
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಶೂಟ್ ಪೂರ್ಣಗೊಂಡಿಲ್ಲ, ಈ ಚಿತ್ರ 2026ರ ಮಾರ್ಚ್ಗೆ ರಿಲೀಸ್ ಆಗಲ್ಲ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ, ಈಗ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಈ ಚಿತ್ರದ ಶೂಟ್ ಪೂರ್ಣಗೊಂಡಿದೆಯಂತೆ. ಸಿನಿಮಾ ರಿಲೀಸ್ಗೆ ಮೂರವರೆ ತಿಂಗಳು ಬಾಕಿ ಇರುವಾಗ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಚಿತ್ರದ ಪ್ರಚಾರಕ್ಕೆ ತಂಡದವರು ದೊಡ್ಡ ಪ್ಲ್ಯಾನ್ ರೂಪಿಸಿಕೊಂಡಿದೆ ಎಂದು ವರದಿ ಆಗಿದೆ.
‘ಟಾಕ್ಸಿಕ್’ ಸಿನಿಮಾದ ತಂಡದವರೊಬ್ಬರು ಶೂಟ್ನ ಕೊನೆಯ ದಿನ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ತಂಡದವರು ಸದ್ದಿಲ್ಲದೆ ಕುಂಬಳಕಾಯಿ ಒಡೆದಿದ್ದಾರೆ. ಬೆಂಗಳೂರಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆದಿದೆ.
‘ಟಾಕ್ಸಿಕ್’ ಸಿನಿಮಾ ಕೇವಲ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ. ಈ ಚಿತ್ರವನ್ನು ಕನ್ನಡದ ಜೊತೆಗೆ ಇಂಗ್ಲಿಷನ್ನಲ್ಲೂ ಏಕಕಾಲಕ್ಕೆ ಶೂಟ್ ಮಾಡಲಾಗಿದೆ. ಹೀಗಾಗಿ, ಈ ಚಿತ್ರದ ಪ್ರಚಾರಕ್ಕೆ ಹೆಚ್ಚಿನ ಸಮಯ ಬೇಕು. ಈ ಕಾರಣದಿಂದಲೇ ಮೂರುವರೆ ತಿಂಗಳು ಮೊದಲು ಶೂಟ್ನ ಪೂರ್ಣಗೊಳಿಸಿದೆ ತಂಡ.
ಸದ್ಯ ‘ಟಾಕ್ಸಿಕ್’ ತಂಡದವರು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ಅದಕ್ಕೂ ಕೆಲ ತಿಂಗಳು ಮೊದಲೇ ಚಿತ್ರತಂಡ ಪ್ರಚಾರ ಮಾಡಲಿದೆ. ಜನವರಿ 8 ಯಶ್ ಜನ್ಮದಿನ. ಅಂದು ಸಿನಿಮಾದ ಟೀಸರ್ ರಿಲೀಸ್ ಮಾಡುವ ಸಾಧ್ಯತೆ ಇದೆ.
Toxic Last Day Off Shoot ✨❤️#TOXIC #ToxicTheMovie #YashBOSS #Yash #ToxicOnMarch19th pic.twitter.com/aKket9Dx3T
— YK (@Kohliyash12) December 4, 2025
‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶನ ಇದೆ. ಇವರು ಮಲಯಾಳಂ ನಿರ್ದೇಶಕಿ. ಎರಡು ಸಿನಿಮಾಗಳನ್ನು ನಿರ್ದೇಶಿಸಿದ ಅನುಭವ ಇವರಿಗೆ ಇದೆ. ಈಗ ಇಷ್ಟು ದೊಡ್ಡ ಚಿತ್ರವನ್ನು ಹೇಗೆ ನಿಭಾಯಿಸಿದ್ದಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಮ್ಯೂಸಿಕ್; ಅನಿರುದ್ಧ್ ರವಿಚಂದರ್ ಹೊರಗಿಟ್ಟು ಕನ್ನಡಿಗನಿಗೆ ಅವಕಾಶ ಕೊಟ್ಟ ಯಶ್
ದೇಶದ ವಿವಿಧ ಕಡೆಗಳಲ್ಲಿ ಸುದ್ದಿಗೋಷ್ಠಿ ನಡೆಸಲು ತಂಡದವರು ಪ್ಲ್ಯಾನ್ ಮಾಡಿದ್ದಾರೆ. ಹಲವು ತಿಂಗಳು ಮೊದಲೇ ಶೂಟಿಂಗ್ ಪೂರ್ಣಗೊಂಡಿರುವುದರಿಂದ ಇದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ಮೊದಲದಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.