ಕುಡುಕನ ಸ್ಫೂರ್ತಿಯಿಂದ ಹುಟ್ಟಿತು ‘ಅಮಲು ಏರಿದೆ’ ಹಾಡು; ಭಟ್ಟರ ಸಾಹಿತ್ಯಕ್ಕೆ ಶರಣ್ ಧ್ವನಿ
ಯೋಗರಾಜ್ ಭಟ್ ಮತ್ತು ಶರಣ್ ಅವರ 'ಅಮಲು' ಹಾಡು ಹೊಸ ವರ್ಷಕ್ಕೆ ಬಿಡುಗಡೆಯಾಗಿದೆ. 'ಎಣ್ಣೆ' ಹಾಡಿನ ಯಶಸ್ಸಿನ ನಂತರ, ಈ ಜೋಡಿ ಮತ್ತೆ ಜನಮನ ಗೆದ್ದಿದೆ. ಯೋಗರಾಜ್ ಭಟ್ ಅವರ ಕಲ್ಪನೆ ಮತ್ತು ಸಾಹಿತ್ಯಕ್ಕೆ ಶರಣ್ ಅವರ ಧ್ವನಿ ಅದ್ಭುತವಾಗಿ ಹೊಂದಿಕೆಯಾಗಿದೆ. 'ಅಮಲು' ಆಲ್ಬಮ್‌ನಲ್ಲಿ ವಾಸುಕಿ ವೈಭವ್ ಹಾಡಿರುವ 'ಬಾಯಾರಿಕೆಗೆ ಏನೋ ಕಾರಣ' ಸೇರಿದಂತೆ ಇನ್ನಷ್ಟು ಹಾಡುಗಳು ಬರಲಿವೆ.

ಯೋಗರಾಜ್ ಭಟ್ (Yogaraj Bhat) ಹಾಗೂ ಶರಣ್ ಅವರದ್ದು ಹಿಟ್ ಕಾಂಬಿನೇಷನ್. ಈ ಕಾಂಬಿನೇನ್ ಜನಮನ್ನಣೆ ಪಡೆದಿದ್ದು ಹಾಡಿನ ಮೂಲಕ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದರೆ, ಯೋಗರಾಜ್ ಭಟ್ ಬರೆದ ಲಿರಿಕ್ಸ್ಗೆ ಶರಣ್ ಧ್ವನಿಯಾಗಿದ್ದಾರೆ. ಇವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ‘ಎಣ್ಣೆ’ ಹಾಡು ಸಾಕಷ್ಟು ಗಮನ ಸೆಳೆದಿವೆ. ಈಗ ಇವರ ಕಾಂಬಿನೇಷನ್ನಲ್ಲಿ ಹೊಸ ವರ್ಷಕ್ಕೆ ‘ಅಮಲು’ ಹಾಡು ರಿಲೀಸ್ ಆಗಿದೆ.
ಯೋಗರಾಜ್ ಭಟ್ ಅವರು ಬರೆದ, ‘ನಾವ್ ಮನೆಗ್ ಹೊಗೋದಿಲ್ಲ’, ‘ಖಾಲಿ ಕ್ವಾಟರ್’ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಇದಕ್ಕೆ ಧ್ವನಿ ಆಗಿದ್ದು ಶರಣ್. ಈ ಹಾಡು ಎಲ್ಲರಿಗೂ ಇಷ್ಟ ಆಗಿದೆ. ಈಗ ಇವರ ಕಾಂಬಿನೇಷನ್ ಅಲ್ಲಿ ‘ಅಮಲು ಏರಿದೆ’ ಹಾಡು ಬಿಡುಗಡೆ ಕಂಡಿದೆ. ‘ಅಮಲು’ ಆಲ್ಬಮ್ನ ಮೊದಲ ಸಾಂಗ್ ಇದಾಗಿದೆ. ಈ ಹಾಡಿಗೆ ಯೋಗರಾಜ್ ಭಟ್ ಲಿರಿಕ್ಸ್ ಬರೆದಿದ್ದು, ಶರಣ್ ಹಾಡಿದ್ದಾರೆ. ಚೇತನ್ ದ್ಯಾವಿ ಲಿರಿಕ್ಸ್ ಬರೆದಿದ್ದಾರೆ. ಮಹದೇವ್ ಕನಕಪುರ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
‘ನನಗೆ ದಿನ ರಾತ್ರಿ ಓರ್ವ ಕುಡುಕ ಸಿಗುತ್ತಾ ಇದ್ದ. ನಾನು ಕುಡಿದಿದೀನಿ ಅಂದ್ಕೊಬೇಡಿ ಎಂದು ಹೇಳುತ್ತಿದ್ದ. ಶರಬತ್ತು (ಮದ್ಯ) ಗೀತೆಗಳು ಆ ಕುಡುಕನಿಗೆ ಇಷ್ಟ. ಆ ಕುಡುಕ ನನ್ನ ಹಾಗೂ ಶರಣ್ ಅವರ ದೊಡ್ಡ ಅಭಿಮಾನಿ. ಎಲ್ಲಾ ಕುಡುಕರೂ ತಾವು ಡೀಸೆಂಟ್ ಅಂದುಕೊಳ್ಳುತ್ತಾರೆ. ಆತನ ನೋಡಿ ನನಗೆ ಈ ಹಾಡಿನ ಕಲ್ಪನೆ ಮೂಡಿತು’ ಎಂದಿದ್ದಾರೆ ಯೋಗರಾಜ್ ಭಟ್. ಆರಂಭದಲ್ಲಿ ಈ ಹಾಡಿನಿಂದ ತಪ್ಪಿಸಿಕೊಳ್ಳುವ ಆಲೋಚನೆ ಶರಣ್ಗೆ ಇತ್ತು. ಕೊನೆಗೆ ಎಲ್ಲರ ಒತ್ತಾಯಕ್ಕೆ ಹಾಡಿದರು. ಅವರಿಗೆ ಈಗ ಖುಷಿ ಇದೆ.
‘ಬಾಯಾರಿಕೆಗೆ ಏನೋ ಕಾರಣ’ ಎಂಬ ಹಾಡು ಇದೇ ಆಲ್ಬಂನಲ್ಲಿ ಮೂಡಿ ಬರಲಿದೆಯಂತೆ. ಇದನ್ನು ವಾಸುಕಿ ವೈಭವ್ ಹಾಡಿದ್ದಾರೆ. ಮೂರನೇ ಹಾಡು ಕೂಡ ಇದರಲ್ಲಿ ರಿಲೀಸ್ ಆಗಲಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




