ರಾಕಿ ಭಾಯ್​ಗೆ ಈದ್​ ಗಿಫ್ಟ್​; ಹಬ್ಬದ ದಿನವೇ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 9.57 ಕೋಟಿ ರೂ. ಬಾಚಿದ ‘ಕೆಜಿಎಫ್​ 2’

| Updated By: ಮದನ್​ ಕುಮಾರ್​

Updated on: May 04, 2022 | 3:29 PM

KGF Chapter 2 Box Office Collection: ‘ಕೆಜಿಎಫ್​: ಚಾಪ್ಟರ್​ 2’ ಪಾಲಿಗೆ ಈದ್​ ಹಬ್ಬ ಗ್ರ್ಯಾಂಡ್​ ಆಗಿದೆ. 20ನೇ ದಿನವೂ ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾ ನೋಡಿದ್ದಾರೆ.

ರಾಕಿ ಭಾಯ್​ಗೆ ಈದ್​ ಗಿಫ್ಟ್​; ಹಬ್ಬದ ದಿನವೇ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 9.57 ಕೋಟಿ ರೂ. ಬಾಚಿದ ‘ಕೆಜಿಎಫ್​ 2’
ಯಶ್​
Follow us on

‘ರಾಕಿಂಗ್​ ಸ್ಟಾರ್​’ ಯಶ್​ (Yash) ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ಬರೆದ ದಾಖಲೆಗಳು ಒಂದೆರಡಲ್ಲ. ರಿಲೀಸ್​ ಆಗಿ 20 ದಿನ ಕಳೆದರೂ ಈ ಚಿತ್ರದ ಹವಾ ಕಮ್ಮಿ ಆಗಿಲ್ಲ. ಮೊದಲ ದಿನವೇ ಹಿಂದಿ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಹೆಣಗಾಡುತ್ತಿವೆ. ಈ ಸಂದರ್ಭದಲ್ಲಿ ‘ಕೆಜಿಎಫ್​ 2’ (KGF Chapter 2) ಸಿನಿಮಾ 20ನೇ ದಿನವಾದ ಮೇ 3ಕ್ಕೆ ಬರೋಬ್ಬರಿ 9.57 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಮೇ 3ರಂದು ಎಲ್ಲೆಡೆ ಈದ್​ ಹಬ್ಬವನ್ನು ಆಚರಿಸಲಾಗಿದೆ. ಈ ಪ್ರಯುಕ್ತ ರಜೆ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಹಿಂದಿಯಲ್ಲಿ ಹೊಸ ಸಿನಿಮಾಗಳು ರಿಲೀಸ್​ ಆಗಿದ್ದರೂ ಕೂಡ ಪ್ರೇಕ್ಷಕರ ಮೊದಲ ಆಯ್ಕೆ ‘ಕೆಜಿಎಫ್​: ಚಾಪ್ಟರ್​ 2’ ಆಗಿದೆ. ಹಾಗಾಗಿ ಈದ್​ (Eid 2022) ಹಬ್ಬದ ದಿನ ಈ ಸಿನಿಮಾಗೆ ಈ ಪರಿ ಕಲೆಕ್ಷನ್​ ಆಗಿದೆ. ಯಾವುದೇ ಸಿನಿಮಾ ತೆರೆಕಂಡು 20ನೇ ದಿನಕ್ಕೆ 9.57 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವುದು ಎಂದರೆ ತಮಾಷೆಯ ವಿಷಯವೇ ಅಲ್ಲ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಗೆಲುವು ಸಿಕ್ಕಿದೆ. ಯಶ್​ ಅವರು ತಮ್ಮ ಡಿಮ್ಯಾಂಡ್​ ಹೆಚ್ಚಿಸಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್​ ನೀಲ್​ ಅವರಿಗೆ ದೇಶಾದ್ಯಂತ ಖ್ಯಾತಿ ಹೆಚ್ಚಿದೆ. ನಟಿ ಶ್ರೀನಿಧಿ ಶೆಟ್ಟಿ ಕೂಡ ಮಿಂಚುತ್ತಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಭರ್ಜರಿ ಲಾಭ ಮಾಡಿಕೊಂಡಿದೆ. ಒಟ್ಟಿನಲ್ಲಿ ಕನ್ನಡದ ಈ ಸಿನಿಮಾ ದೇಶಾದ್ಯಂತ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ.

‘ಕೆಜಿಎಫ್​ 2’ ಸಿನಿಮಾದಲ್ಲಿ ರಾಕಿ ಭಾಯ್​ ಪಾತ್ರಕ್ಕೆ ಚಿನ್ನದ ಮೇಲೆ ಅತಿಯಾದ ವ್ಯಾಮೋಹ ಇರುತ್ತದೆ. ಇನ್ನೂ ಬೇಕು ಇನ್ನೂ ಎಂಬ ಸ್ವಭಾವ ಆತನದ್ದಾಗಿರುತ್ತದೆ. ಬಾಕ್ಸ್ ಆಫೀಸ್​ ವಿಚಾರದಲ್ಲಿ ಅದು ನಿಜವಾಗುತ್ತದೆ. ಹಿಂದಿ ಮಾರುಕಟ್ಟೆಯಲ್ಲಿ 382 ಕೋಟಿ ರೂಪಾಯಿ ಕಲೆಕ್ಷನ್​ ಆಗಿದ್ದರೂ ಕೂಡ ಇನ್ನೂ ಬೇಕು ಇನ್ನೂ ಬೇಕು ಎಂದು ಅಬ್ಬರಿಸುತ್ತಿದ್ದಾನೆ ರಾಕಿ ಭೌಯ್​. ಶೀಘ್ರದಲ್ಲೇ ‘ದಂಗಲ್​’ ಕಲೆಕ್ಷನ್​ (387.38 ಕೋಟಿ ರೂ.) ಅನ್ನು ‘ಕೆಜಿಎಫ್​ 2’ ಚಿತ್ರ ಬೀಟ್​ ಮಾಡಲಿದೆ. ಇನ್ನೇನಿದ್ದರೂ 400 ಕೋಟಿ ಕ್ಲಬ್​ ಸೇರುವುದು ಮಾತ್ರ ಬಾಕಿ.

ವಿಶ್ವಾದ್ಯಂತ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸಾವಿರ ಕೋಟಿ ರೂಪಾಯಿ ಗಡಿ ದಾಟಿದೆ. ತಮಿಳು ವರ್ಷನ್​ ಕೂಡ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದೆ. ಹಿಂದಿಯಲ್ಲಿ ಈವರೆಗೆ ಈ ಸಿನಿಮಾ ಗಳಿಸಿದ ಮೊತ್ತದ ಬಗ್ಗೆ ಟ್ರೇಡ್​ ಅನಲಿಸ್ಟ್​ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸಿನಿಮಾವನ್ನು ಉತ್ತರ ಭಾರತದ ಪ್ರೇಕ್ಷಕರು ಹೆಚ್ಚು ಇಷ್ಟಪಟ್ಟಿದ್ದಾರೆ. ಸಂಜಯ್​ ದತ್​, ರವೀನಾ ಟಂಡನ್​ ಅವರು ಪವರ್​ಫುಲ್​ ಪಾತ್ರಗಳನ್ನು ಮಾಡಿರುವುದು ಚಿತ್ರಕ್ಕೆ ಪ್ಲಸ್​ ಆಗಿದೆ. ಇತ್ತೀಚೆಗೆ ರಿಲೀಸ್​ ಆಗಿರುವ ಹಿಂದಿಯ ‘ರನ್​ವೇ 34’ ಹಾಗೂ ‘ಹೀರೋಪಂತಿ 2’ ಸಿನಿಮಾಗಳು ಈದ್​ ಹಬ್ಬದ ದಿನ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಸೋತಿವೆ. ಈ ಚಿತ್ರಗಳ ಕಥೆ ಬಹುತೇಕ ಮುಗಿಯಿತು ಎಂದೇ ಹೇಳಲಾಗುತ್ತಿದೆ.

ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿಕೆ ನೀಡುವ ಮೂಲಕ ಅಜಯ್​ ದೇವಗನ್​ ಅವರು ದಕ್ಷಿಣ ಭಾರತದ ಅನೇಕರ ವಿರೋಧ ಕಟ್ಟಿಕೊಂಡಿದ್ದರು. ಅದರ ಬೆನ್ನಲ್ಲೇ ಅವರ ‘ರನ್​ವೇ 34’ ಚಿತ್ರ ರಿಲೀಸ್​ ಆಯಿತು. ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲೂ ಇತ್ತು. 5 ದಿನಕ್ಕೆ 19 ಕೋಟಿ ಕಲೆಕ್ಷನ್​ ಮಾಡುವಲ್ಲಿ ಈ ಸಿನಿಮಾ ಸುಸ್ತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ

ಅಕ್ಷಯ್​​ ಬಳಿಕ ಯಶ್​ಗೆ ಪಾನ್​ ಮಸಾಲ ಆಫರ್; ಎಷ್ಟು ಕೋಟಿ ಕೊಟ್ರೂ ಈ ಕೆಲಸ ಮಾಡಲ್ಲ ಎಂದ ನಟ​