Daredevil Musthafa: ಸಿನಿಮಾರಂಗಕ್ಕೆ ಡಾ ಬ್ರೊ ಎಂಟ್ರಿ! ಡೇರ್ ಡೆವಿಲ್​ ಮುಸ್ತಾಫಾಗೆ ಸಾಥ್

Daredevil Musthafa: ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ. ಪೂರ್ಣಚಂದ್ರ ತೇಜಸ್ವಿ ಅವರ ಓದುಗರೇ ಸೇರಿ ನಿರ್ಮಿಸಿರುವ ಸಿನಿಮಾ ಇದಾಗಿದ್ದು, ಈ ಸಿನಿಮಾ ಮೂಲಕ ಡಾ ಬ್ರೋ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ!

Daredevil Musthafa: ಸಿನಿಮಾರಂಗಕ್ಕೆ ಡಾ ಬ್ರೊ ಎಂಟ್ರಿ! ಡೇರ್ ಡೆವಿಲ್​ ಮುಸ್ತಾಫಾಗೆ ಸಾಥ್
ಡೇರ್​ಡೆವಿಲ್ ಮುಸ್ತಾಫಾ
Follow us
ಮಂಜುನಾಥ ಸಿ.
|

Updated on:May 04, 2023 | 9:31 PM

ಕನ್ನಡದ ಜನಪ್ರಿಯ ಯೂಟ್ಯೂಬರ್ ಡಾ ಬ್ರೊ (Dr Bro) ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ! ಹಾಗೆಂದು ಅವರು ಯಾವುದೋ ಸಿನಿಮಾದಲ್ಲಿ ನಟಿಸಿದ್ದಾರೆ ಎಂದೇನೂ ಇಲ್ಲ ಬದಲಿಗೆ, ಹೊಸ ತಂಡವೊಂದರ ಸಿನಿಮಾಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ ಅಷ್ಟೆ. ಪೂರ್ಣಚಂದ್ರ ತೇಜಸ್ವಿ ಅವರ ಡೇರ್ ಡೆವಿಲ್ ಮುಸ್ತಾಫಾ (Daredevil Musthafa) ಕತೆಯನ್ನು ಅದೇ ಹೆಸರಿನಲ್ಲಿ ಸಿನಿಮಾಕ್ಕೆ ತರಲಾಗುತ್ತಿದ್ದು, ಹೊಸಬರೇ ಮಾಡಿರುವ ಈ ಪ್ರಯತ್ನಕ್ಕೆ ಡಾ ಬ್ರೋ ಬೆಂಬಲ ನೀಡಿದ್ದಾರೆ.

ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಟ್ರೈಲರ್​ನಲ್ಲಿ ಪಾತ್ರಗಳ ಪರಿಚಯ, ಸ್ಥಳದ ಪರಿಚಯ ಹಾಗೂ ಕತೆ ಪರಿಚಯ ಮಾಡುವ ಧ್ವನಿ ಡಾ ಬ್ರೋ ಅವರದ್ದೇ ಆಗಿದೆ. ತಮ್ಮ ಯೂಟ್ಯೂಬ್ ವಿಡಿಯೋ ಮಾದರಿಯಲ್ಲಿಯೇ ಟ್ರೈಲರ್​ನಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ ಡಾ ಬ್ರೊ. ಮೂರು ನಿಮಿಷದ ಟ್ರೈಲರ್​ನಲ್ಲಿ ಹಲವು ಭಾರಿ ಡಾ ಬ್ರೋ ಧ್ವನಿ ಕೇಳಿಬರುತ್ತದೆ.

ಇನ್ನು ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ಟ್ರೈಲರ್ ಗಮನಾರ್ಹವಾಗಿದೆ. ರೆಟ್ರೊ ಮಾದರಿಯ ಕತೆಯನ್ನು ಆಹ್ಲಾದಕರ ರೀತಿಯಲ್ಲಿ ತೆರೆಗೆ ತಂದಿರುವ ಕುರುಹು ಟ್ರೈಲರ್​ನಲ್ಲಿದೆ. ಈ ತಂಡ ಪೂರ್ಣಚಂದ್ರ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ ಕತೆಯನ್ನು ಆಧುನಿಕ ಸಿನಿಮಾ ವ್ಯಾಕರಣಕ್ಕೆ ಒಗ್ಗುವಂತೆ ‘ಕಮರ್ಷಿಯಲ್’ ಮಾದರಿಯಲ್ಲಿಯೇ ಕಟ್ಟಿಕೊಟ್ಟಂತಿದೆ ನಿರ್ದೇಶಕ ಶಶಾಂಕ್ ಸೋಗಲ್.

ಆರಂಭದಿಂದಲೂ ಬಹಳ ಸೃಜನಾತ್ಮಕವಾಗಿ ಸಿನಿಮಾದ ಪ್ರಚಾರವನ್ನು ಈ ತಂಡ ಮಾಡಿಕೊಂಡು ಬಂದಿದೆ. ರಾಜ್​ಕುಮಾರ್ ಅವರ ಅನಿಮೇಷನ್ ಚಿತ್ರ ಬಳಸಿ ನಿನ್ನಂಥೋರ್ ಯಾರು ಇಲ್ವಲ್ಲೊ ಹಾಡನ್ನು ಬಿಡುಗಡೆ ಮಾಡಿತ್ತು ಈ ತಂಡ. ಆ ಬಳಿಕ ಸಿನಿಮಾದ ಪಾತ್ರಗಳ ಪರಿಚಯವನ್ನು ಸಹ ಭಿನ್ನವಾಗಿ ಮಾಡಿತ್ತು. ಪಾತ್ರಗಳಿಗೆ ಇನ್​ಸ್ಟಾಗ್ರಾಂ ಖಾತೆಗಳಿದ್ದರೆ ಹೇಗಿರುತ್ತಿತ್ತು ಎಂಬ ಕಲ್ಪನೆಯಲ್ಲಿ ಇನ್​ಸ್ಟಾಗ್ರಾಂ ಅನ್ನು ಬಳಸಿಕೊಂಡು ಹಿನ್ನೆಲೆ ಹಾಡಿನ ಮೂಲಕ ಪಾತ್ರಗಳ ಪರಿಚಯ ಮಾಡಿಸಿತ್ತು ಚಿತ್ರತಂಡ. ಅದಾದ ಬಳಿಕ ಪ್ರೋಮೋ ಸಹ ಭಿನ್ನವಾಗಿಯೇ ಇತ್ತು.

ಬಹುತೇಕ ಹೊಸಬರೇ ಮಾಡಿರುವ ಈ ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಪೂರ್ಣಚಂದ್ರ ತೇಜಸ್ವಿ ಅವರ ಓದುಗರು ಎಂಬುದು ವಿಶೇಷ. ಲೇಖಕರೊಬ್ಬರ ಅಭಿಮಾನಿಗಳೇ ಸೇರಿ ಅವರ ಕತೆಯನ್ನು ಸಿನಿಮಾ ಮಾಡುತ್ತಿರುವುದು ಹೊಸ ಪ್ರಯೋಗ. ಈಗ ಈ ಹೊಸ ತಂಡಕ್ಕೆ ಡಾಲಿ ಧನಂಜಯ್ ಬೆಂಬಲವೂ ವ್ಯಕ್ತವಾಗಿದೆ. ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಡಾಲಿ ಧನಂಜಯ್ ಅವರು ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ವಿತರಣೆ ಸಹ ಅವರದ್ದೇ ಆಗಿದೆ. ಸಿನಿಮಾವು ಮೇ 19ಕ್ಕೆ ಬಿಡುಗಡೆ ಆಗಲಿದೆ.

ಈ ಸಿನಿಮಾದಲ್ಲಿ ಆದಿತ್ಯ ಆಶ್ರೀ, ಅಭಯ್​, ಸುಪ್ರೀತ್​ ಭಾರದ್ವಜ್​, ಆಶಿತ್​, ಶ್ರೀವತ್ಸ, ಪ್ರೇರಣಾ, ಎಂಎಸ್​ ಉಮೇಶ್​, ಮಂಡ್ಯ ರಮೇಶ್​, ಮೈಸೂರು ಆನಂದ್​, ಸುಂದರ್​ ವೀಣಾ, ಹರಿಣಿ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ವಿಜಯ್​ ಶೋಭರಾಜ್​, ಚೈತ್ರಾ ಶೆಟ್ಟಿ, ಕಾರ್ತಿಕ್​ ಪತ್ತಾರ್​, ಕೃಷ್ಣೇಗೌಡ, ಮಹಾದೇವ ನಟಿಸಿದ್ದಾರೆ. ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಗಿದಿದೆ. ಆದಷ್ಟು ಬೇಗ ರಿಲೀಸ್​ ಮಾಡುವ ಗುರಿ ಇಟ್ಟುಕೊಂಡು ‘ಡೇರ್​ಡೆವಿಲ್​ ಮುಸ್ತಾಫಾ’ ತಂಡ ಕೆಲಸ ಮಾಡುತ್ತಿದೆ. ತೇಜಸ್ವಿ ಅವರ 65 ಅಭಿಮಾನಿಗಳು ಸೇರಿಕೊಂಡು ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:46 pm, Thu, 4 May 23

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್