‘ಅರ್ಜುನ್ ರೆಡ್ಡಿ’ ಎಕ್ಸ್‌ಟೆಂಡೆಡ್ ವರ್ಷನ್; ಖುಷಿ ಸುದ್ದಿ ನೀಡಿದ ಸಂದೀಪ್ ರೆಡ್ಡಿ ವಂಗಾ
ತೆಲುಗಿನ ಕಲ್ಟ್ ಸಿನಿಮಾ ‘ಅರ್ಜುನ್ ರೆಡ್ಡಿ’ 10ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ವಿಜಯ್ ದೇವರಕೊಂಡ ಮರಳಿ ಒಂದಾಗುತ್ತಿದ್ದಾರೆ. ಸಿನಿಮಾದ ಎಕ್ಸ್‌ಟೆಂಡೆಡ್ ವರ್ಷನ್ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಹೊಸ ದೃಶ್ಯಗಳ ಮರು-ಸಂಪಾದನೆಗಾಗಿ ಪ್ರಕ್ರಿಯೆ ನಡೆಯುತ್ತಿದೆ. ಈ ಸುದ್ದಿ ಕೇಳಿ ಈ ಹಿಟ್ ಕಾಂಬಿನೇಷನ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ತೆಲುಗು ಚಿತ್ರರಂಗದ ಬ್ಲಾಕ್ ಬಸ್ಟರ್ ಹಾಗೂ ಕಲ್ಟ್ ಸಿನಿಮಾ ‘ಅರ್ಜುನ್ ರೆಡ್ಡಿ’ ಬಿಡುಗಡೆಯಾಗಿ ಯಶಸ್ಸು ಕಂಡಿದ್ದು, ಇದೀಗ ಈ ಹಿಟ್ ಕಾಂಬಿನೇಷನ್ ಮತ್ತೆ ಒಂದಾಗುವ ಸೂಚನೆ ಸಿಕ್ಕಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಹಾಗೂ ನಟ ವಿಜಯ್ ದೇವರಕೊಂಡ ‘ಅರ್ಜುನ್ ರೆಡ್ಡಿ’ ಸಿನಿಮಾದ 10ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಸಿನಿಮಾದ ‘ಎಕ್ಸ್‌ಟೆಂಡೆಡ್ ವರ್ಷನ್’ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತ ಹಂಚಿಕೊಂಡಿರುವ ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ವಂಗ, ಸಿನಿಮಾವನ್ನು ಮತ್ತೆ ಎಡಿಟ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ, ಸಂದೀಪ್ ಅವರ ಪ್ರಸ್ತುತ ಬ್ಯುಸಿ ಶೆಡ್ಯೂಲ್‌ನಿಂದಾಗಿ ಈ ಪ್ರಾಜೆಕ್ಟ್‌ಗೆ ಸ್ವಲ್ಪ ಸಮಯ ಹಿಡಿಯುವ ಸಾಧ್ಯತೆಯಿದೆ.
ಹೊಸ ದೃಶ್ಯಗಳಿಗೆ ಡಬ್ಬಿಂಗ್ ಮಾಡಲು ವಿಜಯ್ ದೇವರಕೊಂಡಗೆ ಕೇವಲ 2 ರಿಂದ 3 ದಿನ ಸಾಕಾಗುತ್ತದೆ. ಆದರೆ ಸಂದೀಪ್ ವಂಗಾ ಅವರು ಈ ಸಿನಿಮಾದ ಎಡಿಟಿಂಗ್ ಕೆಲಸಕ್ಕಾಗಿ ಸುಮಾರು 15 ರಿಂದ 20 ದಿನ ಮೀಸಲಿಡಬೇಕಾಗಿದೆ. ಸಂದೀಪ್ ಅವರಿಗೆ ಸದ್ಯ ಇತರ ಸಿನಿಮಾಗಳ ಕೆಲಸ ಇರುವುದರಿಂದ ಈ ಯೋಜನೆಯು ಇನ್ನು ಪ್ರಸ್ತಾವನೆ ಹಂತದಲ್ಲೇ ಇದೆ.
“#VijayDeverakonda and I are trying to bring back #ArjunReddy with an extended version for its 10th anniversary.
He needs to dub for just 2-3 days. I, on the other hand, need to sit and work on it for 15-20 days.” pic.twitter.com/wIyfq9QQwL
— Gulte (@GulteOfficial) August 25, 2026
2017ರಲ್ಲಿ ತೆರೆಕಂಡ ‘ಅರ್ಜುನ್ ರೆಡ್ಡಿ’ ಸಂದೀಪ್ ರೆಡ್ಡಿ ವಂಗಾ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದ್ದು, ವಿಜಯ್ ದೇವರಕೊಂಡ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು. ನಂತರ ಈ ಸಿನಿಮಾ ಹಿಂದಿಯಲ್ಲಿ ‘ಕಬೀರ್ ಸಿಂಗ್’ ಹೆಸರಿನಲ್ಲಿ ರಿಮೇಕ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 10ನೇ ವಾರ್ಷಿಕೋತ್ಸವಕ್ಕೆ ಈ ಎಕ್ಸ್‌ಟೆಂಡೆಡ್ ವರ್ಷನ್ ಬಂದರೆ ಅಭಿಮಾನಿಗಳಿಗೆ ಮತ್ತೊಮ್ಮೆ ಈ ಹಿಟ್ ಜೋಡಿಯ ಮ್ಯಾಜಿಕ್ ತೆರೆಮೇಲೆ ನೋಡುವ ಅವಕಾಶ ಸಿಗಲಿದೆ. ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ವಿಜಯ್ ಅವರನ್ನು ಈಗಲೂ ಗುರುತಿಸಲಾಗುತ್ತದೆ. ಈ ಸಿನಿಮಾ ಬಗ್ಗೆ ಅವರಿಗೆ ಖುಷಿ ಇದೆ. ಅವರು ಮತ್ತೆ ಈ ರೀತಿಯ ರಾ ಸಿನಿಮಾ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




