ಕನ್ನಡದಲ್ಲಿ ಹಲವು ಸ್ಟಾರ್ಗಳಿದ್ದಾರೆ. ವರ್ಷಕ್ಕೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಾರೆ. ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್ 2 ’ ಚಿತ್ರಕ್ಕೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಅನೇಕ ಸ್ಟಾರ್ಗಳು ಆ್ಯಕ್ಟೀವ್ ಆಗಿದ್ದಾರೆ. ಈಗ ಕನ್ನಡದ ಟಾಪ್ ಐದು ಹೀರೋಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಒರಮ್ಯಾಕ್ಸ್ (Oramax) ಮೀಡಿಯಾ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.
ಒರಮ್ಯಾಕ್ಸ್ ಮೀಡಿಯಾ ಕಳೆದ ಕೆಲವು ವರ್ಷಗಳಿಂದ ಹೀರೋಗಳು ಹಾಗೂ ಹಿರೋಯಿನ್ಗಳಿಗೆ ರ‍್ಯಾಂಕಿಂಗ್ ನೀಡುತ್ತಾ ಬಂದಿದೆ. ಅದೇ ರೀತಿ ಕನ್ನಡದ ಸ್ಟಾರ್ಗಳಿಗೂ ಈ ಸಂಸ್ಥೆ ರ‍್ಯಾಂಕ್ ನೀಡಿದೆ. ಅಕ್ಟೋಬರ್ ತಿಂಗಳಲ್ಲಿ ಯಾರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಯಾವುದೇ ಹೊಸ ಸಿನಿಮಾ ಮಾಡುತ್ತಿಲ್ಲ. ಆದಾಗ್ಯೂ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ. ಅವರಿಗೆ ಇರೋ ಖ್ಯಾತಿ ಹೆಚ್ಚುತ್ತಲೇ ಇದೆ. ಅವರು ಸಿನಿಮಾ ಮಾಡದ ಹೊರತಾಗಿಯೂ ಈ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಬಿಗ್ ಬಾಸ್ ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಅವರು ಎರಡನೇ ಸ್ಥಾನದಲ್ಲಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಖುಷಿ ನೀಡಿದೆ.
ರಕ್ಷಿತ್ ಶೆಟ್ಟಿ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಹಾಗೂ ಸೈಡ್ ಬಿ ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಅವರ ಬಗ್ಗೆ ಟಾಕ್ ಜೋರಾಗಿಯೇ ಇತ್ತು. ಈ ಕಾರಣಕ್ಕೆ ಅವರಿಗೆ ಮೂರನೇ ಸ್ಥಾನ ಸಿಕ್ಕಿರಬಹುದು.
ದರ್ಶನ್ ಅವರು ಈ ಲಿಸ್ಟ್ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ನಟನೆಯ ‘ಕಾಟೇರ’ ಸಿನಿಮಾ ರಿಲೀಸ್ ಆಗೋಕೆ ರೆಡಿ ಆಗಿದೆ. ದರ್ಶನ್ ಅಭಿಮಾನಿಗಳ ಸಂಖ್ಯೆ ತುಂಬಾನೇ ದೊಡ್ಡದಿದೆ. ಅವರ ಜನಪ್ರಿಯತೆ ಕಡಿಮೆ ಆಗುವಂಥದ್ದಲ್ಲ.
Ormax Stars India Loves: Most popular male Kannada film stars (Oct 2023) #OrmaxSIL pic.twitter.com/Fhjl3Ti6I1
— Ormax Media (@OrmaxMedia) November 17, 2023
ಇದನ್ನೂ ಓದಿ: ‘ಜೈಲರ್’ ಸಿನಿಮಾದ ನರಸಿಂಹ ಪಾತ್ರದ ಮೇಲೆ ಹೊಸ ಸಿನಿಮಾ ಬರುತ್ತಾ? ಇಲ್ಲಿದೆ ಶಿವರಾಜ್ಕುಮಾರ್ ಪ್ರತಿಕ್ರಿಯೆ
ನಟ ಶಿವರಾಜ್ಕುಮಾರ್ ಅವರ ಎನರ್ಜಿ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ಶಿವಣ್ಣ ಅವರ ಖ್ಯಾತಿ ದೊಡ್ಡ ಮಟ್ಟದಲ್ಲಿ ಹರಡಿದೆ. ಇತ್ತೀಚೆಗೆ ರಿಲೀಸ್ ಆದ ಅವರ ನಟನೆಯ ‘ಘೋಸ್ಟ್’ ಚಿತ್ರ ಸೂಪರ್ ಹಿಟ್ ಆಯಿತು. ಅವರು ಐದನೇ ಸ್ಥಾನದಲ್ಲಿದ್ದಾರೆ.
(ವಿಶೇಷ ಸೂಚನೆ: ಇದು ಸಂಪೂರ್ಣವಾಗಿ ಒರಮ್ಯಾಕ್ಸ್ ಮೀಡಿಯಾ ಅಭಿಪ್ರಾಯ ಆಗಿರುತ್ತದೆ. ಇದಕ್ಕೂ ಟಿವಿ9 ಕನ್ನಡಕ್ಕೂ ಯಾವುದೇ ಸಂಬಂಧವಿಲ್ಲ. ಒರಮ್ಯಾಕ್ಸ್ ಯಾವ ರೀತಿಯಲ್ಲಿ ಈ ರ‍್ಯಾಂಕಿಂಗ್ ನೀಡಿದೆ ಎಂಬುದನ್ನು ನಾವು ಪರಿಶೀಲಿಸಿಲ್ಲ.)
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ