ತಮಿಳಿನ ಹಿರಿಯ ನಟ ಆರ್ಎಸ್ಜಿ ಚೆಲ್ಲಾದುರೈ ಅವರು ಗುರುವಾರ (ಏಪ್ರಿಲ್ 29) ಕೊನೆಯುಸಿರೆಳೆದಿದ್ದಾರೆ. ಚೆನ್ನೈನ ಪೆರಿಯಾರ್ ನಗರದಲ್ಲಿರುವ ತಮ್ಮ ನಿವಾಸದಲ್ಲೇ ಅವರು ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ವಿಜಯ್ ನಟನೆಯ ಕತ್ತಿ, ತೇರಿ, ಧನುಶ್ ನಟನೆಯ ಮಾರಿ ಹಾಗೂ ಮೊದಲಾದ ಸಿನಿಮಾಗಳಲ್ಲಿ ಚೆಲ್ಲಾದುರೈ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು.
ತಮಿಳು ಚಿತ್ರರಂಗದಲ್ಲಿ ಪ್ರಮುಖ ಪೋಷಕ ಪಾತ್ರಧಾರಿಯಾಗಿದ್ದರು. ಗುರುವಾರ ಅವರು ಬಾತ್ರೂಂನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದೆ. ಅವರ ಮಗ ಹೇಳುವ ಪ್ರಕಾರ ಚೆಲ್ಲಾದುರೈ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಶಿವಾಜಿ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಅವರ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಚೆಲ್ಲಾದುರೈ ಸಾವಿಗೆ ಕಾಲಿವುಡ್ ಮಂದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ತಮಿಳು ಸಿನಿಮಾ ಪ್ರೇಕ್ಷಕರು ಕೂಡ ಬೇಸರ ಹೊರ ಹಾಕಿದ್ದಾರೆ.
Rest in peace ayya ?? pic.twitter.com/7oIadgwkMK
— kathir (@am_kathir) April 30, 2021
Had an opportunity to work with such a senior actor in #TikTikTik .. RIP #Chelladurai thathaa.. ? pic.twitter.com/SU8RL2z1um
— Arjunan Actor (@arjunannk) April 30, 2021
ಮಾರಿ ಸಿನಿಮಾದಲ್ಲಿ ಧನುಶ್, ರೋಬೋ ಶಂಕರ್, ಹಾಗೂ ಚೆಲ್ಲಾದುರೈ ನಡುವೆ ದೃಶ್ಯವೊಂದು ಬರುತ್ತದೆ. ಇದು ಮೀಮ್ಗಳಲ್ಲಿ ಹೆಚ್ಚು ಬಳಕೆ ಆಗಿತ್ತು. ವಿಜಯ್ ನಟನೆಯ ತೇರಿ ಸಿನಿಮಾದಲ್ಲಿ ತಂದೆ ಪಾತ್ರದಲ್ಲಿ ಚೆಲ್ಲಾದುರೈ ಕಾಣಿಸಿಕೊಂಡಿದ್ದರು. ಕಾಣೆಯಾದ ಮಗಳನ್ನು ಹುಡುಕುವ ತಂದೆಯಾಗಿ ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದರು ಚೆಲ್ಲಾದುರೈ.
ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಕೆ.ವಿ. ಆನಂದ್ ಅವರು ಹೃದಯಾಘಾತದಿಂದ ಶುಕ್ರವಾರ (ಏ.30) ನಸುಕಿನ 3 ಗಂಟೆ ಸುಮಾರಿಗೆ ನಿಧನರಾಗಿದ್ದರು. ಅವರ ನಿಧನದ ಸುದ್ದಿ ಕೇಳಿ ಇಡೀ ತಮಿಳು ಚಿತ್ರರಂಗಕ್ಕೆ ಆಘಾತ ಆಗಿದೆ. ಕೆಲವೇ ದಿನಗಳ ಹಿಂದೆ ಖ್ಯಾತ ನಟ ವಿವೇಕ್ ಅವರನ್ನು ಕಾಲಿವುಡ್ ಕಳೆದುಕೊಂಡಿತ್ತು. ವಿವೇಕ್ ಕೂಡ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.
ಇದನ್ನೂ ಓದಿ: KV Anand Death: ಖ್ಯಾತ ನಿರ್ದೇಶಕ ಕೆ.ವಿ. ಆನಂದ್ ನಿಧನ; ಕಾಲಿವುಡ್ಗೆ ಮತ್ತೊಂದು ಆಘಾತ
Published On - 2:56 pm, Fri, 30 April 21