ಆಯ್ರಾ ಪ್ರೊಡಕ್ಷನ್ ಹೌಸ್ ಸುದ್ದಿ ಸುಳ್ಳು? ಯಶ್ ಫ್ಯಾನ್ಸ್​ಗೆ ಸಿಕ್ಕೇ ಹೋಯ್ತು ಉತ್ತರ

| Updated By: ರಾಜೇಶ್ ದುಗ್ಗುಮನೆ

Updated on: Dec 03, 2022 | 6:30 AM

ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲದ ಮಧ್ಯೆ ಆಯ್ರಾ ಹೆಸರಲ್ಲಿ ಯಶ್ ಪ್ರೊಡಕ್ಷನ್ ಹೌಸ್ ಆರಂಭಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದು ಸುಳ್ಳು ಅನ್ನೋದು ಅಭಿಮಾನಿಗಳಿಗೆ ಖಚಿತವಾಗಿದೆ.

ಆಯ್ರಾ ಪ್ರೊಡಕ್ಷನ್ ಹೌಸ್ ಸುದ್ದಿ ಸುಳ್ಳು? ಯಶ್ ಫ್ಯಾನ್ಸ್​ಗೆ ಸಿಕ್ಕೇ ಹೋಯ್ತು ಉತ್ತರ
ಆಯ್ರಾ
Follow us on

ಸ್ಟಾರ್​​ಗಳ ಬಗ್ಗೆ ಮಾತ್ರವಲ್ಲ ಅವರ ಕುಟುಂಬದ ಬಗ್ಗೆಯೂ ಸಾಕಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಅವರು ಮಾಡುವ ಅನೇಕ ವಿಚಾರಗಳ ಬಗ್ಗೆ ಫ್ಯಾನ್ಸ್ ಗಮನಹರಿಸುತ್ತಾರೆ. ನಟ ಯಶ್ (Yash) ಹಾಗೂ ರಾಧಿಕಾ ಪಂಡಿತ್ ಮಗಳಾದ ಆಯ್ರಾ ವಿಚಾರದಲ್ಲಿ ಹೊಸ ಸುದ್ದಿ ಹುಟ್ಟಿಕೊಂಡಿತ್ತು. ಅವಳ ಹೆಸರಲ್ಲಿ ಯಶ್ ನಿರ್ಮಾಣ ಸಂಸ್ಥೆ ಆರಂಭಿಸಲಿದ್ದಾರೆ, ಅದಕ್ಕೆ ಆಯ್ರಾ (Ayra) ಪ್ರೊಡಕ್ಷನ್ ಹೌಸ್​ ಎಂದು ನಾಮಕರಣ ಮಾಡಲಾಗುತ್ತಿದೆ ಎಂಬಿತ್ಯಾದಿ ವದಂತಿಗಳು ಹುಟ್ಟಿಕೊಂಡಿದ್ದವು. ಆದರೆ, ಇದು ಸುಳ್ಳು ಅನ್ನೋದು ಫ್ಯಾನ್ಸ್​ಗೆ ಮನವರಿಕೆ ಆಗಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂತು. ಈ ಸಿನಿಮಾ ನೂರಾರು ದಾಖಲೆ ಬರೆದಾಗಿದೆ. ಇನ್ನು ಕೆಲವೇ ತಿಂಗಳು ಕಳೆದರೆ ಸಿನಿಮಾ ತೆರೆಗೆ ಬಂದು ಒಂದು ವರ್ಷ ಆಗಲಿದೆ. ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲದ ಮಧ್ಯೆ ಆಯ್ರಾ ಹೆಸರಲ್ಲಿ ಯಶ್ ಪ್ರೊಡಕ್ಷನ್ ಹೌಸ್ ಆರಂಭಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದು ಸುಳ್ಳು ಅನ್ನೋದು ಅಭಿಮಾನಿಗಳಿಗೆ ಖಚಿತವಾಗಿದೆ.

ಆಯ್ರಾ ಡಿಸೆಂಬರ್ 2ರಂದು ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಯಶ್, ರಾಧಿಕಾ ಪಂಡಿತ್ ಅದ್ದೂರಿಯಾಗಿ ಇವಳ ಬರ್ತ್​ಡೇ ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಎಲ್ಲಿಯೂ ಪ್ರೊಡಕ್ಷನ್​ ಹೌಸ್ ವಿಚಾರದ ಬಗ್ಗೆ ಉಲ್ಲೇಖ ಇರಲೇ ಇಲ್ಲ. ಆ ಬಗ್ಗೆ ಘೋಷಣೆಯೂ ಆಗಿಲ್ಲ. ಸಾಮಾನ್ಯವಾಗಿ ಬರ್ತ್​ಡೇ ದಿನ ಇಂತಹ ವಿಶೇಷ ಘೋಷಣೆಗಳು ಆಗುತ್ತವೆ. ಹುಟುಹಬ್ಬದ ದಿನವೂ ಈ ಬಗ್ಗೆ ಅನೌನ್ಸ್​​ಮೆಂಟ್​ ಆಗಿಲ್ಲ ಎಂದರೆ ಅದು ಸುಳ್ಳುಸುದ್ದಿಯೇ ಇರಬಹುದು ಎಂದು ಫ್ಯಾನ್ಸ್ ಭಾವಿಸಿದ್ದಾರೆ. ಈ ಬಗ್ಗೆ ಯಶ್ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಅದ್ದೂರಿಯಾಗಿ ನಡೆದ ನಟಿ ಅದಿತಿ-ಯಶಸ್ವಿ ಆರತಕ್ಷತೆ ಕಾರ್ಯಕ್ರಮ; ಯಶ್-ರಾಧಿಕಾ ಸೇರಿ ಹಲವರು ಭಾಗಿ

ಯಶ್ ಖ್ಯಾತಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಈ ವರೆಗೆ ಆ ಬಗ್ಗೆ ಘೋಷಣೆ ಆಗಿಲ್ಲ. ಶಂಕರ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ನರ್ತನ್ ಹೆಸರು ಕೂಡ ಕೇಳಿ ಬಂದಿದೆ. ಆದರೆ, ಯವಾ ವಿಚಾರದಲ್ಲೂ ಅಧಿಕೃತ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ