AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕಿಯ ಪ್ರಯತ್ನಕ್ಕೆ ಯೋಗರಾಜ್ ಭಟ್ ಬೆಂಬಲ

Yogaraj Bhatt: 'ಗರಡಿ', 'ಕರಟಕ ದಮನಕ' ಸಿನಿಮಾಗಳನ್ನು ನಿರ್ದೇಶಿಸಿ ಬಿಡುಗಡೆಗೆ ರೆಡಿಯಾಗಿರುವ ಯೋಗರಾಜ್ ಭಟ್ ಈ ನಡುವೆ ನಿರ್ದೇಶಕಿಯೊಬ್ಬರ ಮೊದಲ ಸಿನಿಮಾ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ.

ನಿರ್ದೇಶಕಿಯ ಪ್ರಯತ್ನಕ್ಕೆ ಯೋಗರಾಜ್ ಭಟ್ ಬೆಂಬಲ
Follow us
ಮಂಜುನಾಥ ಸಿ.
|

Updated on: Oct 07, 2023 | 7:49 PM

ಸಿನಿಮಾರಂಗ (Sandalwood) ಪುರುಷ ಪ್ರಧಾನ. ನಟರಿಗೆ ಇರುವಷ್ಟೆ ಆದ್ಯತೆ, ಸಂಭಾವನೆ, ಗೌರವಗಳು ಮಹಿಳೆಯರಿಗೆ ಇಲ್ಲಿಲ್ಲ. ಸಿನಿಮಾದ ಬಹುತೇಕ ಎಲ್ಲ ವಿಭಾಗಗಳಲ್ಲಿಯೂ ಪುರುಷರದ್ದೇ ಪಾರುಪತ್ಯ. ಸಿನಿಮಾ ನಿರ್ದೇಶನದಲ್ಲಂತೂ ಮಹಿಳೆಯರ ಪ್ರಾತಿನಿಧ್ಯ ನಗಣ್ಯ. ಕನ್ನಡದಲ್ಲೂ ಸ್ಥಿತಿ ಬೇರೆಯಾಗೇನೂ ಇಲ್ಲ. ಆದರೆ ಅಲ್ಲೊಬ್ಬರು-ಇಲ್ಲೊಬ್ಬರು ಮಹಿಳೆಯರು ಸಿನಿಮಾ ನಿರ್ದೇಶನಕ್ಕೆ ಕೈ ಹಾಕುತ್ತಲೇ ಇದ್ದಾರೆ. ಇದೇ ಸಾಲಗೆ ಸೇರಿದ್ದಾರೆ ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ ಸಿಂಧು ಗೌಡ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ ಸಿಂಧು ಗೌಡ ನಿರ್ದೇಶನದ ಹಾಗೂ ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಾಣ ಮಾಡಿರುವ ‘ಆಪಲ್ ಕಟ್’ ಸಿನಿಮಾದ ಟೀಸರ್ ಅನ್ನು ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಧ್ವನಿ ನೀಡಿದ್ದಾರೆ. ಆ ಮೂಲಕ ಮಹಿಳಾ ನಿರ್ದೇಶಕಿಯ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ.

ಹೊಸತಂಡದ ಹೊಸಪ್ರಯತ್ನಕ್ಕೆ ಬೆಂಬಲ ನೀಡಿದ ಯೋಗರಾಜ್ ಭಟ್ ಅವರಿಗೆ ಚಿತ್ರತಂಡ ಧನ್ಯವಾದ ಹೇಳುವುದರ ಜೊತೆಗೆ, ಹುಟ್ಟುಹಬ್ಬದ ಅಕ್ಟೋಬರ್ 8 ಶುಭಾಶಯಗಳನ್ನು ಸಹ ತಿಳಿಸಿದ್ದಾರೆ. ‘ಮರ್ಡರ್ ಮಿಸ್ಟರಿ’ ಕತೆಯನ್ನು ‘ಆಪಲ್ ಬಾಕ್ಸ್’ ಸಿನಿಮಾ ಹೊಂದಿದೆ. ಈ ಸಿನಮಾಕ್ಕೆ ಸಿಂಧು ಗೌಡ ಅವರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ನಿರ್ದೇಶನದ ಮೊಟ್ಟ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಸೂರ್ಯ ಗೌಡ ನಾಯಕನಾಗಿ ನಟಿಸಿದ್ದು, ಅಶ್ವಿನಿ ಪೋಲೆಪಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಪ್ಪಣ್ಣ, ಅಭಿಜಿತ್, ಮೀನಾಕ್ಷಿ, ಬಾಲ ರಾಜವಾಡಿ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:‘ಗರಡಿ’ ತಂಡದಿಂದ ಮೂಡಿ ಬಂದ ಹೊಸ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ

ವೀರ್ ಸಮರ್ಥ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್, ಸತ್ಯಪ್ರಕಾಶ್ ಬರೆದಿದ್ದಾರೆ. ವಾಸುಕಿ ವೈಭವ್, ವಿಜಯಶ್ರೀ ಹಾಡಿದ್ದಾರೆ. ರಾಜೇಶ್ ಗೌಡ ಛಾಯಾಗ್ರಹಣ ಹಾಗೂ ಸುಚೇಂದ್ರ ಎನ್ ಮೂರ್ತಿ ಸಂಕಲನ “ಆಪಲ್ ಕಟ್” ಚಿತ್ರಕ್ಕಿದೆ.

ಯೋಗರಾಜ್ ಭಟ್ಟರು ಪ್ರಸ್ತುತ ಎರಡು ಸಿನಿಮಾಗಳನ್ನು ನಿರ್ದೇಶಿಸಿ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ‘ಗರಡಿ’ ಹಾಗೂ ‘ಕರಟಕ ದಮನಕ’ ಹೆಸರಿನ ಎರಡು ಸಿನಿಮಾಗಳನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದು, ಎರಡೂ ಸಿನಿಮಾಗಳ ಚಿತ್ರೀಕರಣಗಳನ್ನು ಮುಗಿಸಿ ಬಿಡುಗಡೆಗೆ ತಯಾರಾಗಿದ್ದಾರೆ. ‘ಗರಡಿ’ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ ನಟಿಸಿದ್ದಾರೆ. ಸೋನಲ್ ಮೊಂಟೆರೊ ನಾಯಕಿ. ದರ್ಶನ್, ಬಿಸಿ ಪಾಟೀಲ್ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ‘ಕರಟಕ ದಮನಕ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು, ಈ ಸಿನಿಮಾವನ್ನು ರಾಕ್​ಲೈನ್ ವೆಂಕಟೇಶ್ ನಿರ್ದೇಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ