ಶಾರುಖ್ ಖಾನ್ (Shah Rukh Khan) ಅವರು ಚಿತ್ರರಂಗದಲ್ಲಿ ಮೂರು ದಶಕ ಕಳೆದಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೆ ಬಾಲಿವುಡ್ಗೆ ಬಂದು ಇಷ್ಟು ದೊಡ್ಡ ಮಟ್ಟದ ಸ್ಟಾರ್ ಪಟ್ಟ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. 30 ವರ್ಷಗಳ ಜರ್ನಿಯಲ್ಲಿ ಶಾರುಖ್ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಶಾರುಖ್ ಖಾನ್ ಅವರ ನಟನೆಯ ‘ಪಠಾಣ್’ ಚಿತ್ರದ (Pathan Movie) ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಲಾಗಿದೆ.
‘ಶಾರುಖ್ ಖಾನ್ ಹೀರೋ ಆಗಿ ನಟಿಸಿದ್ದ ‘ದೀವಾನ’ ಸಿನಿಮಾ 1992ರ ಜೂನ್ 25ರಂದು ಬಿಡುಗಡೆ ಆಯಿತು. ಇದು ಅವರ ಮೊದಲ ಸಿನಿಮಾ. ಈ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಈ ಸಿನಿಮಾದಿಂದ ಬಾಲಿವುಡ್ನಲ್ಲಿ ಅವರಿಗೆ ಭದ್ರ ಬುನಾದಿ ಸಿಕ್ಕಿತು. ಶಾರುಖ್ ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಲ್ಲರೂ ಅವರಿಗೆ ಶುಭ ಕೋರುತ್ತಿದ್ದಾರೆ.
ಶಾರುಖ್ ಖಾನ್ ನಟನೆಯ ‘ಜೀರೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋಲು ಕಂಡಿತು. ಇದಾದ ಬಳಿಕ ಶಾರುಖ್ ಸುಮಾರು ನಾಲ್ಕು ವರ್ಷಗಳ ಕಾಲ ನಟನೆಯಿಂದ ಅಂತರ ಕಾಯ್ದುಕೊಂಡರು. ಈಗ ಶಾರುಖ್ ಒಟ್ಟೊಟ್ಟಿಗೆ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅವರು ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಪಠಾಣ್’ ಚಿತ್ರತಂಡ ಹೊಸ ರಗಡ್ ಪೋಸ್ಟರ್ ರಿಲೀಸ್ ಮಾಡಿದೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಶಾರುಖ್ ಖಾನ್, ವಿಶೇಷ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಭಿಮಾನಿಗಳು ತೋರಿದ ಪ್ರೀತಿಗೆ ಖುಷಿ ವ್ಯಕ್ತಪಡಿಸಿದ್ದಾರೆ. ‘ಪಠಾಣ್’ ಪೋಸ್ಟರ್ನಿಂದ ಫ್ಯಾನ್ಸ್ಗೆ ದೊಡ್ಡ ಉಡುಗೊರೆ ಸಿಕ್ಕಂತೆ ಆಗಿದೆ.
‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ವಾರ್’ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ದೀಪಿಕಾ ಪಡುಕೋಣೆ ಚಿತ್ರದ ನಾಯಕಿ. ‘ಚೆನ್ನೈ ಎಕ್ಸ್ಪ್ರೆಸ್’ ಚಿತ್ರದಲ್ಲಿ ಶಾರುಖ್ ಹಾಗೂ ದೀಪಿಕಾ ಕೆಮಿಸ್ಟ್ರಿ ವರ್ಕ್ ಆಗಿತ್ತು. ಜಾನ್ ಅಬ್ರಾಹಂ ಅವರು ‘ಪಠಾಣ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
See you next year on 25th Jan, 2023. Celebrate #Pathaan with #YRF50 only at a big screen near you on 25th January, 2023. Releasing in Hindi, Tamil and Telugu. @deepikapadukone | @TheJohnAbraham | #SiddharthAnand | @yrf pic.twitter.com/MUN3XFq5u3
— Shah Rukh Khan (@iamsrk) June 25, 2022
ಶಾರುಖ್ ಖಾನ್ ಅವರು ಸಿನಿಮಾ ಜಗತ್ತಿಗೆ ಕಾಲಿಡುವುದಕ್ಕೂ ಮುನ್ನ ಕಿರುತೆರೆಯಲ್ಲಿ ನಟಿಸುತ್ತಿದ್ದರು. ಬಳಿಕ ಅವರಿಗೆ ದೊಡ್ಡ ಪರದೆಯಲ್ಲಿ ಬ್ರೇಕ್ ಸಿಕ್ಕಿತು. 90ರ ದಶಕದಲ್ಲಿ ಶಾರುಖ್ ಖಾನ್ ಅವರು ಮೋಸ್ಟ್ ಸೆಲೆಬ್ರೇಟೆಡ್ ನಟನಾಗಿ ಮೆರೆದರು. 1993ರಲ್ಲಿ ‘ಬಾಜಿಗರ್’, ‘ಡರ್’ ಸಿನಿಮಾಗಳಲ್ಲಿನ ಅವರ ಅಭಿನಯಕ್ಕೆ ಜನರು ಫಿದಾ ಆದರು. ಈ ಎರಡೂ ಚಿತ್ರಗಳಿಗೆ ಅವರು ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡರು. ಮರುವರ್ಷ ತೆರೆಕಂಡ ‘ಕಭಿ ಹಾ ಕಭಿ ನಾ’ ಸಿನಿಮಾಗೂ ಶಾರುಖ್ ಫಿಲ್ಮ್ ಫೇರ್ ಅವಾರ್ಡ್ ಬಾಚಿಕೊಂಡರು.
ಇದನ್ನೂ ಓದಿ: ಶಾರುಖ್ ಖಾನ್ ಮಗಳು ಸುಹಾನಾ ಖಾನ್ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್ ಕಿಡ್
ಶಾರುಖ್ ಖಾನ್ ಬಾಲಿವುಡ್ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್ಫೇರ್’ ಪಡೆದ ಕಿಂಗ್ ಖಾನ್