Yash: ನೇಪಾಳದಲ್ಲೂ ಯಶ್​ ಹವಾ! ದೇಶ-ಭಾಷೆ ಮೀರಿದ ಅಭಿಮಾನಕ್ಕೆ ಇಲ್ಲಿದೆ ಲೇಟೆಸ್ಟ್​​ ಉದಾಹರಣೆ

Excerpt: KGF 2 Movie updates: ಕೆಜಿಎಫ್​ ಚಾಪ್ಟರ್​ 2 ಚಿತ್ರವನ್ನು ನೋಡಲು ಭಾರತ ಮಾತ್ರವಲ್ಲದೆ ನೇಪಾಳದಲ್ಲಿ ಇರುವ ಸಿನಿಪ್ರಿಯರು ಕೂಡ ಕಾಯುತ್ತಿದ್ದಾರೆ. ಅಲ್ಲಿಯೂ ಸಹ ‘ಕೆಜಿಎಫ್​ 2’ ಕ್ರೇಜ್​ ಜೋರಾಗಿದೆ.

Yash: ನೇಪಾಳದಲ್ಲೂ ಯಶ್​ ಹವಾ! ದೇಶ-ಭಾಷೆ ಮೀರಿದ ಅಭಿಮಾನಕ್ಕೆ ಇಲ್ಲಿದೆ ಲೇಟೆಸ್ಟ್​​ ಉದಾಹರಣೆ
ಯಶ್​- ಕೆಜಿಎಫ್​ ಚಾಪ್ಟರ್​ 2
Edited By:

Updated on: Mar 29, 2021 | 11:13 AM

‘ಕೆಜಿಎಫ್​’ ಸಿನಿಮಾ ಬಿಡುಗಡೆ ಆದ ಬಳಿಕ ನಟ ಯಶ್​ ಕೇವಲ ಸ್ಯಾಂಡಲ್​ವುಡ್​ ಸ್ಟಾರ್​ ಆಗಿ ಉಳಿದಿಲ್ಲ. ಅವರ ಖ್ಯಾತಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹಬ್ಬಿದೆ ಎಂಬುದು ಗೊತ್ತಿದೆ. ಅಷ್ಟೇ ಅಲ್ಲ, ದೇಶದ ಆಚೆಯೂ ಯಶ್​ಗೆ ಅಭಿಮಾನಿಗಳು ಇದ್ದಾರೆ. ದೇಶ-ಭಾಷೆಗಳನ್ನೂ ಮೀರಿ ಅವರನ್ನು ಜನರು ಇಷ್ಟಪಡುತ್ತಿದ್ದಾರೆ. ಕೆಜಿಎಫ್​: ಚಾಪ್ಟರ್​ 2’ ಸಲುವಾಗಿ ನೇಪಾಳದ ಪ್ರಜೆಗಳು ಕೂಡ ಕಾಯುತ್ತಿದ್ದಾರೆ. ಅದಕ್ಕೆ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿರುವ ಒಂದು ಫೋಟೋ ಸಾಕ್ಷಿ ಒದಗಿಸುತ್ತಿದೆ.

ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್​ ಆಗಿ ‘ಕೆಜಿಎಫ್​: ಚಾಪ್ಟರ್​ 1’ ರಿಲೀಸ್​ ಆಗಿತ್ತು. ನಿರೀಕ್ಷೆಗೂ ಮೀರಿದ ಯಶಸ್ಸು ಆ ಸಿನಿಮಾಗೆ ಸಿಕ್ಕಿತ್ತು. ಪರಿಣಾಮವಾಗಿ ‘ಕೆಜಿಎಫ್​: ಚಾಪ್ಟರ್​ 2’ ಕೂಡ ಅದಕ್ಕಿಂತಲೂ ದೊಡ್ಡಮಟ್ಟದ ಹೈಪ್​ ಸೃಷ್ಟಿ ಮಾಡಿದೆ. ಆ ಚಿತ್ರವನ್ನು ನೋಡಲು ಭಾರತ ಮಾತ್ರವಲ್ಲದೆ ನೇಪಾಳದಲ್ಲಿ ಇರುವ ಸಿನಿಪ್ರಿಯರು ಕೂಡ ಕಾಯುತ್ತಿದ್ದಾರೆ. ಅಲ್ಲಿಯೂ ಸಹ ಕೆಜಿಎಫ್​ ಕ್ರೇಜ್​ ಜೋರಾಗಿದೆ. ನೇಪಾಳದ ವಾಹನಗಳ ಮೇಲೆ ‘ಕೆಜಿಎಫ್​ 2’ ಎಂದು ಬರೆದಿರುವ ಫೋಟೋ ಈಗ ವೈರಲ್​ ಆಗಿದೆ.

ವಾಹನದ ಮೇಲೆ ‘ಕೆಜಿಎಫ್​ 2’ ಎಂದು ಬರೆಯಲಾಗಿದೆ ಎಂದಮಾತ್ರಕ್ಕೆ ಇದು ಚಿತ್ರತಂಡ ಮಾಡುತ್ತಿರುವ ಪ್ರಮೋಷನ್​ ಎಂದುಕೊಳ್ಳಬೇಡಿ. ಬದಲಿಗೆ, ನೇಪಾಳದ ಯಶ್​ ಅಭಿಮಾನಿಯೊಬ್ಬರ ಲಾರಿ ಹಿಂಬದಿಯಲ್ಲಿ ಕಾಣಿಸಿದ ಬರಹ ಇದು. ರಾಕಿಂಗ್ ಸ್ಟಾರ್​ ಮೇಲಿನ ಅಭಿಮಾನಕ್ಕಾಗಿ ಹಾಗೂ ಕೆಜಿಎಫ್​ 2 ಸಿನಿಮಾ ಮೇಲಿನ ನಿರೀಕ್ಷೆಗಾಗಿ ಆ ಅಭಿಮಾನಿಯು ತನ್ನ ಲಾರಿ ಹಿಂದೆ ‘KGF 2 Coming Soon’ ಎಂದು ಬರೆಸಿಕೊಂಡಿದ್ದಾರೆ. ಯಶ್​ ಹವಾ ನೇಪಾಳದಲ್ಲೂ ಇದೆ ಎಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ. ಈ ಫೋಟೋ ಕಂಡು ಯಶ್​ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಸದ್ಯ, ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗಿವೆ. ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಯಶ್​ ಅವರು ಡಬ್ಬಿಂಗ್​ ಆರಂಭಿಸಿದ್ದಾರೆ. ಕೆಜಿಎಫ್​ 2 ತಂಡಕ್ಕೆ ಸಂಜಯ್​ ದತ್​, ರವೀನಾ ಟಂಡನ್​, ಪ್ರಕಾಶ್​ ರೈ ಮುಂತಾದವರ ಆಗಮನ ಆಗಿರುವುದರಿಂದ ಚಿತ್ರದ ತೂಕ ಇನ್ನಷ್ಟು ಹೆಚ್ಚಿದೆ. ಜುಲೈ 16ರಂದು ವಿಶ್ವಾದ್ಯಂತ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿಕ್ಕ ಟೀಸರ್​ 17.8 ಕೋಟಿಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

nepal lorry

ವೈರಲ್​ ಆಗುತ್ತಿರುವ ನೇಪಾಳ ಲಾರಿ ಫೋಟೋ

‘ಕೆಜಿಎಫ್​ 2’ ತಂಡದಿಂದ ಸಿಗುವ ಎಲ್ಲಾ ಅಪ್​ಡೇಟ್​ಗಳಿಗಾಗಿ ಯಶ್​ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಪ್ರಚಾರಕಾರ್ಯಗಳಿಗೆ ಚಿತ್ರತಂಡದಿಂದ ಚಾಲನೆ ಸಿಗುವ ನಿರೀಕ್ಷೆ ಇದೆ. ಟ್ರೇಲರ್​ ಮತ್ತು ಹಾಡುಗಳ ಮೇಲೆ ಸಿನಿಪ್ರಿಯರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್​-2ನಲ್ಲಿ ಅನಂತ್​ ನಾಗ್​-ಪ್ರಕಾಶ್​ ರೈ​​ ಪಾತ್ರಕ್ಕೂ ಇರುವ ಸಂಬಂಧವೇನು? ಪ್ರಶಾಂತ್​ ನೀಲ್​ ಬಿಚ್ಚಿಟ್ರು ಅಸಲಿ ವಿಚಾರ 

KGF Chapter 2 ಚಿತ್ರದ ಅಪ್​ಡೇಟ್​ಗಾಗಿ ಕಾದಿದ್ದ ಎಲ್ಲರಿಗೂ ಗುಡ್​-ನ್ಯೂಸ್ ನೀಡಿದ ಯಶ್​-ಪ್ರಶಾಂತ್​ ನೀಲ್​!

Published On - 9:25 am, Mon, 29 March 21

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us