ಮತ್ತೆ ಅಖಾಡಕ್ಕೆ ಇಳಿದ ‘ಯುವರತ್ನ’ ಅಪ್ಪು.. ಡಬ್ಬಿಂಗ್ ಶುರು!

ಎಲ್ಲವೂ ಸರಿಯಾಗಿದ್ದಿದ್ರೆ, ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿತ್ತು. ಅಷ್ಟರಲ್ಲೇ ಕೊರೊನಾ ವೈರಸ್ ರಾಜ್ಯಕ್ಕೂ ಲಗ್ಗೆ ಇಟ್ಟಿದ್ದರಿಂದ ಚಿತ್ರೀಕರಣವನ್ನ ವಿಧಿಯಿಲ್ಲದೆ ನಿಲ್ಲಿಸಬೇಕಾಯ್ತು. ಆದ್ರೀಗ ಹೆಚ್ಚು-ಕಡಿಮೆ ಎರಡು ತಿಂಗಳ ಬಳಿಕ ಮತ್ತೆ ಯುವರತ್ನ ಚಿತ್ರತಂಡ ಅಖಾಡಕ್ಕೆ ಇಳಿದಿದೆ. ಇಂದಿನ ಅಪ್ಪು ಹಾಗೂ ಸಂತೋಷ್ ಆನಂದ್​ ರಾಮ್ ಕಾಂಬಿನೇಷನ್​ನ ಯುವರತ್ನ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಈ ವಿಷಯವನ್ನ ಸ್ವತ: ಪುನೀತ್ ರಾಜ್​ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈಗಾಗ್ಲೇ ಫಸ್ಟ್ ಡಬ್ಬಿಂಗ್ ಮುಗಿಸಿರೋ […]

ಮತ್ತೆ ಅಖಾಡಕ್ಕೆ ಇಳಿದ ‘ಯುವರತ್ನ’ ಅಪ್ಪು.. ಡಬ್ಬಿಂಗ್ ಶುರು!
ಸಾಧು ಶ್ರೀನಾಥ್​

Updated on: May 25, 2020 | 5:12 PM

ಎಲ್ಲವೂ ಸರಿಯಾಗಿದ್ದಿದ್ರೆ, ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿತ್ತು. ಅಷ್ಟರಲ್ಲೇ ಕೊರೊನಾ ವೈರಸ್ ರಾಜ್ಯಕ್ಕೂ ಲಗ್ಗೆ ಇಟ್ಟಿದ್ದರಿಂದ ಚಿತ್ರೀಕರಣವನ್ನ ವಿಧಿಯಿಲ್ಲದೆ ನಿಲ್ಲಿಸಬೇಕಾಯ್ತು. ಆದ್ರೀಗ ಹೆಚ್ಚು-ಕಡಿಮೆ ಎರಡು ತಿಂಗಳ ಬಳಿಕ ಮತ್ತೆ ಯುವರತ್ನ ಚಿತ್ರತಂಡ ಅಖಾಡಕ್ಕೆ ಇಳಿದಿದೆ.

ಇಂದಿನ ಅಪ್ಪು ಹಾಗೂ ಸಂತೋಷ್ ಆನಂದ್​ ರಾಮ್ ಕಾಂಬಿನೇಷನ್​ನ ಯುವರತ್ನ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಈ ವಿಷಯವನ್ನ ಸ್ವತ: ಪುನೀತ್ ರಾಜ್​ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈಗಾಗ್ಲೇ ಫಸ್ಟ್ ಡಬ್ಬಿಂಗ್ ಮುಗಿಸಿರೋ ಯುವರತ್ನ ಚಿತ್ರತಂಡ ಸೆಂಕೆಡ್ ಹಾಫ್ ಡಬ್ಬಿಂಗ್ ಅನ್ನ ಅರಂಭಿಸಿದೆ. ಈ ಸಂತಸದ ವಿಷಯವನ್ನ ನಿರ್ದೇಶಕ ಸಂತೋಷ್ ಆನಂದ್​ರಾಮ್ ಹಾಗೂ ಅಪ್ಪು ಇಬ್ಬರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ರಾಜಕುಮಾರ ಬಳಿಕ ಅಪ್ಪು ಹಾಗೂ ಸಂತೋಷ್ ಆನಂದ್​ ರಾಮ್ ಕಾಂಬಿನೇಷನ್ ಸಿನಿಮಾ ಯುವರತ್ನ. ಹೀಗಾಗಿ ಸಹಜವಾಗೇ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಇದೇ ವೇಳೆ ಕೊರೊನಾದಿಂದ ಥಿಯೇಟರ್​ಗಳು ಬಾಗಿಲು ಮುಚ್ಚಿವೆ. ಹಾಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತೆ ಅಂತ ಸುದ್ದಿ ಹಬ್ಬಿತ್ತು. ಆದ್ರೆ ಚಿತ್ರತಂಡ ಇನ್ನೂ ಆರು ತಿಂಗಳಾದ್ರೂ ಯುವರತ್ನವನ್ನ ಚಿತ್ರಮಂದಿರದಲ್ಲೇ ರಿಲೀಸ್ ಮಾಡ್ತೀವಿ ಅಂತ ಹೇಳೊ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹೀಗಾಗಿ ಕೊರೊನಾ ಬಿಕ್ಕಟ್ಟು ಮುಗಿದ ಕೂಡ್ಲೇ ಯುವರತ್ನ ಥಿಯೇಟರ್​ಗೆ ಅಪ್ಪಳಿಸೋದು ಗ್ಯಾರಂಟಿ.

Published On - 5:08 pm, Mon, 25 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us