಆದರೂ ಆಗಬಹುದು ಎಂಬುದು ಅಭಿಮಾನಿಗಳ ಊಹೆ. ಅಂದು ಕೂಡ ಅವರಿಗೆ ನಿರಾಸೆ ಆದರೆ ಯಶ್ ಫ್ಯಾನ್ಸ್ ಸಿಟ್ಟಿಗೇಳೋದು ಪಕ್ಕಾ.

ಇದನ್ನೂ ಓದಿ: ಪ್ರಭಾಸ್, ಅಲ್ಲು ಅರ್ಜುನ್ ಬದಲಿಗೆ ಯಶ್ ಅನ್ನು ಆರಿಸಿದ ಬಾಲಿವುಡ್ ನಟಿ

ಯಶ್ ಅವರು ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಅವರು ರಾವಣನ ಪಾತ್ರ ಮಾಡಲಿದ್ದಾರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ