ನಟ ಶಾರುಖ್ ಖಾನ್ ಅವರಿಗೆ ಬಾಲಿವುಡ್ನಲ್ಲಿ ದೊಡ್ಡ ಸ್ಟಾರ್ಗಿರಿ ಇದೆ. ಬಹುಕೋಟಿ ಸಂಭಾವನೆ ಪಡೆಯುವ ಅವರು ಇತ್ತೀಚಿನ ವರ್ಷಗಳಲ್ಲಿ ಗೆಲುವು ಕಂಡಿಲ್ಲ. ಅದನ್ನೇ ಗುರಿಯಾಗಿ ಇಟ್ಟುಕೊಂಡು ಅವರನ್ನು ಅನೇಕರು ಹೀಯಾಳಿಸುತ್ತಿದ್ದಾರೆ. ಹಾಗಂತ ಅದಕ್ಕೆಲ್ಲ ಶಾರುಖ್ ತುಂಬ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಮುಂದಿನ ಸಿನಿಮಾ ‘ಪಠಾಣ್’ ಬಗ್ಗೆ ಅವರು ಗಮನ ಹರಿಸಿದ್ದಾರೆ. ಇನ್ನೊಂದು ಮುಖ್ಯ ವಿಚಾರ ಏನೆಂದರೆ, ಶಾರುಖ್ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ (ಜೂ.25) ಬರೋಬ್ಬರಿ 29 ವರ್ಷ ಕಳೆದಿದೆ. ಈ ಸಲುವಾಗಿ ಅವರು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ.
1992ರಲ್ಲಿ ‘ದೀವಾನ’ ಸಿನಿಮಾ ಮೂಲಕ ಶಾರುಖ್ ಖಾನ್ ಬಾಲಿವುಡ್ಗೆ ಎಂಟ್ರಿ ನೀಡಿದ್ದರು. ಮೊದಲ ಚಿತ್ರಕ್ಕೆ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತ್ತು. ನೋಡನೋಡುತ್ತಿದ್ದಂತೆಯೇ 29 ವರ್ಷ ಕಳೆದುಹೋಗಿದೆ. ಈ ಸಂದರ್ಭದಲ್ಲಿ ಅವರು #AskSrk ಹ್ಯಾಶ್ಟ್ಯಾಗ್ ಮೂಲಕ ಟ್ವಿಟರ್ನಲ್ಲಿ ಅಭಿಮಾನಿಗಳಿಂದ ಪ್ರಶ್ನೆ ಸ್ವೀಕರಿಸಿದ್ದಾರೆ. ಈ ವೇಳೆ ಅವರಿಗೆ ಫ್ಯಾನ್ಸ್ ವಿವಿಧ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ಒಬ್ಬ ವ್ಯಕ್ತಿಯಂತೂ ನೇರವಾಗಿ, ‘ಸರ್ ನೀವು ಕೂಡ ನಮ್ಮ ತರಹ ನಿರುದ್ಯೋಗಿ ಆಗಿದ್ದೀರಾ’ ಎಂದು ಕೇಳಿದ್ದಾನೆ. ಆ ಪ್ರಶ್ನೆಯನ್ನು ತುಂಬ ಶಾರುಖ್ ಕೂಲ್ ಆಗಿ ಸ್ವೀಕರಿಸಿದ್ದಾರೆ. ‘ಯಾರು ಏನೂ ಕೆಲಸ ಮಾಡುವುದಿಲ್ಲವೋ ಅವರು ನಿರುದ್ಯೋಗಿ’ ಎನ್ನುವ ಮೂಲಕ ಆ ಟೀಕೆಯನ್ನು ಶಾರುಖ್ ತಳ್ಳಿ ಹಾಕಿದ್ದಾರೆ.
Jo kuch nahi karte….woh… https://t.co/kQl4jbdQ5v
— Shah Rukh Khan (@iamsrk) June 25, 2021
ಶಾರುಖ್ ಅವರಿಗೆ ಎದುರಾದ ಕೆಲವು ಪ್ರಶ್ನೆಗಳು ಹೀಗಿವೆ:
ಫ್ಯಾನ್ಸ್ ಪ್ರಶ್ನೆ: ನಿಮ್ಮ ಸಿನಿಮಾ ಬಗ್ಗೆ ಶೀಘ್ರದಲ್ಲೇ ಅನೌನ್ಸ್ ಮಾಡುತ್ತೀರಾ?
ಶಾರುಖ್: ಲೌಡ್ಸ್ಪೀಕರ್ನಿಂದ ಅನೌನ್ಸ್ಮೆಂಟ್ ಮಾಡಬಹುದು. ಆದರೆ ನನ್ನ ಸಿನಿಮಾಗಳು ನಿಮ್ಮ ಹೃದಯವನ್ನು ಸೌಮ್ಯವಾಗಿ ಪ್ರವೇಶಿಸುವಂತೆ ನಾನು ಮಾಡುತ್ತೇನೆ.
ಫ್ಯಾನ್ಸ್ ಪ್ರಶ್ನೆ: ಬ್ರೇಕಪ್ನಿಂದ ಹೇಗೆ ಹೊರಬರಬೇಕು? ಈಗ 15 ನಿಮಿಷದ ಹಿಂದೆ ಬ್ರೇಕಪ್ ಆಯಿತು..
ಶಾರುಖ್: ಅದರಿಂದ ಎಂದಿಗೂ ಹೊರಬರಲು ಸಾಧ್ಯವಿಲ್ಲ. ಅದನ್ನು ನೆನಪಾಗಿ ಇಟ್ಟುಕೊಳ್ಳಿ. ದುಃಖದಿಂದ ಕಲಿತ ಪಾಠ ನಿಮ್ಮನ್ನು ಗಟ್ಟಿಯಾಗಿಸುತ್ತದೆ.
ಫ್ಯಾನ್ಸ್ ಪ್ರಶ್ನೆ: ಜೀವನದಲ್ಲಿ ನೀವು ಈಗ ಯಾವ ಘಟ್ಟದಲ್ಲಿ ಇದ್ದೀರಿ?
ಶಾರುಖ್: ಬದುಕನ್ನು ಪುನಃ ಕಟ್ಟಿಕೊಳ್ಳುವ ಘಟ್ಟದಲ್ಲಿ.
ಫ್ಯಾನ್ಸ್ ಪ್ರಶ್ನೆ: ಇಂದಿನ ನೆಗೆಟಿವ್ ಯುಗದಲ್ಲಿ ನಾವು ಪಾಸಿಟಿವ್ ಆಗಿರುವುದು ಹೇಗೆ?
ಶಾರುಖ್: ನೆಗೆಟಿವ್ ವಿಷಯಗಳಿಗೆ ಕಿವಿಗೊಡಬೇಡಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.
ಇದನ್ನೂ ಓದಿ:
100 ಕೋಟಿ ಪಡೆಯುವ ಶಾರುಖ್ ಖಾನ್ರನ್ನೂ ಮೀರಿಸಿದ ಅಜಯ್ ದೇವಗನ್; ಹಾಗಾದ್ರೆ ಅವರ ಸಂಭಾವನೆ ಎಷ್ಟು?
ಮೊಟ್ಟ ಮೊದಲ ಬಾರಿಗೆ ಪ್ರಿಯಾಮಣಿಗೆ ಶಾರುಖ್ ನೀಡಿದ್ರು 300 ರೂಪಾಯಿ; ಆ ಹಣದ ಪ್ರಾಮುಖ್ಯತೆ ವಿವರಿಸಿದ ನಟಿ