Year Ender 2024: ಈ ವರ್ಷ ಕನ್ನಡದಲ್ಲಿ ಹಿಟ್ ಆದ ಸಾಂಗ್​ಗಳ ಪಟ್ಟಿ ಇಲ್ಲಿದೆ; ಮಿಸ್ ಮಾಡದೇ ಕೇಳಿ

|

Updated on: Dec 23, 2024 | 2:39 PM

ಸಂಜಿತ್ ಹೆಗಡೆ ಹಾಗೂ ಸೋನು ನಿಗಮ್ ಜುಗಲ್​ಬಂದಿಯಲ್ಲಿ ಮೂಡಿಬಂದ ‘ಮಾಯಾವಿ..’ ಹಾಡು ಸಾಕಷ್ಟು ಗಮನ ಸೆಳೆದಿದೆ. ಈ ಹಾಡು ಸೃಷ್ಟಿಸಿದ ಸೆನ್ಸೇಷನ್ ಚಿಕ್ಕಮಟ್ಟದಲ್ಲ. ಈ ಹಾಡು ಈಗಲೂ ಅನೇಕರ ಕಿವಿಯಲ್ಲಿ ಗುನುಗುಡುತ್ತಿದೆ. ಈ ಹಾಡಿಗೆ ಸಂಜಿತ್ ಹೆಗಡೆ ಅವರೇ ಕಂಪೋಸ್ ಮಾಡಿದ್ದು, ಇದು ಆಲ್ಬಂ ಸಾಂಗ್. ಈ ರೀತಿಯ ಹಲವು ಹಿಟ್ ಹಾಡುಗಳು ಇವೆ.

Year Ender 2024: ಈ ವರ್ಷ ಕನ್ನಡದಲ್ಲಿ ಹಿಟ್ ಆದ ಸಾಂಗ್​ಗಳ ಪಟ್ಟಿ ಇಲ್ಲಿದೆ; ಮಿಸ್ ಮಾಡದೇ ಕೇಳಿ
ಸೂಪರ್ ಹಿಟ್ ಹಾಡು
Follow us on

2024ನೇ ಇಸ್ವಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ವರ್ಷ ಹಲವು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಅದೇ ರೀತಿ ಸೂಪರ್ ಹಿಟ್ ಹಾಡುಗಳು ಕೂಡ ಬಂದಿವೆ. ಕೆಲವು ಕಿವಿಗೆ ಇಂಪು ಕೊಟ್ಟರೆ, ಇನ್ನೂ ಕೆಲವು ಜನರನ್ನು ಭಾವನಾತ್ಮಕವಾಗಿ ಸೆಳೆದುಕೊಂಡಿವೆ. ಇನ್ನೂ ಕೆಲವು ಮಾಸ್ ಆಗಿದೆ. ಈ ವರ್ಷ ರಿಲೀಸ್ ಆಗಿ ಹಿಟ್ ಆದ ಕನ್ನಡ ಹಾಡುಗಳ ಬಗ್ಗೆ ಇಲ್ಲಿದೆ ವಿವರ.

‘ದ್ವಾಪರ..’

ಈ ವರ್ಷ ರಿಲೀಸ್ ಆಗಿ ಹಿಟ್ ಆದ ಸಿನಿಮಾಗಳ ಪೈಕಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೂ ಸ್ಥಾನ ಇದೆ. ಈ ಚಿತ್ರದ ‘ದ್ವಾಪರ..’ ಹಾಡು ಹಿಟ್ ಆಗಿದೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಜಸ್ಕರಣ್ ಸಿಂಗ್ ಹಾಡಿಗೆ ಧ್ವನಿ ಆಗಿದ್ದಾರೆ. ಈ ಚಿತ್ರದ ‘ಚಿನ್ನಮ್ಮ’, ‘ಮೈ ಮ್ಯರೇಝ್ ಈಸ್ ಫಿಕ್ಸ್​..’, ‘ಹೇ ಗಗನಾ..’ ಹಾಡು ಕೂಡ ಗಮನ ಸೆಳೆದಿದೆ.

‘ಭೀಮ’ ಚಿತ್ರದ ಹಾಡುಗಳು

‘ಭೀಮ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ‘ಬ್ಯಾಡ್ ಬಾಯ್ಸ್ ಹಾಗೂ ‘ ಡೋಂಟ್ ವರಿ ಬೇಬಿ ಚಿನ್ನಮ್ಮ’, ‘ಆಡಿಬಾ ಮಗನೆ..’ ಹಾಡುಗಳು ಈ ಬಾರಿ ಗಮನ ಸೆಳೆದಿವೆ. ಇದು ದುನಿಯಾ ವಿಜಯ್ ನಟನೆಯ ಸಿನಿಮಾ.

‘ಮಾಯಾವಿ..’

ಸಂಜಿತ್ ಹೆಗಡೆ ಹಾಗೂ ಸೋನು ನಿಗಮ್ ಜುಗಲ್​ಬಂದಿಯಲ್ಲಿ ಮೂಡಿಬಂದ ‘ಮಾಯಾವಿ..’ ಹಾಡು ಸಾಕಷ್ಟು ಗಮನ ಸೆಳೆದಿದೆ. ಈ ಹಾಡು ಸೃಷ್ಟಿಸಿದ ಸೆನ್ಸೇಷನ್ ಚಿಕ್ಕಮಟ್ಟದಲ್ಲ. ಈ ಹಾಡು ಈಗಲೂ ಅನೇಕರ ಕಿವಿಯಲ್ಲಿ ಗುನುಗುಡುತ್ತಿದೆ. ಈ ಹಾಡಿಗೆ ಸಂಜಿತ್ ಹೆಗಡೆ ಅವರೇ ಕಂಪೋಸ್ ಮಾಡಿದ್ದು, ಇದು ಆಲ್ಬಂ ಸಾಂಗ್.

‘ನೀ ನಂಗೆ ಅಲ್ಲವ..’

ಸಂಜಿತ್ ಹೆಗಡೆ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದೇ ‘ನೀ ನಂಗೆ ಅಲ್ಲವ..’ ಹಾಡು. ಈ ಹಾಡನ್ನು ಸಿನಿಪ್ರಿಯರು ಸಖತ್ ಇಷ್ಟಪಟ್ಟರು. ಈ ಹಾಡಿನ ಲಿರಿಕ್ಸ್ ಇಷ್ಟ ಆಗಿದೆ. ಸಂಜಿತ್ ಹೆಗಡೆ ಅವರೇ ಈ ಹಾಡನ್ನು ಹಾಡಿದ್ದಾರೆ.

‘ಸೌಗಂಧಿಕ..’

ಪ್ರಯೋಗಾತ್ಮಕ ಸಿನಿಮಾಗಳ ಪೈಕಿ ‘ಶಾಖಾಹಾರಿ..’ ಚಿತ್ರ ಹಿಟ್ ಆಗಿದೆ. ಈ ಸಿನಿಮಾದ ‘ಸೌಗಂಧಿಕ..’ ಹಾಡು ಮೆಲೋಡಿಯಾಗಿದ್ದು ಕೇಳುಗರಿಗೆ ಇಷ್ಟ ಆಗಿದೆ. ಇದು ಈ ವರ್ಷದ ಹಿಟ್ ಹಾಡುಗಳಲ್ಲಿ ಒಂದು.

ಮ್ಯಾಕ್ಸಿಮ್ ಮಾಸ್

ಸುದೀಪ್ ಇದ್ದಾರೆ ಎಂದರೆ ಅಲ್ಲಿ ಮ್ಯಾಕ್ಸಿಮಮ್ ಮಾಸ್ ಪಕ್ಕಾ. ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಮ್ಯಾಕ್ಸಿಮಮ್ ಮಾಸ್..’ ಹಾಡು ಗಮನ ಸೆಳೆದಿದೆ. ಈ  ಹಾಡಿಗೆ ಅನೂಪ್ ಭಂಡಾರಿ ಲಿರಿಕ್ಸ್ ಬರೆದಿದ್ದಾರೆ.

ಎಲ್ಲಾ ಮಾತನ್ನು..

‘ಒಂದು ಸರಳ ಪ್ರೇಮ ಕಥೆ’ ಈ ವರ್ಷದ ಹಿಟ್ ಚಿತ್ರಗಳಲ್ಲಿ ಒಂದು. ಈ ಸಿನಿಮಾದ ‘ಎಲ್ಲಾ ಮಾತನ್ನು..’ ಹಾಡು ಹಿಟ್ ಆಗಿದೆ. ಈ ವರ್ಷ ಬಂದ ಸೂಪರ್ ಹಿಟ್ ಹಾಡುಗಳಲ್ಲಿ ಇದು ಕೂಡ ಒಂದು.

‘ನನಗೆ ನೀನು..’

ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದ ‘ನನಗೆ ನೀನು..’ ಹಾಡು ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:38 pm, Mon, 23 December 24