ಕೆಜಿಎಫ್ ತಾಲೂಕಿನಲ್ಲಿ ರಿಲೀಸ್ ಆಗದ ‘ಕೆಜಿಎಫ್ ಚಾಪ್ಟರ್ 2’- ಕಾರಣವೇನು? ರಾಜ್ಯದ ವಿವಿಧೆಡೆ ಬಿಡುಗಡೆ ಸಂಭ್ರಮ ಹೇಗಿದೆ?

| Updated By: shivaprasad.hs

Updated on: Apr 14, 2022 | 9:52 AM

KGF Chapter 2 | KGF Taluk: ವಿಶ್ವಾದ್ಯಂತ ಯಶ್, ಸಂಜಯ್ ದತ್ ಮೊದಲಾದ ತಾರೆಯರು ನಟಿಸಿರುವ ‘ಕೆಜಿಎಫ್ ಚಾಪ್ಟರ್ 2’ ಭರ್ಜರಿ ರಿಲೀಸ್ ಆಗಿದೆ. ಎಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಕೆಜಿಎಫ್ ಕತೆಗೆ ಮೂಲವಾಗಿರುವ ಕೆಜಿಎಫ್ ತಾಲೂಕಿನಲ್ಲೇ ಚಿತ್ರ ಪ್ರದರ್ಶನವಾಗುತ್ತಿಲ್ಲ. ಹಣದ ವಿಚಾರವಾಗಿ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಚಿತ್ರವನ್ನು ರಿಲೀಸ್ ಮಾಡಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕೆಜಿಎಫ್ ತಾಲೂಕಿನಲ್ಲಿ ರಿಲೀಸ್ ಆಗದ ‘ಕೆಜಿಎಫ್ ಚಾಪ್ಟರ್ 2’- ಕಾರಣವೇನು? ರಾಜ್ಯದ ವಿವಿಧೆಡೆ ಬಿಡುಗಡೆ ಸಂಭ್ರಮ ಹೇಗಿದೆ?
ಯಶ್-ಸಂಜಯ್ ದತ್
Follow us on

ವಿಶ್ವಾದ್ಯಂತ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಭರ್ಜರಿ ರಿಲೀಸ್ ಆಗಿದೆ. ಎಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಕೆಜಿಎಫ್ ಕತೆಗೆ ಮೂಲವಾದ ಕೆಜಿಎಫ್ ತಾಲೂಕಿನಲ್ಲೇ (KGF Taluk) ಚಿತ್ರ ಪ್ರದರ್ಶನವಾಗುತ್ತಿಲ್ಲ. ಹಣದ ವಿಚಾರವಾಗಿ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಚಿತ್ರವನ್ನು ರಿಲೀಸ್ ಮಾಡಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವಿತರಕರು, ಚಿತ್ರಮಂದಿರ ಮಾಲೀಕರ ಮಧ್ಯೆ ಮಾತುಕತೆ ವಿಫಲವಾಗಿದ್ದು, ವಿತರಕರು ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿದ ಹಿನ್ನೆಲೆಯಲ್ಲಿ ಚಿತ್ರಮಂದಿರದವರು ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದಾರೆ. ಅಷ್ಟೊಂದು ಹಣ ನೀಡಿ ಟಿಕೆಟ್ ಕೊಂಡು ಇಲ್ಲಿ KGF-2 ಸಿನಿಮಾ ನೋಡಲ್ಲ, ಹೀಗಾಗಿ ಕೆಜಿಎಫ್‌ನಲ್ಲಿ KGF-2 ಸಿನಿಮಾ ರಿಲೀಸ್ ಮಾಡಿಲ್ಲ ಎಂದು ಚಿತ್ರಮಂದಿರದ ಮಾಲಿಕರು ಹೇಳಿದ್ದಾರೆ. ಹೀಗಾಗಿ ಸಮೀಪದ ಬಂಗಾರಪೇಟೆ ತಾಲೂಕಿನ ಚಿತ್ರಮಂದಿರಕ್ಕೆ ಹೋಗಿ ಅಭಿಮಾನಿಗಳು ಚಿತ್ರ ವೀಕ್ಷಿಸುತ್ತಿದ್ದಾರೆ.

ಎಲ್ಲೆಡೆ ಸಂಭ್ರಮಾಚರಣೆ ಹೇಗಿದೆ?

ಗಾಂಧೀನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಕೆಜಿಎಫ್ -2 ಅಬ್ಬರ ಜೋರಾಗಿದೆ. ಭೂಮಿಕ, ತ್ರಿವೇಣಿ, ಅನುಪಮ‌ ಸೇರಿದಂತೆ ಕೆಜಿ ರಸ್ತೆಯ ಕೆಲವು ಥಿಯೇಟರ್​ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಭೂಮಿಕಾ ಚಿತ್ರಂಮದಿರದಲ್ಲಿ ಈಗಾಗಲೇ 4 ಘಂಟೆಗೆ ಶೋ ನಡೆದಿದೆ. ಪ್ಯಾನ್ ಇಂಡಿಯಾ ಸಿನಿಮಾವಾದ್ದರಿಂದ ಬೆಂಗಳೂರಿನಲ್ಲಿ ಬೇರೆ ಭಾಷೆಗಳಲ್ಲೂ ಚಿತ್ರ ರಿಲೀಸ್ ಆಗಿದೆ.

ಬಳ್ಳಾರಿ: ನಸುಕಿನ ಜಾವ 3:45ಕ್ಕೆ ಜಿಲ್ಲೆಯಲ್ಲಿ KGF-2 ತೆರೆಕಂಡಿದೆ. ಚಿತ್ರ ನೋಡಲು ಪೇಕ್ಷಕರು ಮುಗಿಬಿದ್ದಿದ್ದು, ನೂಕಾಟ, ಲಾರಿ ಪ್ರಹಾರ ನಡೆದಿದೆ. ಬಳ್ಳಾರಿಯ ಶಿವ, ಗಂಗಾ, ನಟರಾಜ, ಉಮಾ, ರಾಘವೇಂದ್ರ ಚಿತ್ರಮಂದಿರದಲ್ಲಿ ಚಿತ್ರ ತೆರೆಗೆ ಬಂದಿದ್ದು, ಪೇಕ್ಷಕರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಎಲ್ಲಾ ಶೋಗಳು ಹೌಸ್​ಫುಲ್ ಆಗಿವೆ.

ಚಿಕ್ಕಬಳ್ಳಾಪುರದಲ್ಲಿ ಚಿತ್ರದ ರಿಲೀಸ್ ಹಿನ್ನೆಲೆಯಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮ ನಡೆಸಿದ್ದಾರೆ. ವಾಣಿ ಚಿತ್ರಮಂದಿರದ ಬಳಿ ಪಟಾಕಿ ಸಿಡಿಸಿ, ತಮಟೆ ಬಾರಿಸಿ ನೆಚ್ಚಿನ ನಟನ ಚಿತ್ರವನ್ನು ಸ್ವಾಗತಿಸಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಚಿತ್ರ ನೋಡಲು ಅಭಿಮಾನಿಗಳು ರಾತ್ರಿ 10ರಿಂದಲೇ ಸರದಿಯಲ್ಲಿ ನಿಂತಿದ್ದಾರೆ. ಮುಂಜಾನೆ 4.15ಕ್ಕೆ ಪ್ರದರ್ಶನ ಆರಂಭವಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಶ್ರಮವಹಿಸುತ್ತಿದ್ದಾರೆ.

ರಾಕಿಂಗ್ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್-2 ಬಿಡುಗಡೆ ವೇಳೆ ಕೋಲಾರದ ಭವಾನಿ ಚಿತ್ರಮಂದಿರದ ಒಳಗೆ ಪೇಪರ್ ಬ್ಲಾಸ್ಟರ್ ಸಿಡಿಸಿಲು ಚಿತ್ರಮಂದಿರದವರು ನಿರಾಕರಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ತಂದಿರುವ ಪೇಪರ್ ಬ್ಲಾಸ್ಟರ್​ಗಳನ್ನು ಹೊಡೆಯಲು ಸ್ವಚ್ಛತೆಯ ಕಾರಣದಿಂದ ಅವಕಾಶ ನಿರಾಕರಿಸಲಾಗಿದೆ.

ಗದಗ: ಗದಗ ನಗರದಲ್ಲಿ ಕೆಜಿಎಫ್ 2 ಚಿತ್ರದ ಹವಾ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ ಯಶ್ ಕಟೌಟಿಗೆ ಹಾಲಿನ ಅಭಿಷೇಕ ಮಾಡಲಾಗಿದ್ದು, ನಗರದ ವೆಂಕಟೇಶ ಚಿತ್ರಮಂದಿರದ ಮುಂದೆ ಸಂಭ್ರಮಾಚರಣೆ ಭರ್ಜರಿಯಾಗಿ ನಡೆದಿದೆ. ಮುಂಜಾನೆ 9 ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ವಿಶೇಷವೆಂದರೆ ಸರತಿ ಸಾಲಿನಲ್ಲಿ ನಿಂತು ಅಭಿಮಾನಿಗಳು ನೇತ್ರದಾನಕ್ಕೆ ನೊಂದಣಿ‌ ಮಾಡಿಸಿದ್ದಾರೆ.

ದುಬೈನಲ್ಲೂ ಕೆಜಿಎಫ್ ಅಬ್ಬರ ಜೋರಾಗಿದೆ. ಮೊದಲ ದಿನ ಫಸ್ಟ್ ಶೋ ನೋಡಿ ರಾಕಿಭಾಯ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಯಶ್ ಆಕ್ಷನ್ ಅನ್ನು ದುಬೈ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಕನ್ನಡ ಸಿನಿಮಾ ನೂರು ವರ್ಷಕ್ಕೆ ಮೈಲ್ ಸ್ಟೋನ್ ಕೆಜಿಎಫ್ ಎಂದು ಚಿತ್ರವನ್ನು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

ರಿಲೀಸ್ ಸಂಭ್ರಮದ ಲೈವ್ ವಿಡಿಯೋ ಇಲ್ಲಿ ಲಭ್ಯವಿದೆ:

ಒಟ್ಟು ಎಷ್ಟು ಸ್ಕ್ರೀನ್​ಗಳಲ್ಲಿ ‘ಕೆಜಿಎಫ್ 2’ ಪ್ರದರ್ಶನ?

ಕರ್ನಾಟಕದಲ್ಲಿ ಕೆಜಿಎಫ್ 2 550ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಪ್ರದರ್ಶನವಾಗಲಿದೆ. ಮೊದಲ ದಿನ 2500 ರಿಂದ 3000 ಶೋ ಸಾಧ್ಯತೆ ಇದ್ದು, ಆಲ್​ಮೋಸ್ಟ್ ಎಲ್ಲಾ ಶೋಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ 1000ಕ್ಕು ಹೆಚ್ಚು ಶೋ ಪ್ರದರ್ಶನವಾಗಲಿದೆ. ಭಾರತದಲ್ಲಿ 6000 ಸ್ಕ್ರೀನ್​ನಲ್ಲಿ ಚಾಪ್ಟರ್ 2 ರಿಲೀಸ್ ಆಗಲಿದ್ದು, ವಿಶ್ವಾದ್ಯಂತ​ 10000 ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಲಿದೆ. ಯುಎಸ್​ನಲ್ಲೇ 1000 ಸ್ಕ್ರೀನ್​ನಲ್ಲಿ ಕೆಜಿಎಫ್ ತೆರೆಕಾಣುತ್ತಿದೆ. ತಮಿಳುನಾಡಿನಲ್ಲಿ 350 ಸ್ಕ್ರೀನ್, ಕೇರಳ 400 ಸ್ಕ್ರೀನ್, ಆಂಧ್ರ- ತೆಲಂಗಾಣದಲ್ಲಿ ಸಾವಿರ ಸ್ಕ್ರಿನ್​ಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಉತ್ತರ ಭಾರತದಲ್ಲಿ ಒಟ್ಟಾರೆ 4,400 ಸ್ಕ್ರೀನ್​ಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಈಗಾಗಲೇ ಫ್ಯಾನ್ಸ್ ಶೋ ಮುಗಿದಿದ್ದು ರಾಕಿಭಾಯ್ ದರ್ಶನ ಕಂಡು ಫ್ಯಾನ್ಸ್ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: KGF Chapter 2 Review: ಕೆಜಿಎಫ್​ ಚಾಪ್ಟರ್​ 2 ವಿಮರ್ಶೆ; ಪ್ರಶಾಂತ್ ನೀಲ್ ಕೈಚಳಕ, ಯಶ್ ಫ್ಯಾನ್ಸ್​ಗೆ ಧಮಾಕ

KGF Chapter 2 Release Live: ‘ಕೆಜಿಎಫ್ ಚಾಪ್ಟರ್ 2’ ರಿಲೀಸ್; ರಾಜ್ಯದಲ್ಲಿ ಸಂಭ್ರಮ ಹೇಗಿದೆ? ಇಲ್ಲಿದೆ ಲೈವ್ ಅಪ್ಡೇಟ್ಸ್