‘ಟಾಕ್ಸಿಕ್’ಗಾಗಿ ಒಂದಾದ ಎರಡು ದೊಡ್ಡ ಶಕ್ತಿಗಳು; ಯಶ್ ಫ್ಯಾನ್ಸ್​ಗೆ ಹಬ್ಬದೂಟ ಫಿಕ್ಸ್

ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ 100 ದಿನ ಬಾಕಿ. ಶೂಟಿಂಗ್ ಮುಗಿದಿದ್ದು, ಪ್ರಚಾರಕ್ಕೆ ತಂಡ ಸಿದ್ಧವಾಗಿದೆ. ಈಗ ಚಿತ್ರದ ಸಂಗೀತದ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಸಂಗೀತ ಸಂಯೋಜಕರಾದ ಅನಿರುದ್ಧ್ ರವಿಚಂದರ್ ಹಾಗೂ ರವಿ ಬಸ್ರೂರು ಅವರು ಟಾಕ್ಸಿಕ್ ಸಿನಿಮಾಗಾಗಿ ಒಂದಾಗಿದ್ದಾರೆ ಎನ್ನಲಾಗಿದೆ. ಅನಿರುದ್ಧ್ ಹಾಡುಗಳಿಗೆ, ರವಿ ಬಸ್ರೂರು ಹಿನ್ನೆಲೆ ಸಂಗೀತಕ್ಕೆ ಕೆಲಸ ಮಾಡಲಿದ್ದಾರೆ.

‘ಟಾಕ್ಸಿಕ್’ಗಾಗಿ ಒಂದಾದ ಎರಡು ದೊಡ್ಡ ಶಕ್ತಿಗಳು; ಯಶ್ ಫ್ಯಾನ್ಸ್​ಗೆ ಹಬ್ಬದೂಟ ಫಿಕ್ಸ್
ಯಶ್

Updated on: Dec 08, 2025 | 10:01 AM

ನಟ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​ಗೆ ಇನ್ನು ಬಾಕಿ ಇರೋದು ಕೇವಲ 100 ದಿನಗಳು ಮಾತ್ರ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರೋ ತಂಡದವರು ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಲು ರೆಡಿ ಆಗಿದ್ದಾರೆ. ಈಗ ಸಿನಿಮಾ ಬಗ್ಗೆ ಒಂದು ಅಚ್ಚರಿಯ ಮಾಹಿತಿ ಕೇಳಿ ಬರುತ್ತಿದೆ. ಈ ಚಿತ್ರಕ್ಕಾಗಿ ಎರಡು ದೊಡ್ಡ ಶಕ್ತಿಗಳು ಒಂದಾಗುತ್ತಿವೆ ಎನ್ನಲಾಗುತ್ತಾ ಇದೆ.

‘ಟಾಕ್ಸಿಕ್’ ಸಿನಿಮಾದ ಮ್ಯೂಸಿಕ್ ಬಗ್ಗೆ ಸಾಕಷ್ಟು ಕುತೂಹಲ ಇದೆ. ಇದನ್ನು ಕಂಪೋಸ್ ಮಾಡೋದು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅನಿರುದ್​ಧ್ ಅವರು ಇದಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ನಂತರ ರವಿ ಬಸ್ರೂರು ಹೆಸರು ಕೇಳಿ ಬಂತು. ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ಮಾಹಿತಿ ಎಂದರೆ, ಈ ಎರಡೂ ದಿಗ್ಗಜರು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ರವಿ ಬಸ್ರೂರು ಅವರು ಕನ್ನಡದ ಖ್ಯಾತ ಸಂಗೀತ ಸಂಯೋಜಕರು. ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಯಶ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕೆಲಸದ ವಿಷಯದಲ್ಲಿ ಇಬ್ಬರ ಮಧ್ಯೆ ಒಳ್ಳೆಯ ಹೊಂದಾಣಿಕೆ ಇದೆ. ಇನ್ನು, ಅನಿರುದ್ಧ್ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಹಲವು ಬಿಗ್ ಬಜೆಟ್ ಚಿತ್ರಗಳಿಗೆ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗ ರವಿ ಬಸ್ರೂರು ಅವರು ‘ಟಾಕ್ಸಿಕ್’ ಚಿತ್ರಕ್ಕೆ ಬಿಜಿಎಂ ನೀಡಲಿದ್ದು, ಅನಿರುದ್ಧ್ ಅವರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಾರಂತೆ.

ಇದನ್ನೂ ಓದಿ: ಸದ್ದಿಲ್ಲದೆ ಪೂರ್ಣಗೊಂಡಿತು ‘ಟಾಕ್ಸಿಕ್’ ಶೂಟ್? ಮುಂದಿರೋ ಪ್ಲ್ಯಾನ್​​ಗಳೇನು?

‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ ಮೊದಲಾದವರು ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಚಿತ್ರವನ್ನು ದೊಡ್ಡ ಬಜೆಟ್​ನಲ್ಲಿ ನಿರ್ಮಿಸಿದೆ. ಈ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.