‘ಟಾಕ್ಸಿಕ್’ ಪ್ರಿ-ರಿಲೀಸ್ ಇವೆಂಟ್ಸ್ ಧಮಾಕಾ; ದೇಶದ ವಿವಿಧ ಕಡೆ ಯಶ್ ಟೂರ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಟಿವಿ ಇಂಟರ್ವ್ಯೂಗಳನ್ನು ರದ್ದುಗೊಳಿಸಿ, ಹೈದರಾಬಾದ್, ಚೆನ್ನೈ, ಕೇರಳ ಹಾಗೂ ಉತ್ತರ ಭಾರತದಲ್ಲಿ ಸರಣಿ ಪ್ರಿ-ರಿಲೀಸ್ ಇವೆಂಟ್‌ಗಳನ್ನು ನಡೆಸಲು ಅದ್ಧೂರಿ ಯೋಜನೆ ರೂಪಿಸಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ 'ಟಾಕ್ಸಿಕ್' ಚಿತ್ರದ ಈ ವಿಶಿಷ್ಟ ಪ್ರಚಾರ ತಂತ್ರವು ಸಿನಿಮಾ ಪ್ರಿಯರಲ್ಲಿ ಕಾತರವನ್ನು ಹೆಚ್ಚಿಸಿದೆ.

‘ಟಾಕ್ಸಿಕ್’ ಪ್ರಿ-ರಿಲೀಸ್ ಇವೆಂಟ್ಸ್ ಧಮಾಕಾ; ದೇಶದ ವಿವಿಧ ಕಡೆ ಯಶ್ ಟೂರ್
ಯಶ್

Updated on: Aug 21, 2026 | 8:52 AM

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರತಂಡ ಸಿನಿಮಾದ ಪ್ರಚಾರಕ್ಕಾಗಿ ಬೃಹತ್ ಪ್ರಿ-ರಿಲೀಸ್ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಿದ್ದು, ದೇಶಾದ್ಯಂತ ಇರುವ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾ ರಿಲೀಸ್​​ಗೆ ಕೆಲವೇ ದಿನ ಬಾಕಿ ಇರುವಾಗ ಈ ಈವೆಂಟ್ ಆಯೋಜನೆ ಮಾಡಲಾಗಿದೆ.

ಸಾಮಾನ್ಯವಾಗಿ ಸಿನಿಮಾಗಳ ಪ್ರಚಾರಕ್ಕಾಗಿ ಟಿವಿ ಚಾನೆಲ್​ಗಳಿಗೆ ಇಂಟರ್ವ್ಯೂಗಳನ್ನು ನೀಡಲಾಗುತ್ತದೆ. ಆದರೆ ಈ ಬಾರಿ ‘ಟಾಕ್ಸಿಕ್’ ತಂಡ ಸಂಪೂರ್ಣವಾಗಿ ಕಡೆಗಣಿಸಿದೆ. ಟಿವಿ ಸಂದರ್ಶನಗಳ ಬದಲಾಗಿ, ಪ್ರಮುಖ ನಗರಗಳಿಗೆ ಖುದ್ದಾಗಿ ಭೇಟಿ ನೀಡಲು ತಂಡ ಪ್ಲ್ಯಾನ್ ಮಾಡಿದೆ. ಅಲ್ಲಿನ ಸೋಶಿಯಲ್ ಮೀಡಿಯಾದ ಇನ್​ಫ್ಲುಯೆನ್ಸರ್ ಹಾಗೂ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗುವ ಮೂಲಕ ಅದ್ಧೂರಿ ಪ್ರಿ-ರಿಲೀಸ್ ಕಾರ್ಯಕ್ರಮಗಳನ್ನು ನಡೆಸಿ ಪ್ರಚಾರ ಮಾಡಲು ಚಿತ್ರತಂಡ ಮಾಸ್ ಪ್ಲಾನ್ ಮಾಡಿದೆ.

ಪ್ರಿ-ರಿಲೀಸ್ ಇವೆಂಟ್ ವೇಳಾಪಟ್ಟಿ:

ಆಗಸ್ಟ್ 22: ಹೈದರಾಬಾದ್ – ತೆಲುಗು ಚಿತ್ರರಂಗದ ಪ್ರೇಕ್ಷಕರನ್ನು ತಲುಪಲು ಮೊದಲ ಪ್ರಿ-ರಿಲೀಸ್ ಇವೆಂಟ್ ಹೈದರಾಬಾದ್‌ನಲ್ಲಿ ನಡೆಯಲಿದೆ. ಯಶ್​ಗೆ ಹೈದರಾಬಾದ್​ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ.

ಆಗಸ್ಟ್ 23: ಚೆನ್ನೈ – ತಮಿಳುನಾಡು ಅಭಿಮಾನಿಗಳಿಗಾಗಿ ಚೆನ್ನೈನಲ್ಲಿ ಅದ್ಧೂರಿ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಗಸ್ಟ್ 24: ಕೇರಳ – ಮಲಯಾಳಂ ಪ್ರೇಕ್ಷಕರನ್ನು ರಂಜಿಸಲು ಮೂರನೇ ದಿನ ಕೇರಳದಲ್ಲಿ ತಂಡ ಸಂಚರಿಸಲಿದೆ.

ಆಗಸ್ಟ್ 25: ಉತ್ತರ ಭಾರತ – ಬಾಲಿವುಡ್ ಸೇರಿದಂತೆ ಇಡೀ ಉತ್ತರ ಭಾರತೀಯ ಚಿತ್ರಪ್ರೇಮಿಗಳನ್ನು ತಲುಪಲು ಬೃಹತ್ ಪ್ರಿ-ರಿಲೀಸ್ ಈವೆಂಟ್ ನೆರವೇರಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆಕ್ಷನ್ ಸಿನಿಮಾ ‘ಟಾಕ್ಸಿಕ್’. ಇದಕ್ಕೆ ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಬೃಹತ್ ಮೊತ್ತದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಡ್ರಗ್ ಮಾಫಿಯಾ ಮತ್ತು ಆ್ಯಕ್ಷನ್ ಥ್ರಿಲ್ಲರ್ ಕಥಾವಸ್ತುವನ್ನು ಇದು ಹೊಂದಿದೆ ಎನ್ನಲಾಗಿದೆ. ‘ಕೆಜಿಎಫ್ 2’ ಸರಣಿಯ ಅಭೂತಪೂರ್ವ ಗೆಲುವಿನ ನಂತರ ಯಶ್ ನಟಿಸುತ್ತಿರುವ ಚಿತ್ರವಾದ್ದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:50 am, Fri, 21 August 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us