AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಮ್ಯೂಸಿಕ್; ಅನಿರುದ್ಧ್ ರವಿಚಂದರ್​ ಹೊರಗಿಟ್ಟು ಕನ್ನಡಿಗನಿಗೆ ಅವಕಾಶ ಕೊಟ್ಟ ಯಶ್

ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಕನ್ನಡಿಗರೊಬ್ಬರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅನಿರುದ್ಧ್ ರವಿಚಂದರ್ ಹೆಸರು ಕೇಳಿಬಂದಿದ್ದರೂ, ಅಂತಿಮವಾಗಿ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು ಅವರನ್ನೇ ತಂಡ ಆಯ್ಕೆ ಮಾಡಿದೆ. ಮಲಯಾಳಂನ ಗೀತು ಮೋಹನ್​ದಾಸ್ ನಿರ್ದೇಶನದ ಈ ಚಿತ್ರ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮೂಡಿಬರಲಿದ್ದು, ಹಾಲಿವುಡ್ ಮಟ್ಟದ ಮೇಕಿಂಗ್‌ಗೆ ಸಿದ್ಧತೆ ನಡೆದಿದೆ.

‘ಟಾಕ್ಸಿಕ್’ ಮ್ಯೂಸಿಕ್; ಅನಿರುದ್ಧ್ ರವಿಚಂದರ್​ ಹೊರಗಿಟ್ಟು ಕನ್ನಡಿಗನಿಗೆ ಅವಕಾಶ ಕೊಟ್ಟ ಯಶ್
Toxic Movie
ರಾಜೇಶ್ ದುಗ್ಗುಮನೆ
|

Updated on: Dec 02, 2025 | 2:28 PM

Share

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅದೆಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ ಎಂದರೆ ಯಾವುದೇ ಪ್ರಮುಖ ವಿಷಯಗಳು ಲೀಕ್ ಆಗುತ್ತಿಲ್ಲ. ಈ ಸಿನಿಮಾಗೆ ಮ್ಯೂಸಿಕ್ ಯಾರು ಮಾಡ್ತಾರೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಕನ್ನಡದ ಮ್ಯೂಸಿಕ್ ಕಂಪೋಸರ್​ನ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿ ಆಗಿದೆ.

‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್​ನಲ್ಲೂ ರಿಲೀಸ್ ಆಗುತ್ತಿದೆ. ಎರಡೂ ಭಾಷೆಯಲ್ಲಿ ಒಟ್ಟಿಗೆ ಸಿನಿಮಾನ ಶೂಟ್ ಮಾಡಲಾಗುತ್ತಿದೆ. ಹಾಲಿವುಡ್​ ಮಾರುಕಟ್ಟೆಯಲ್ಲಿ ಸಿನಿಮಾ ಮಾರಾಟ ಆಗಬೇಕು ಎಂದರೆ ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಈ ಕಾರಣದಿಂದಲೇ ‘ಟಾಕ್ಸಿಕ್’ಗೆ ತಂಡದವರು ಹೆಚ್ಚು ಶ್ರಮ ಹಾಕುತ್ತಿದ್ದಾರೆ. ಈ ಸಿನಿಮಾಗೆ ರಾಜೀವ್ ರವಿ ಛಾಯಾಗ್ರಹಣ ಮಾಡಿದರೆ, ಸ್ಟಂಟ್​​ಗಳನ್ನು ಹಾಲಿವುಡ್​ನ ಜೆಜೆ ಪೆರ್ರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡೋದು ಯಾರು ಎಂಬ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ರವಿ ಬಸ್ರೂರು ಅವರೇ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರಂತೆ.

ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಮ್ಯೂಸಿಕ್ ಮಾಡುತ್ತಾರೆ ಎಂಬ ಸುದ್ದಿ ಈ ಮೊದಲು ಹರಿದಾಡಿತ್ತು. ಚಿತ್ರಕ್ಕಾಗಿ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯೂ ಕೇಳಿ ಬಂದಿತ್ತು. ಅನಿರುದ್ಧ್ ಕೊಡೋ ಸಂಗೀತ ಗಮನ ಸೆಳೆಯುವ ರೀತಿಯಲ್ಲಿರುತ್ತದೆ ಎಂಬ ಕಾರಣದಿಂದಲೇ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ, ಈಗ ‘ಟಾಕ್ಸಿಕ್’ ತಂಡ ಮನಸ್ಸು ಬದಲಿಸಿದಂತೆ ಇದೆ.

ರವಿ ಬಸ್ರೂರು ಅವರು ‘ಟಾಕ್ಸಿಕ್’ ಕೆಲಸದಲ್ಲಿ ಬ್ಯುಸಿ ಆಗಿದೆಯಂತೆ. ಯಶ್ ಹಾಗೂ ತಂಡದವರು ಆಗಾಗ ರವಿ ಅವರ ಸ್ಟುಡಿಯೋಗೆ ಭೇಟಿ ನೀಡಿ ಕೆಲಸದ ಬಗ್ಗೆ ಅಪ್​​ಡೇಟ್ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಯಶ್ ನಟನೆಯ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಯಶಸ್ಸು ಕಾಣುವಲ್ಲಿ ರವಿ ಬಸ್ರೂರು ಅವರ ಸಂಗೀತದ ಕೊಡುಗೆ ತುಂಬಾ ದೊಡ್ಡದಿದೆ. ಅವರು ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ರೀತಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಮೊದಲು ರಿಲೀಸ್ ಆಗಿದ್ದ ‘ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್​ಗೆ ರವಿ ಅವರೇ ಸಂಗೀತ ಸಂಯೋಜನೆ ಮಾಡಿದ್ದರು.

ಇದನ್ನೂ ಓದಿ: ‘ಟಾಕ್ಸಿಕ್’ ಎದುರು ಬರಲಿದೆ ಸಲ್ಮಾನ್ ಸಿನಿಮಾ; ಶಾರುಖ್​​ಗೆ ಆದ ಗತಿ ನೆನಪಿಸಿದ ಫ್ಯಾನ್ಸ್

ಕೆವಿಎನ್​ ಪ್ರೊಡಕ್ಷನ್ಸ್ ಸಂಸ್ಥೆ ‘ಟಾಕ್ಸಿಕ್’ ನಿರ್ಮಾಣ ಮಾಡುತ್ತಿದೆ. ಯಶ್ ಅವರ ‘ಮಾನ್​ಸ್ಟರ್ ಮೈಂಡ್ ಕ್ರಿಯೇಷನ್’ ಕೂಡ ಇದಕ್ಕೆ ಕೈ ಜೋಡಿಸಿದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಇದ್ದಾರೆ. ಮಾರ್ಚ್ 19ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ