ಹೇಗಿತ್ತು ನೋಡಿ ಆಯ್ರಾ-ಯಥರ್ವ ರಕ್ಷಾ ಬಂಧನ ಆಚರಣೆ; ಫೋಟೋಗಳಲ್ಲಿ ವಿವರಿಸಿದ ರಾಧಿಕಾ ಪಂಡಿತ್

|

Updated on: Aug 31, 2023 | 9:02 AM

Ayra-Yatharv: ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳು ಎನ್ನುವ ಕಾರಣಕ್ಕೆ ಆಯ್ರಾ ಹಾಗೂ ಯಥರ್ವ್​ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಗಮನ ಇದೆ. ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿರುತ್ತಾರೆ. ಈ ಕಾರಣದಿಂದಲೇ ರಾಧಿಕಾ ಪಂಡಿತ್ ಅವರು ಮಕ್ಕಳ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿಕೊಳ್ಳುತ್ತಾರೆ.

ಹೇಗಿತ್ತು ನೋಡಿ ಆಯ್ರಾ-ಯಥರ್ವ ರಕ್ಷಾ ಬಂಧನ ಆಚರಣೆ; ಫೋಟೋಗಳಲ್ಲಿ ವಿವರಿಸಿದ ರಾಧಿಕಾ ಪಂಡಿತ್
ಆಯ್ರಾ-ಯಥರ್ವ್
Follow us on

ನಟಿ ರಾಧಿಕಾ ಪಂಡಿತ್ (Radhika Pandit) ಅವರು ನಟನೆಯಿಂದ ದೂರ ಇದ್ದಾರೆ. ಆದರೆ, ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಹೊಸ ಹೊಸ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಆಯ್ರಾ ಹಾಗೂ ಯಥರ್ವ್ (Yatharv Yash) ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 30 ರಕ್ಷಾ ಬಂಧನ. ಈ ಹಿನ್ನೆಲೆಯಲ್ಲಿ ಆಯ್ರಾ ತಮ್ಮನಿಗೆ ರಾಖಿ ಕಟ್ಟಿದ್ದಾಳೆ. ಇದನ್ನು ನೋಡಿ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳು ಎನ್ನುವ ಕಾರಣಕ್ಕೆ ಆಯ್ರಾ ಹಾಗೂ ಯಥರ್ವ್​ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಗಮನ ಇದೆ. ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿರುತ್ತಾರೆ. ಈ ಕಾರಣದಿಂದಲೇ ರಾಧಿಕಾ ಪಂಡಿತ್ ಅವರು ಮಕ್ಕಳ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿಕೊಳ್ಳುತ್ತಾರೆ. ಮಕ್ಕಳ ಕೀಟಲೆ ವಿಡಿಯೋಗಳನ್ನು ರಾಧಿಕಾ ಅನೇಕ ಬಾರಿ ಪೋಸ್ಟ್ ಮಾಡಿದ್ದಾರೆ. ಈಗ ಅಕ್ಕ-ತಮ್ಮನ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತೋರಿಸುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಆಯ್ರಾ ತಮ್ಮನಿಗೆ ಪೂಜೆ ಮಾಡಿದ್ದಾಳೆ. ಪ್ರೀತಿಯಿಂದ ರಾಖಿ ಕಟ್ಟಿದ್ದಾಳೆ. ಇಬ್ಬರ ಮುಖದಲ್ಲಿ ಸಾಕಷ್ಟು ಖುಷಿ ಇದೆ. ಈ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಆಯ್ರಾ ಹಾಗೂ ಯಥರ್ವ್ ಪ್ರೀತಿ ಕಂಡು ಖುಷಿಪಟ್ಟಿದ್ದಾರೆ. ಯಾವಾಗಲೂ ಈ ಪ್ರೀತಿ ಹೀಗೆಯೇ ಇರಲಿ ಎಂದು ಹಾರೈಸಿದ್ದಾರೆ.


ಇದನ್ನೂ ಓದಿ: ರಾಧಿಕಾ ಪಂಡಿತ್​-ಯಶ್​ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ; ಇಲ್ಲಿದೆ ಫೋಟೋ ಗ್ಯಾಲರಿ

ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹೊಸ ಪೋಸ್ಟ್ ಹಾಕಿದಾಗೆಲ್ಲ ಅಭಿಮಾನಿಗಳು ಅವರ ಬಳಿ ನಟನೆಗೆ ಮರಳುವಂತೆ ಕೋರುತ್ತಾರೆ. ಇನ್ನು, ಯಶ್ ಅವರು ‘ಕೆಜಿಎಫ್ 2’ ಬಳಿಕ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಅವರು ಶೀಘ್ರವೇ ತಮ್ಮ 19ನೇ ಸಿನಿಮಾ ಅನೌನ್ಸ್ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ, ಆ ಘೋಷಣೆ ಯಾವಾಗ ಆಗುತ್ತದೆ ಎಂಬ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಯಶ್ ಬಗ್ಗೆ ನಿತ್ಯ ಹೊಸ ಹೊಸ ವದಂತಿಗಳು ಹುಟ್ಟಿಕೊಳ್ಳುತ್ತಲೇ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ