ನಾನ್ ವೆಜ್ ತಿನ್ನಲು, ಕುಡಿಯಲು ಪ್ರತ್ಯೇಕ ಮನೆ ಇಟ್ಟುಕೊಂಡಿದ್ದ ಖ್ಯಾತ ನಟ

ಸಂಜೀವ್ ಕುಮಾರ್ ಅವರಿಗೆ ಆಹಾರದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಆದರೆ, ಮನೆಯಲ್ಲಿ ಮಾಂಸಾಹಾರ ಸೇವನೆ ನಿಷಿದ್ಧವಾಗಿತ್ತು. ಈ ಕಾರಣದಿಂದಲೇ ಸಂಜೀವ್ ಕುಮಾರ್ ಅವರು ಬೇರೆ ಮಾರ್ಗ ಕಂಡು ಹಿಡಿದುಕೊಂಡಿದ್ದರು. ಈ ಬಗ್ಗೆ ನಟ ಸಚಿನ್ ಪಿಳಗಾಂವಕರ್ ಅವರು ಮಾತನಾಡಿದ್ದಾರೆ.

ನಾನ್ ವೆಜ್ ತಿನ್ನಲು, ಕುಡಿಯಲು ಪ್ರತ್ಯೇಕ ಮನೆ ಇಟ್ಟುಕೊಂಡಿದ್ದ ಖ್ಯಾತ ನಟ
ಸಂಜೀವ್ ಕುಮಾರ್
Edited By:

Updated on: Sep 26, 2024 | 7:42 AM

ದಿವಗಂತ ನಟ ಸಂಜೀವ್ ಕುಮಾರ್ ಅವರು ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ಅವರು ಬೇಡಿಕೆಯ ಹೀರೋ ಎಂದೆನಿಸಿಕೊಂಡಿದ್ದರು. ಸಂಜೀವ್ ಕುಮಾರ್ ಅವರಿಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ ಇತ್ತು. ಅವರು ಆಹಾರವನ್ನು ಹುಡುಕಿಕೊಂಡು ಹೋಗಿ ತಿನ್ನುತ್ತಿದ್ದರು. ಅವರ ಮನೆಯಲ್ಲಿ ಎಲ್ಲರೂ ಸಸ್ಯಾಹಾರಿಗಳಾಗಿದ್ದರು. ಹೀಗಾಗಿ, ನಾನ್ ವೆಜ್ ತಿನ್ನಲು ಅವರು ಪ್ರತ್ಯೇಕ ಮನೆಯನ್ನೇ ಇಟ್ಟುಕೊಂಡಿದ್ದರು ಎಂದರೆ ನಂಬುತ್ತೀರಾ? ನೀವು ನಂಬಲೇಬೇಕು. ಹೀಗೊಂದು ಅಪರೂಪದ ಘಟನೆ ಬಗ್ಗೆ ನಾವು ಹೇಳುತ್ತಿದ್ದೇವೆ.

ಸಂಜೀವ್ ಕುಮಾರ್ ಅವರಿಗೆ ಆಹಾರದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಆದರೆ, ಮನೆಯಲ್ಲಿ ಮಾಂಸಾಹಾರ ಸೇವನೆ ನಿಷಿದ್ಧವಾಗಿತ್ತು. ಈ ಕಾರಣದಿಂದಲೇ ಸಂಜೀವ್ ಕುಮಾರ್ ಅವರು ಬೇರೆ ಮಾರ್ಗ ಕಂಡು ಹಿಡಿದುಕೊಂಡಿದ್ದರು. ಈ ಬಗ್ಗೆ ನಟ ಸಚಿನ್ ಪಿಳಗಾಂವಕರ್ ಅವರು ಮಾತನಾಡಿದ್ದಾರೆ.

‘ಸಂಜೀವ್ ಕುಮಾರ್ ಅವರು ಮಾಂಸಾಹಾರ ಸೇವನೆಗಾಗಿ ಬೇರೆ ಮನೆಯನ್ನೇ ತೆಗೆದುಕೊಂಡಿದ್ದರು. ಮುಂಬೈನ ಪಾಲಿ ಹಿಲ್​ನಲ್ಲಿ 1 ಬಿಎಚ್​ಕೆ ಮನೆಯನ್ನು ಬಾಡಿಗೆ ಪಡೆದಿದ್ದರು. ನಾನ್ ವೆಜ್ ತಿನ್ನಲು ಮಾತ್ರ ಈ ಮನೆ ಬಳಕೆ ಆಗುತ್ತಿತ್ತು. ಏಕೆಂದರೆ ಅವರ ಮನೆಯಲ್ಲಿ ಸಸ್ಯಾಹಾರ ಮಾತ್ರ ತಿನ್ನುತ್ತಿದ್ದರು’ ಎಂದಿದ್ದಾರೆ ಸಚಿನ್.

‘ಬಾಡಿಗೆ ಮನೆಯಲ್ಲಿ ಅನೇಕ ರೀತಿಯ ಊಟಗಳನ್ನು ತರಿಸಿಕೊಳ್ಳುತ್ತಿದ್ದರು. ಸಂಜೀವ್ ಕುಮಾರ್, ಶಮಿ ಕಪೂರ್, ಶತ್ರುಘ್ನ ಸಿನ್ಹಾ, ರಣಧೀರ್ ಕಪೂರ್, ನಾನು ಈ ಮನೆಯಲ್ಲಿ ಒಟ್ಟಿಗೆ ಸೇರುತ್ತಿದ್ದೆವು. ಬೆಳಿಗ್ಗೆ 5 ಗಂಟೆವರೆಗೆ ಇಲ್ಲಿ ಕುಡಿಯುತ್ತಿದ್ದೆವು. ಎಂಜಾಯ್ ಮಾಡುತ್ತಿದ್ದೆವು’ ಎಂದಿದ್ದಾರೆ ಸಚಿನ್.

‘ಸಂಜೀವ್ ಕುಮಾರ್ ಆಹಾರ ಪ್ರಿಯ ಆಗಿದ್ದರು. ಅವರಿಗೆ ಎಲ್ಲಕ್ಕಿಂತ ಆಹಾರ ಮುಖ್ಯವಾಗಿತ್ತು. ಗುಜರಾತಿ ಬ್ರಾಹ್ಮಣನಾದರೂ ನಾನ್ ವೆಜ್ ತಿನ್ನುತ್ತಿದ್ದರು. ಬೇರೆಯವರ ಮನೆಯಲ್ಲಿ ಅಥವಾ ಅವರದೇ ಮನೆಯಲ್ಲಿ ಇದನ್ನು ತಿನ್ನಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಬಾಡಿಗೆ ಮನೆ ಮಾಡಿದ್ದರು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ಮದುವೆ ಬಳಿಕ ಆಸ್ಪತ್ರೆಗೆ ದಾಖಲಾದ ತಂದೆ ಶತ್ರುಘ್ನ ಸಿನ್ಹಾ; ಕಾರಣ ಏನು?

ಸಂಜೀವ್ ಕುಮಾರ್ ಅವರು 1985ರಲ್ಲೇ ನಿಧನ ಹೊಂದಿದರು. ಆಗ ಅವರಿಗೆ ಇನ್ನೂ 47 ವರ್ಷ ವಯಸ್ಸು. ಬಹಳ ಸಣ್ಣ ವಯಸ್ಸಿನಲ್ಲೇ ಅವರು ನಿಧನ ಹೊಂದಿದರು. ಅವರಿಗೆ ಹೃದಯಾಘಾತ ಆಗಿತ್ತು. ಆಹಾರ ಹಾಗೂ ಕುಡಿತವೇ ಅವರಿಗೆ ಮುಳುವಾಗಿರಬಹುದು ಎಂದು ಊಹಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.