ಸಾರಾ ತೆಂಡೂಲ್ಕರ್ ಜೊತೆ ಶುಭ್​ಮನ್ ಗಿಲ್ ಡೇಟಿಂಗ್ ಖಚಿತಪಡಿಸಿದ ಖ್ಯಾತ ನಟಿ

ಸಾರಾ ಅಲಿ ಖಾನ್ ಅವರು ಶುಭ್​ಮನ್ ಗಿಲ್ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಸಾರಾ ತೆಂಡೂಲ್ಕರ್​ನ ಬಿಟ್ಟು ಸಾರಾ ಅಲಿ ಖಾನ್ ಜೊತೆ ಶುಭ್​ಮನ್ ಡೇಟಿಂಗ್ ಶುರು ಮಾಡಿಕೊಂಡರು ಎನ್ನುವ ಮಾತು ಕೇಳಿ ಬಂತು. ಈ ಬಗ್ಗೆ ಸಾರಾ ಉತ್ತರಿಸಿದ್ದಾರೆ.

ಸಾರಾ ತೆಂಡೂಲ್ಕರ್ ಜೊತೆ ಶುಭ್​ಮನ್ ಗಿಲ್ ಡೇಟಿಂಗ್ ಖಚಿತಪಡಿಸಿದ ಖ್ಯಾತ ನಟಿ
ಸಾರಾ-ಶುಭ್​ಮನ್-ಸಾರಾ

Updated on: Nov 07, 2023 | 11:09 AM

ಟೀಂ ಇಂಡಿಯಾ ಆಟಗಾರ ಶುಭ್​ಮನ್ ಗಿಲ್ (Shubman Gill) ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಿದೆ. ಹೀಗಿರುವಾಗಲೇ ಅವರು ಸಾರಾ ಅಲಿ ಖಾನ್ ಜೊತೆ ಕಾಣಿಸಿಕೊಂಡರು. ಈ ಫೋಟೋ ವೈರಲ್ ಆಯಿತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಸಾರಾ ಅಲಿ ಖಾನ್ ಅವರು ‘ಕಾಫಿ ವಿತ್ ಕರಣ ಸೀಸನ್ 8’ರ ಮೂರನೇ ಎಪಿಸೋಡ್​ನಲ್ಲಿ ಮಾತನಾಡಿದ್ದಾರೆ. ಇದರ ಪ್ರೋಮೋ ಗಮನ ಸೆಳೆಯುತ್ತಿದೆ.

ಸಾರಾ ಅಲಿ ಖಾನ್ ಹಾಗೂ ಅನನ್ಯಾ ಪಾಂಡೆ ಅವರು ಬಿಗ್ ಬಾಸ್​ಗೆ ಆಗಮಿಸಿದ್ದಾರೆ. ಈ ವೇಳೆ ಅವರಿಗೆ ಹಲವು ಪ್ರಶ್ನೆಗಳು ಎದುರಾಗಿವೆ. ಸಾರಾ ಅಲಿ ಖಾನ್ ಅವರು ಶುಭ್​ಮನ್ ಗಿಲ್ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಸಾರಾ ತೆಂಡೂಲ್ಕರ್​ನ ಬಿಟ್ಟು ಸಾರಾ ಅಲಿ ಖಾನ್ ಜೊತೆ ಶುಭ್​ಮನ್ ಡೇಟಿಂಗ್ ಶುರು ಮಾಡಿಕೊಂಡರು ಎನ್ನುವ ಮಾತು ಕೇಳಿ ಬಂತು. ಈ ಬಗ್ಗೆ ಸಾರಾ ಉತ್ತರಿಸಿದ್ದಾರೆ.

‘ನೀವು ಶುಭ್​ಮನ್ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಎನ್ನುವ ಮಾತಿದೆ’ ಎಂದು ಸಾರಾ ಅಲಿ ಖಾನ್​ಗೆ ಕೇಳಲಾಯಿತು. ‘ನೀವು ತಪ್ಪಾದ ಸಾರಾಗೆ ಈ ಪ್ರಶ್ನೆ ಕೇಳುತ್ತಿದ್ದೀರಿ’ ಎಂದಿದ್ದಾರೆ ಅವರು. ಈ ಮೂಲಕ ಸಾರಾ ತೆಂಡೂಲ್ಕರ್​ಗೆ ಈ ಬಗ್ಗೆ ಕೇಳಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: Sara Ali Khan: ಕಾನ್​ನಲ್ಲಿ ಸಾರಾ ಅಲಿ ಖಾನ್ ಧರಿಸಿರುವ ಉಡುಪಿನ ವಿಶೇಷತೆ ಗೊತ್ತೆ?

ಶುಭ್​ಮನ್​ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಒಂದೇ ಕಡೆಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಕ್ಕೆ ಸುದ್ದಿ ಆಗಿದ್ದರು. ಇತ್ತೀಚೆಗೆ ಇಬ್ಬರೂ ಒಂದೇ ಪಾರ್ಟಿಗೆ ತೆರಳಿದ್ದರು. ಪಾರ್ಟಿಗೆ ಹೋಗುವಾಗ ಇಬ್ಬರೂ ಬೇರೆ ಬೇರೆಯಾಗಿಯೇ ಹೋಗಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಸಾರಾ ಅಲಿ ಖಾನ್ ಅವರು ಈ ಮೊದಲು ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಬ್ರೇಕಪ್​ನಲ್ಲಿ ಇವರ ಸಂಬಂಧ ಕೊನೆ ಆಯಿತು. ಸದ್ಯ ಸಾರಾ ಅವರು ಯಾರ ಜೊತೆ ಡೇಟ್ ಮಾಡುತ್ತಿದ್ದಾರೆ ಎಂಬುದು ರಿವೀಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:46 am, Tue, 7 November 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us