ಯುವ ಪೀಳಿಗೆಯನ್ನು ಸೆಳೆಯುವ ಯುವರತ್ನ ಚಿತ್ರದ ‘ಪವರ್ ಆಫ್ ಯೂತ್’ ಹಾಡಿನ ಪ್ರೊಮೊ ರಿಲೀಸ್
ಸಂತೋಶ್ ಆನಂದ್ ರಾಮ್ ನಿರ್ದೇಶನದಲ್ಲಿ ಚಿತ್ರೀಕರಣಗೊಂಡ ಪುನೀತ್ ರಾಜ್‌ಕುಮಾರ್ ನಟಿಸಿದ ಬಹುನಿರೀಕ್ಷಿತ ಸಿನಿಮಾ 'ಯುವರತ್ನ' ಚಿತ್ರದ ಪ್ರೊಮೊ ನವೆಂಬರ್ 27ರಂದು ಬಿಡುಗಡೆಗೊಂಡಿದೆ.
ಸಂತೋಶ್ ಆನಂದ್ ರಾಮ್ ನಿರ್ದೇಶನದಲ್ಲಿ ಚಿತ್ರೀಕರಣಗೊಂಡ ಪುನೀತ್ ರಾಜ್‌ಕುಮಾರ್ ನಟಿಸಿದ ಬಹುನಿರೀಕ್ಷಿತ ಸಿನಿಮಾ ‘ಯುವರತ್ನ’ ಚಿತ್ರದ ಪ್ರೊಮೊ ನವೆಂಬರ್ 27ರಂದು ಬಿಡುಗಡೆಗೊಂಡಿದೆ.
ಯೂತ್ ಐಕಾನ್ ಹೆಸರು ಪಡೆದಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ‘ಪವರ್ ಆಫ್ ಯೂತ್’ ಹೆಸರೊಂದಿಗೆ ಪ್ರೊಮೊದಲ್ಲಿ ಕಾಣಿಸಿಕೊಂಡಿರುವುದು ಯುವಪೀಳಿಗೆಗೆ ಇಷ್ಟವಾಗುವಂತಿದೆ. ಗಿಟಾರ್ ಹಿಡಿದುಕೊಂಡು ಎಂಟ್ರಿ ಕೊಡುವ ಪುನೀತ್, ನೃತ್ಯದ ಜೊತೆಗೆ ‘ಹೆಸರು ಮಾಡು ಹಸಿರಾಗೊ ಹಾಗೆ, ಉಸಿರು ಹೋದರೂ ಹೆಸರಿರುವ ಹಾಗೆ, ಆ ಚರಿತ್ರೆಗೆ ನೀನೆ ಮುನ್ನುಡಿ, ನೂರು ಸಾರಿ ಕೂಗು, ಪವರ್ ಆಫ್ ಯೂತ್’ ಎಂದು ಹಾಡಿದ್ದಾರೆ. ಹಾಡಿನ ಪೂರ್ಣ ವಿಡಿಯೋ ಡಿಸೆಂಬರ್ 2ಕ್ಕೆ ಬಿಡುಗಡೆ ಆಗಲಿದೆ.
ಪುನೀತ್ ಜೊತೆಗೆ ಈ ಹಾಡಿನಲ್ಲಿ ನಿರ್ದೇಶಕ ಸಂತೋಶ್ ಆನಂದ್ ರಾಮ್ ಕೂಡಾ ನರ್ತಿಸಿದ್ದಾರೆ. ವಿಡಿಯೋ ಸಖತ್ ಆಗಿ ಮೂಡಿ ಬಂದಿದೆ. ಪುನೀತ್ರಾಜ್ಕುಮಾರ್ನ ಯೂಥ್ ಲುಕ್ ಯುವ ಪೀಳಿಗೆಗೆ ಇಷ್ಟವಾಗುವಂತಿದೆ. ಪೂರ್ಣ ಹಾಡು ಜನರಿಗೆ ಸಿಕ್ಕ ಮೇಲೆ ಜನರ ಮೆಚ್ಚುಗೆ ಹೇಗಿರುತ್ತೆ ಎಂಬುದನ್ನು ಕಾದು ನೋಡಬೇಕಿದೆ.
#PowerOfYouthPromo Telugu Out Now on @hombalefilms YouTube Channelhttps://t.co/RtrbS4ugl5 @VKiragandur @SanthoshAnand15 @hombalefilms @MusicThaman @sayyeshaa @Dhananjayaka @Karthik1423 @YOGIGRAJ @AzizNakash @KRG_Connects #Yuvarathnaa #PowerOfYouthPromo
— Puneeth Rajkumar (@PuneethRajkumar) November 27, 2020
Published On - 2:32 pm, Sat, 28 November 20