ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಿದ್ದಕ್ಕೆ ‘ವಿಜಯ್ ನನ್ನ ಲೈಫ್’ ಎಂದ ರಶ್ಮಿಕಾ ಮಂದಣ್ಣ
Rashmika Mandanna: ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಸಂದರ್ಶನ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಂದರ್ಶಕಿ ಒಂದು ಪ್ರಶ್ನೆಯನ್ನು ಮುಂದಿಟ್ಟರು. ಇದಕ್ಕೆ ರಶ್ಮಿಕಾ ಮಂದಣ್ಣ ಜಾಣತನದ ಉತ್ತರ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಲವು ವಿಚಾರಕ್ಕೆ ಸುದ್ದಿ ಆಗುತ್ತಾರೆ. ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆ ಹೆಚ್ಚಿದಂತೆ ಜನಪ್ರಿಯತೆ ಕೂಡ ಜಾಸ್ತಿ ಆಗುತ್ತಿದೆ. ಜನಪ್ರಿಯತೆ ಹೆಚ್ಚಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಕರ ಸಂಖ್ಯೆ ಹಿರಿದಾಗುತ್ತಿದೆ. ಇದರ ಜೊತೆಗೆ ಅವರು ಹಲವು ವಿಚಾರಗಳಲ್ಲಿ ಟ್ರೋಲ್ ಕೂಡ ಆಗುತ್ತಿದ್ದಾರೆ. ಈಗ ಅವರು ವಿಜಯ್ (Vijay) ಅವರನ್ನು ಲೈಫ್ ಎಂದು ಕರೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಸಂದರ್ಶನ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಂದರ್ಶಕಿ ಒಂದು ಪ್ರಶ್ನೆಯನ್ನು ಮುಂದಿಟ್ಟರು. ‘ದಳಪತಿ ವಿಜಯ್ ಅಥವಾ ವಿಜಯ್ ದೇವರಕೊಂಡ, ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ’ ಎಂದು ರಶ್ಮಿಕಾಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ರಶ್ಮಿಕಾಗೆ ಉತ್ತರ ಹೇಳೋದು ಕಷ್ಟವಾಯಿತು. ಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ನೀಡಿದರು.
ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣಗೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆಯಾದರೂ ಇದನ್ನು ಅವರು ಒಪ್ಪಿಕೊಂಡಿಲ್ಲ. ಇನ್ನು, ದಳಪತಿ ವಿಜಯ್ ಮೇಲೆ ರಶ್ಮಿಕಾಗೆ ಎಲ್ಲಿಲ್ಲದ ಗೌರವ. ಅವರ ದೊಡ್ಡ ಅಭಿಮಾನಿ. ಚಿಕ್ಕ ವಯಸ್ಸಿನಿಂದ ಅವರ ಸಿನಿಮಾ ನೋಡಿ ಬೆಳೆದವರು ರಶ್ಮಿಕಾ. ಹೀಗಾಗಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡೋದು ರಶ್ಮಿಕಾಗೆ ಕಷ್ಟ ಆಗಿತ್ತು. ಅವರು ತಮ್ಮದೇ ಸ್ಟೈಲ್ನಲ್ಲಿ ಇದಕ್ಕೆ ಉತ್ತರ ಕೊಟ್ಟರು.
‘ನಾನು ದಳಪತಿ ವಿಜಯ್ ಅವರನ್ನು ನೋಡುತ್ತಾ ಬೆಳೆದವಳು. ಹೀಗಾಗಿ, ಅವರು ನನ್ನ ಲೈಫ್. ವಿಜಯ್ ದೇವರಕೊಂಡ ಒಳ್ಳೆಯ ಗೆಳೆಯ. ಹೀಗಾಗಿ ನೀವು ಲೈಫ್ ಮತ್ತು ಗೆಳೆತನದ ಬಗ್ಗೆ ಮಾತನಾಡುತ್ತಿದ್ದೀರಿ. ಯಾರನ್ನು ಆಯ್ಕೆ ಮಾಡುತ್ತೀರಿ ಅನ್ನೋದು ನಿಮಗೆ ಬಿಟ್ಟಿದ್ದು’ ಎಂದರು ರಶ್ಮಿಕಾ.
View this post on Instagram
ಇದನ್ನೂ ಓದಿ: Rashmika Mandanna: 3.8 ಕೋಟಿಗೆ ಏರಿತು ರಶ್ಮಿಕಾ ಮಂದಣ್ಣ ಹಿಂಬಾಲಕರ ಸಂಖ್ಯೆ; ಇನ್ಸ್ಟಾಗ್ರಾಮ್ನಲ್ಲಿ ಇವರದ್ದೇ ಹವಾ
ರಶ್ಮಿಕಾ ಮಂದಣ್ಣ ಜಾಣತನದ ಉತ್ತರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇಬ್ಬರಲ್ಲಿ ಒಬ್ಬರ ಹೆಸರನ್ನು ಅವರು ತೆಗೆದುಕೊಂಡಿದ್ದರೂ ಮತ್ತೋರ್ವ ಹೀರೋನ ಅಭಿಮಾನಿಗಳಿಗೆ ಬೇಸರ ಆಗುತ್ತಿತ್ತು. ಆದರೆ, ಅವರು ಯಾರಿಗೂ ಬೇಸರ ಮಾಡಿಲ್ಲ.
ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಪುಷ್ಪ 2’ ಹಾಗೂ ‘ಅನಿಮಲ್’ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ‘ರೇನ್ ಬೋ’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಇನ್ನೂ ಕೆಲವು ಚಿತ್ರಗಳು ಅವರ ಕೈಯಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Thu, 4 May 23