AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನ ಜೊತೆ ನಂಟು, ಬಾಲ್ಯ ನೆನಪಿಸಿಕೊಂಡ ಶಾರುಖ್ ಖಾನ್

Shah Rukh Khan: ನಿನ್ನೆಯಷ್ಟೆ ಶಾರುಖ್ ಖಾನ್ ಮಂಗಳೂರಿಗೆ ಬಂದಿದ್ದರು. ತಮ್ಮ ಮೊದಲ ಸಿನಿಮಾ ‘ದೀವಾನಾ’ ಬಿಡುಗಡೆ ಆಗಿ 35 ವರ್ಷಗಳಾಗಿದ್ದು ಅದರ ಸಂಭ್ರಮಾಚರಣೆಗಾಗಿ ಶಾರುಖ್ ಖಾನ್ ಅವರು ಮಂಗಳೂರಿಗೆ ಬಂದಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಶಾರುಖ್ ಖಾನ್ ಅವರನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ಶಾರುಖ್ ಖಾನ್ ಅವರು ಮಂಗಳೂರಿನಲ್ಲಿ ತಾವು ಕಳೆದ ಬಾಲ್ಯವನ್ನು ನೆನಪು ಮಾಡಿಕೊಂಡರು. ಅಲ್ಲದೆ, ತಾವು ನಟರಾಗದೇ ಇದ್ದಿದ್ದರೆ ಮಂಗಳೂರಿನಲ್ಲೇ ಇರುತ್ತಿದ್ದೆ ಎಂದು ಸಹ ಹೇಳಿದರು.

ಮಂಗಳೂರಿನ ಜೊತೆ ನಂಟು, ಬಾಲ್ಯ ನೆನಪಿಸಿಕೊಂಡ ಶಾರುಖ್ ಖಾನ್
Shah Rukh Khan
ಮಂಜುನಾಥ ಸಿ.
|

Updated on:Jun 26, 2026 | 12:43 PM

Share

ಶಾರುಖ್ ಖಾನ್ (Shah Rukh Khan), ಭಾರತದ ಟಾಪ್ ಸೂಪರ್ ಸ್ಟಾರ್. ವಿಶ್ವದಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಭಾರತೀಯ ನಟ ಶಾರುಖ್ ಖಾನ್ ಎನ್ನಲಾಗುತ್ತದೆ. ನಿನ್ನೆಯಷ್ಟೆ ಶಾರುಖ್ ಖಾನ್ ಮಂಗಳೂರಿಗೆ ಬಂದಿದ್ದರು. ತಮ್ಮ ಮೊದಲ ಸಿನಿಮಾ ‘ದೀವಾನಾ’ ಬಿಡುಗಡೆ ಆಗಿ 35 ವರ್ಷಗಳಾಗಿದ್ದು ಅದರ ಸಂಭ್ರಮಾಚರಣೆಗಾಗಿ ಶಾರುಖ್ ಖಾನ್ ಅವರು ಮಂಗಳೂರಿಗೆ ಬಂದಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಶಾರುಖ್ ಖಾನ್ ಅವರನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ಶಾರುಖ್ ಖಾನ್ ಅವರು ಮಂಗಳೂರಿನಲ್ಲಿ ತಾವು ಕಳೆದ ಬಾಲ್ಯವನ್ನು ನೆನಪು ಮಾಡಿಕೊಂಡರು. ಅಲ್ಲದೆ, ತಾವು ನಟರಾಗದೇ ಇದ್ದಿದ್ದರೆ ಮಂಗಳೂರಿನಲ್ಲೇ ಇರುತ್ತಿದ್ದೆ ಎಂದು ಸಹ ಹೇಳಿದರು.

ಶಾರುಖ್ ಖಾನ್, ಪುಟ್ಟ ಬಾಲಕನಾಗಿದ್ದಾಗ ಅವರು ಮಂಗಳೂರಿನಲ್ಲಿದ್ದ ತಮ್ಮ ಅಜ್ಜಿ-ತಾತನ ಜೊತೆಗೆ ನೆಲೆಸಿದ್ದರು. ಶಾರುಖ್ ಖಾನ್ ಅವರ ತಾಯಿ, ಮಗನನ್ನು ಅಜ್ಜಿಗೆ ಸಾಕಿಕೊಳ್ಳಲು ನೀಡಿದ್ದರಂತೆ. ಮಂಗಳೂರಿನಲ್ಲಿ ಸುಮಾರು ಐದು ವರ್ಷಗಳ ಕಾಲ ಶಾರುಖ್ ಖಾನ್ ನೆಲೆಸಿದ್ದರು. ಆ ಸಮಯದಲ್ಲಿ ಅವರು ಇಲ್ಲಿ ಶಾಲೆಗೆ ಸಹ ಸೇರಿದ್ದರಂತೆ. 1960ರ ಸಮಯದಲ್ಲಿ ಶಾರುಖ್ ಖಾನ್ ಅವರ ತಾತ ಮಂಗಳೂರಿನ ಬಂದರಿನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಿ ಶಾರುಖ್ ಖಾನ್ ಸಹ ಇಲ್ಲಿಯೇ ಇದ್ದರು.

ಇದನ್ನೂ ಓದಿ:ಮರಾಠಿ ಸಿನಿಮಾದ 42 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಿದ ಶಾರುಖ್ ಖಾನ್

ಮಂಗಳೂರಿಗೆ ಬಂದಿದ್ದ ಶಾರುಖ್ ಖಾನ್, ‘ನಮಸ್ಕಾರ ಕುಡ್ಲ, ಎಂಚ ಉಲ್ಲಾರ್’ ಎಂದು ತುಳುವಿನಲ್ಲೇ ಮಾತು ಆರಂಭಿಸಿದರು. ಮಂಗಳೂರು ಒಂದು ಸುಂದರ ನಗರ, ನಾನು ವಿಮಾನ ನಿಲ್ದಾಣದಿಂದ ಇಲ್ಲಿಯವರೆಗೆ ಬರುವವರೆಗೆ ನೀವು ಪ್ರೀತಿಯನ್ನು ಸುರಿಸಿದ್ದೀರಿ, ಅದಕ್ಕೆ ಧನ್ಯವಾದ. ನನಗೆ ಮಂಗಳೂರಿನಲ್ಲಿ ಸಮಯ ಕಳೆಯಲು ಇಷ್ಟ, ಜೊತೆಗೆ ಇಲ್ಲಿನ ನೀರು ದೋಸೆಯೂ ಬಹಳ ಇಷ್ಟ. ಮಂಗಳೂರು ತನ್ನ ವಿಭಿನ್ನ ಸಂಸ್ಕೃತಿಯಿಂದ ಗಮನ ಸೆಳೆಯುತ್ತದೆ. ಮಂಗಳೂರಿನ ಹಲವರು ಮುಂಬೈ ಜೊತೆಗೂ ಬಹಳ ಆಪ್ತ ನಂಟು ಹೊಂದಿದ್ದಾರೆ’ ಎಂದರು.

‘ಮಂಗಳೂರಿನಲ್ಲಿ ತಾವು ಕಳೆದ ದಿನಗಳ ಬಗ್ಗೆ ಮಾತನಾಡಿದ ಶಾರುಖ್ ಖಾನ್, ‘ನನ್ನ ತಾತ ಇಲ್ಲಿ ಎಂಜಿನಿಯರ್ ಆಗಿದ್ದರು. ಆಗಿನ್ನೂ ನಾನು ಬಹಳ ಚಿಕ್ಕವನು, ಅದರ ಹೆಚ್ಚು ನೆನಪುಗಳು ನನಗೆ ಇಲ್ಲ, ಆದರೆ ಇಲ್ಲಿ ತೆಗೆದ ಕೆಲವು ಚಿತ್ರಗಳು ನನ್ನ ಬಳಿ ಇವೆ. ಎಂದು ಹೇಳಿ ಚಿತ್ರಗಳನ್ನು ಸಹ ಅವರು ತೋರಿಸಿದರು. ತಾವು ನಟನೆಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ, ತಾನು ಮಂಗಳೂರಿನ ನಗರದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ ಎಂದ ಶಾರುಖ್. ‘ಮಕ್ಕಳಿಗೆ ಪಾಠ ಮಾಡುವುದು ಎಂದರೆ ನಮಗೆ ತುಂಬಾ ಇಷ್ಟ, ನಟನಾಗದೇ ಇದ್ದಿದ್ದೆ, ನಾನು ಇಲ್ಲಿ ಸೇಂಟ್ ಅಲೋಷಿಯಸ್, ಮೌಂಟ್ ಕಾರ್ಮಲ್ ಅಥವಾ ಶಾರದಾ ವಿದ್ಯಾ ಮಂದಿರದಲ್ಲಿ ಶಿಕ್ಷಕನಾಗಿ ಇರುತ್ತಿದ್ದೆ. ಮತ್ತು ಆ ಕೆಲಸದಲ್ಲಿ ನಾನು ತುಂಬಾ ಸಂತೋಷವಾಗಿರುತ್ತಿದ್ದೆ’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Fri, 26 June 26

Follow Us
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ