ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಒಡೆತನದ ‘ಕೋಲ್ಕತ್ತಾ ನೈಟ್ ರೈಡರ್ಸ್’ ತಂಡ ಸುಲಭದಲ್ಲಿ ಈ ವರ್ಷದ ಐಪಿಎಲ್ ಫಿನಾಲೆಗೆ ಏರಿದೆ. ಹೈದರಾಬಾದ್ ನೀಡಿದ 159 ರನ್ಗಳ ಗುರಿಯನ್ನು ಕೇವಲ 13.4 ಓವರ್ಗಳಲ್ಲಿ ತಲುಪಿ ಕೆಕೆಆರ್ ಗೆಲುವಿನ ನಗೆ ಬೀರಿದೆ. ಇದನ್ನು ಶಾರುಖ್ ಖಾನ್ ಅವರು ಸಂಭ್ರಮಿಸಿದ್ದಾರೆ. ಈ ಮಧ್ಯೆ ತಮ್ಮಿಂದಾದ ಅಚಾತುರ್ಯಕ್ಕೆ ಅವರು ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಕಮೆಂಟೇಟರ್ ಆಕಾಶ್ ಚೋಪ್ರಾ ಬಳಿ ಅವರು ಕ್ಷಮೆ ಕೇಳಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಕೆಆರ್ ಹಾಗೂ ಎಸ್ಆರ್ಎಚ್ ನಡುವೆ ಪಂದ್ಯ ನಡೆದಿದೆ. ಪಂದ್ಯ ಮುಗಿದ ಬಳಿಕ ಶಾರುಖ್ ಖಾನ್ ಅವರು ಮೈದಾನಕ್ಕೆ ಇಳಿದರು. ಅಷ್ಟೇ ಅಲ್ಲ ಅಭಿಮಾನಿಗಳತ್ತ ಕೈ ಬೀಸುತ್ತಾ ಬಂದರು. ಸುರೇಶ್ ರೈನಾ, ಆಕಾಶ್ ಚೋಪ್ರಾ ಲೈವ್ನಲ್ಲಿ ಮಾತನಾಡುತ್ತಿರುವುದನ್ನು ಶಾರುಖ್ ಗಮನಿಸಲೇ ಇಲ್ಲ. ಅವರತ್ತ ನುಗ್ಗಿಯೇ ಬಿಟ್ಟರು.
ಇದನ್ನೂ ಓದಿ: ಕ್ಯಾಮರಾ ಮುಂದೆ ಮಕ್ಕಳು ಪರೀಕ್ಷೆ ಬರೆಯುವ ಹಾಗೆ ಮಾಡಿದ್ರು, ಇದೊಂದು ಕಪ್ಪುಚುಕ್ಕೆ: ಸುರೇಶ್ ಕುಮಾರ್
ಸುರೇಶ್ ಹಾಗೂ ಆಕಾಶ್ ಲೈವ್ನಲ್ಲಿದ್ದಾರೆ ಅನ್ನೋ ವಿಚಾರ ಆ ಬಳಿಕ ಶಾರುಖ್ಗೆ ಗೊತ್ತಾಗಿದೆ. ಹೀಗಾಗಿ, ಅವರು ಕ್ಷಮೆ ಕೇಳಿದ್ದಾರೆ. ಎಲ್ಲರಿಗೂ ಹಗ್ ಕೊಟ್ಟು ಆ ಬಳಿಕ ಕೈ ಮುಗಿದ ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ ಅವರು ನಡೆದುಕೊಂಡ ರೀತಿ ಎಲ್ಲರಿಗೂ ಇಷ್ಟವಾಗಿದೆ. ಶಾರುಖ್ ಖಾನ್ ಸ್ಟಾರ್ ನಟ. ಕೆಕೆಆರ್ ಸಹ ಮಾಲೀಕ ಕೂಡ ಹೌದು. ಹೀಗಿರುವಾಗ ಅವರು ಕ್ಷಮೆ ಕೇಳುವ ಅಗತ್ಯವೇ ಇರಲಿಲ್ಲ. ಆದಾಗ್ಯೂ ತಮ್ಮ ತಪ್ಪಿಗೆ ಅವರು ಕ್ಷಮೆ ಕೇಳಿ ದೊಡ್ಡವರಾಗಿದ್ದಾರೆ.
#ShahRukhKhan doing his traditional victory lap 💜#KKRvsSRHhttps://t.co/zUdlCgRZla
— 😎Sourav Srkian Das😎 (@SrkianDas04) May 21, 2024
ಹೈದರಾಬಾದ್ ವಿರುದ್ಧ ಗೆಲುವು ಕಾಣುವ ಮೂಲಕ ಕೆಕೆಆರ್ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆದಿದೆ. ಭಾನುವಾರ (ಮೇ 26) ಚೆನ್ನೈನಲ್ಲಿ ಫಿನಾಲೆ ನಡೆಯಲಿದೆ. ಫಿನಾಲೆಗೆ ಕಾಲಿಡೋ ಮತ್ತೊಂದು ತಂಡ ಯಾವುದು ಎನ್ನುವ ಕುತೂಹಲ ಮೂಡಿದೆ. ಇಂದು ನಡೆಯೋ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ರಾಜಸ್ಥಾನ್ ಮುಖಾಮುಖಿ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:17 am, Wed, 22 May 24