BIFFES: ಅಪ್ಪು ನಟನೆಯ ‘ಯುವರತ್ನ’ಗೆ ಪ್ರಶಸ್ತಿಯ ಗರಿ; ಇಲ್ಲಿದೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ವಿವರ

Yuvarathnaa | Puneeth Rajkumar: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪುನೀತ್ ರಾಜ್​ಕುಮಾರ್ ನಟನೆಯ ‘ಯುವರತ್ನ’ 2021ನೇ ಸಾಲಿನ ಅತ್ಯುತ್ತಮ ಕನ್ನಡ ಮನರಂಜನಾ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. 2020ನೇ ಸಾಲಿನ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಯನ್ನು ‘ದಿಯಾ’ ಪಡೆದುಕೊಂಡಿದೆ.

BIFFES: ಅಪ್ಪು ನಟನೆಯ ‘ಯುವರತ್ನ’ಗೆ ಪ್ರಶಸ್ತಿಯ ಗರಿ; ಇಲ್ಲಿದೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ವಿವರ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: shivaprasad.hs

Mar 12, 2022 | 4:32 PM

ಬೆಂಗಳೂರು: ಎಂಟು ದಿನಗಳ ಕಾಲ ನಡೆದ ಬೆಂಗಳೂರು 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (BIFFES) ತೆರೆ ಬಿದ್ದಿದೆ. ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಸಿನಿಮಾಗಳಿಗೆ ಮಲ್ಲೇಶ್ವರದಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೊರೊನಾ ಕಾರಣದಿಂದ 2020ರ ಪ್ರಶಸ್ತಿ ಸಮಾರಂಭ ನಡೆದಿರಲಿಲ್ಲ. ಈ ಬಾರಿ 2020 ಹಾಗೂ 2021 ಎರಡೂ ಸಾಲಿನ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2021ರ ಸಾಲಿನ ಕನ್ನಡದ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಯನ್ನು ಪುನೀತ್ ರಾಜ್​ಕುಮಾರ್ ನಟನೆಯ ‘ಯುವರತ್ನ’ ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ‘ರಾಬರ್ಟ್’, ಮೂರನೇ ಸ್ಥಾನವನ್ನು ‘ಕೋಟಿಗೊಬ್ಬ’ ಚಿತ್ರಗಳು ಪಡೆದಿವೆ. ‘ಪೊಗರು’ ಚಿತ್ರಕ್ಕೆ ವಿಶೇಷ ಜ್ಯೂರಿ ಅವಾರ್ಡ್ ಲಭಿಸಿದೆ. 2020ರ ಅತ್ಯುತ್ತಮ ಮನರಂಜನಾ ಪ್ರಶಸ್ತಿಯನ್ನು ‘ದಿಯಾ’ ಪಡೆದುಕೊಂಡಿದೆ. ‘ಶಿವಾಜಿ ಸುರತ್ಕಲ್’ ಹಾಗೂ ‘ಲವ್ ಮಾಕ್ಟೇಲ್’ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿವೆ.

2021ರ ಸಾಲಿನಲ್ಲಿ ಕನ್ನಡ ಸಿನೆಮಾ ಸ್ಪರ್ಧಾ ವಿಭಾಗದಲ್ಲಿ ‘ದೊಡ್ಡ ಹಟ್ಟಿ ಬೋರೇಗೌಡ’ ಮೊದಲ ಪ್ರಶಸ್ತಿ ಪಡೆದಿದ್ದು, ಅತ್ಯುತ್ತಮ ಎರಡನೇ ಸಿನಿಮಾ ಪ್ರಶಸ್ತಿಗೆ ‘ದಂಡಿ’ ಆಯ್ಕೆಯಾಗಿದೆ. ‘ದೇವರ ಕಾಡು’ ಮೂರನೇ ಸ್ಥಾನ ಪಡೆದಿದೆ. ‘ಕೇಕ್’ಗೆ ಸ್ಪೇಷಲ್ ಜ್ಯೂರಿ ಅವಾರ್ಡ್ ಲಭಿಸಿದೆ.

2020ರ ಸಾಲಿನಲ್ಲಿ ‘ಪಿಂಕಿ ಎಲ್ಲಿ?’ ಸಿನೆಮಾ ಕನ್ನಡದ ಉತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ನಂತರದಲ್ಲಿ ‘ದಾರಿ ಯಾವುದಯ್ಯ ವೈಕುಂಠಕೆ’, ‘ಓ ನನ್ನ ಚೇತನ’ ಚಿತ್ರಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿವೆ. ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ‘ಮಸಣದ ಹೂವು’ ಚಿತ್ರ ಪಾತ್ರವಾಗಿದೆ.

2021ರ ಸಾಲಿನ ಉತ್ತಮ ಭಾರತೀಯ ಸಿನೆಮಾ ಪ್ರಶಸ್ತಿಯನ್ನು ಮೆಪ್ಪಾಡಿಯನ್‌ ಪಡೆದುಕೊಂಡಿದೆ. ‘ಗಾಂಧಿ ಅಂಡ್‌ ಕಂಪನಿ’, ‘ಅಡಿಯು ಗೊಡಾರ್ಡ್‌’ ಕ್ರಮವಾಗಿ ನಂತರದ ಸ್ಥಾನ ಪಡೆದಿವೆ. 2020ರ ಸಾಲಿನ ಚಿತ್ರಭಾರತಿ ವಿಭಾಗದಲ್ಲಿ ಉತ್ತಮ ಭಾರತೀಯ ಸಿನೆಮಾ ಪ್ರಶಸ್ತಿಯನ್ನು ‘ಸೆಮ್ಕೋರ್‌’ ಪಡೆದಿದ್ದು, ‘ತಾಯಿರಾ’ ದ್ವಿತೀಯ , ‘ಬ್ರಿಡ್ಜ್‌’ ತೃತೀಯ ಸ್ಥಾನ ಪಡೆದಿವೆ.

2021ರ ಸಾಲಿನ ಏಶಿಯಾ ಸಿನೆಮಾ ಸ್ಪರ್ಧಾ ವಿಭಾಗದಲ್ಲಿ ಉತ್ತಮ ಏಶಿಯನ್‌ ಸಿನೆಮಾ ಪ್ರಶಸ್ತಿಯನ್ನು ‘ನಾಟ್‌ ಟುಡೇ’ ಪಡೆದಿದೆ. ‘ಆಬ್ಸೆನ್ಸ್’ ದ್ವಿತೀಯ ಸ್ಥಾನ ಪಡೆದಿದ್ದು, ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ‘ಟು ಡಾಗ್ಸ್‌’ ಪಡೆದಿದೆ. 2020ರ ಸಾಲಿನ ಏಶಿಯನ್‌ ಸಿನೆಮಾ ಸ್ಪರ್ಧಾ ವಿಭಾಗದಲ್ಲಿ ‘ನ್ಯೂಸ್‌ ಪೇಪರ್‌’ ಪ್ರಥಮ, ‘ಗಾಡ್‌ ಆನ್‌ ದ ಬಾಲ್ಕನಿ’ ದ್ವಿತೀಯ, ‘ದ ವಂಡೇರ್ಲುಸ್ಟ್‌ ಆಫ್‌ ಅಪು’ ತೀರ್ಪುಗಾರರ ವಿಶೇಷ ಪ್ರಶ್ತಿಯನ್ನು ಪಡೆದಿವೆ.

ಇದನ್ನೂ ಓದಿ:

‘ಜೇಮ್ಸ್’ ಕೌಂಟ್​ಡೌನ್: ಐದು ದಿನ ಮೊದಲೇ ಸೋಲ್ಡ್ಔಟ್ ಆಯ್ತು ಪುನೀತ್ ಸಿನಿಮಾ ಟಿಕೆಟ್

James: ಪುನೀತ್ ಕುರಿತು ಪ್ರೀತಿಯ ಮಾತನ್ನಾಡಿದ ಕಿಚ್ಚ; ‘ಸಲಾಂ ಸೋಲ್ಜರ್’ ಹಾಡಿನ ರಿಲೀಸ್ ಫೋಟೋಗಳು ಇಲ್ಲಿವೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada